ಸುಳ್ಯ : ಸುಳ್ಯದ ಬಹುಕಾಲದ ಬೇಡಿಕೆಯಾದ 110 ಕೆ.ವಿ.ವಿದ್ಯುತ್ ಲೈನ್ ಎಳೆಯಲು ಬೇಕಾಗುವಷ್ಟು ಭೂಮಿ ನೀಡುವುದಕ್ಕೆ ಅರಣ್ಯ ಇಲಾಖೆಯ ಅನುಮತಿ ದೊರೆತಿದೆ. ಇದರಿಂದ 110 ಕೆ.ವಿ.ವಿದ್ಯುತ್ ಲೈನ್ ಮತ್ತು ಸಬ್‍ಸ್ಟೇಷನ್ ನಿರ್ಮಾಣ ಕಾರ್ಯ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದು ಶಾಸಕ ಎಸ್.ಅಂಗಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅರಣ್ಯ ಇಲಾಖೆ ಸರ್ವೆ ನಡೆಸಿ ಭೂಮಿ ಹಸ್ತಾಂತರ ಪ್ರಕ್ರಿಯೆ ನಡೆಸಲಿದೆ. ಬಳಿಕ ಟೆಂಡರ್ ನಡೆಯಲಿದೆ. ಮಾಡಾವಿನಲ್ಲಿರುವ 110 ಕೆ.ವಿ.ಸಬ್‍ಸ್ಟೇಷನ್ ನಿರ್ಮಾಣ ಆಗಸ್ಟ್ ಒಳಗೆ ಪೂರ್ತಿಯಾಗಲಿದೆ ಎಂದು ಅವರು ಹೇಳಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel