ಅಡಿಕೆಯ ಬಗ್ಗೆ ಕಳೆದ ಕೆಲವು ದಿನಗಳಿಂದ ಚರ್ಚೆ ಆರಂಭವಾಗಿದೆ. ಅಡಿಕೆ ಆಮದು, ಎಲೆಚುಕ್ಕಿ ರೋಗ, ಹಳದಿ ಎಲೆರೋಗ, ಧಾರಣೆ ಕುಸಿತ.. ಹೀಗೇ ಆದರೂ ಅಡಿಕೆ ಬೆಳೆಗಾರರ ಪರವಾಗಿ ಗಟ್ಟಿ ಧ್ವನಿ ಎತ್ತುವವರು ಕಾಣುತ್ತಿಲ್ಲ. ಇದಕ್ಕಾಗಿಯೇ ಈಗ ಬೆಳೆಗಾರರೇ ಮಾತನಾಡಬೇಕಾದ ಸ್ಥಿತಿ ಬಂದಿದೆ…
ದೇಶದಲ್ಲಿ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಅಡಿಕೆ ಬೆಳೆಯದು ಅಲ್ಲದೇ ಆಹಾರ ಧಾನ್ಯ ಬೆಳೆಯಲೆಂದು ಅಮೂಲ್ಯ ಅರಣ್ಯ ವನ್ನು ಮುಳುಗಡೆ ಮಾಡಿ ಬಯಲು ಸೀಮೆಯ ಪ್ರದೇಶಕ್ಕೆ ನೀರು ಹರಿಸಿ ಲಕ್ಷಾಂತರ ಎಕರೆ ಅಡಿಕೆ ತೋಟದಲ್ಲಿ ಅಡಿಕೆ ಬೆಳೆದ ಅಡಿಕೆ ಬೆಳೆಯೂ ಇದೇ ಬಗೆಯಲ್ಲಿ ವಿದೇಶದಿಂದ ಅಡಿಕೆ ಆಮದಾದರೆ ಬೆಲೆ ಕಳೆದುಕೊಳ್ತದೆ….
ಪ್ರತಿ ಸತಿಯೂ ಐವತ್ತು ನೂರು ಟನ್ ಅಕ್ರಮ ಅಡಿಕೆ ದೇಶದೊಳಗೆ ಬಂದಾಗ ಅಡಿಕೆ ಬೆಳೆಗಾರರು ಮಂಡೆ ಬಿಸಿ ಮಾಡಕೋತೀವಿ.. ಈ ಸತಿ ನಾವು ಅಡಿಕೆ ಬೆಳೆಗಾರರ ಹಾರ್ಟೇ ಫೈಲ್ ಆಗೋ ಪ್ರಮಾಣದ ಅಡಿಕೆ ವಿದೇಶದಿಂದ ಆಮದು ಆಗುತ್ತದೆ…
ಅಡಿಕೆ ಬೆಳೆಗಾರರ ಕ್ಷೇತ್ರದ ಶಾಸಕರು ಸಂಸದರು ಏನು ಮಾಡುತ್ತಿದ್ದಾರೆ…? ಯಾಕೆ ಈ ಅಕ್ರಮ ಆಮದಿನ ರೋಗಕ್ಕೆ ಒಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸಾದ್ಯವಿಲ್ಲ…? ನನ್ನ ತಿನ್ನುವ ಅನ್ನದ ಮೂಲ ಅಡಿಕೆ ಉತ್ಪನ್ನ. ಒಂದೆಡೆ ಎಲೆಚುಕ್ಕಿ ರೋಗದ ಆತಂಕ. ಇನ್ನೊಂದೆಡೆ ಬರಗಾಲ…!??
ಇನ್ನೊಂದು ಕಡೆ ದಿನ ದಿನಕ್ಕೂ ಅಡಿಕೆ ಬೆಲೆ ಕುಸಿತ…ಅಡಿಕೆ ಆಮದು ತಡೆ ಮಾಡಲು ಸಾದ್ಯವಿಲ್ಲ ಎನ್ನುವುದು ಈ ಕೇಂದ್ರ ಸರ್ಕಾರಕ್ಕೆ ಅಡಿಕೆ ಬೆಳೆಗಾರರ ಕ್ಷೇತ್ರದ ಬಗ್ಗೆ ಇರುವ ಅಸಡ್ಡೆ ನಿರ್ಲಕ್ಷ್ಯ, ಈ ಕ್ಷೇತ್ರದಲ್ಲಿ ಅವರು ಎಷ್ಟೇ ನಿರ್ಲಕ್ಷ್ಯ ಮಾಡಿದರೂ ಅವರಿಗೇ ಓಟ್ ಹಾಕ್ತೀವಿ ಎನ್ನುವ ನಿರ್ಲಕ್ಷ್ಯ ಈ ತರಹದ ಬೆಳವಣಿಗೆಗೆ ಕಾರಣ. ಕೋಟ್ಯಂತರ ಅಡಿಕೆ ಬೆಳೆಗಾರರ ಕುಟುಂಬದ ಕಾಳಜಿ ಭವಿಷ್ಯದ ಬಗ್ಗೆ ಚಿಂತನೆ ಗಿಂತ ಯಾರೋ ನಾಲ್ಕಾರು ಗುಟ್ಕಾ ದೊರೆಗಳ ದುಡ್ಡೇ ಮುಖ್ಯ ವಾಯಿತಾ…? ಚುನಾವಣೆ ಹತ್ತಿರ ಬರುತ್ತಿದೆ…
ಅಡಿಕೆ ಬೆಳೆಗಾರ ತನ್ನ ಭವಿಷ್ಯದ ಬಗ್ಗೆ ಯೋಚಿಸುವ ಸಮಯ ಬಂದಿದೆ. ಈ ಚುನಾವಣೆಯಲ್ಲಿ ಈ ಅಡಿಕೆ ಎಲೆಚುಕ್ಕಿ ರೋಗ ಅಡಿಕೆ ಹಳದಿ ಎಲೆ ರೋಗ ಅಡಿಕೆ ವಿಸ್ತರಣೆ ರೋಗ ಮತ್ತು ಅಡಿಕೆ ಆಮದು ರೋಗಕ್ಕೆ ಶಾಶ್ವತವಾದ ಪರಿಹಾರ ಒದಗಿಸುವ ನಾಯಕ/ಪಕ್ಷ ಕ್ಕೆ ನನ್ನ ಓಟು. ಇದೆಲ್ಲಾ ಬಗೆಹರಿಯದ ಅಥವಾ ಲಕ್ಷಾಂತರ ಕೋಟಿ ವ್ಯವಹಾರ ಮಾಡುವ ಸರ್ಕಾರಕ್ಕೆ ಪರಿಹಾರ ಮಾಡಲಾಗದ ಸಮಸ್ಯೆ ಅಲ್ಲ…..
ಅವೇಕೆ ನಮ್ಮ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡ್ತಾವೆ ಎಂದರೆ ನಾವು ಅವರಿಗೇ ಓಟು ಹಾಕಿ ಅವರನ್ನೇ ಪ್ರೋತ್ಸಾಹ ಮಾಡ್ತೀವಿ ಎನ್ನುವ ನಂಬಿಕೆ…. ಇದು ಖಂಡಿತವಾಗಿಯೂ ಒಳ್ಳೆಯದಲ್ಲ…ಅಡಿಕೆ ಬೆಳೆಗಾರರೇ ಈ ನಿರ್ಲಕ್ಷ್ಯ ಅಸಡ್ಡೆ ಯ ವಿರುದ್ಧ ನಿಮ್ಮ ನಿಮ್ಮ ವೇದಿಕೆಯಲ್ಲಿ ಧನಿ ಎತ್ತಿ ನಮ್ಮ ಉಳಿಸಿಕೊಳ್ಳೋಣ.