ಹೆಚ್ಚುತ್ತಿದೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ | ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷಕ್ಕಿಂತ 30% ಹೆಚ್ಚಳ |

July 24, 2023
4:18 PM
2021 ಕ್ಕೆ ಹೋಲಿಸಿದರೆ 2022 ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 30% ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗ NWC ವರದಿ ನೀಡಿದೆ.

ಭಾರತ  ದೇಶ ಹೆಣ್ಣುಮಕ್ಕಳನ್ನು ಪೂಜಿಸುವಂತ ಸಂಸ್ಕೃತಿಯನ್ನು ಹೊಂದಿರುವಂತ ದೇಶ. ಆದರೆ ಹೆಣ್ಣು ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಬದುಕುವ ಹಕ್ಕನ್ನೇ ಕಳೆದುಕೊಳ್ಳುತ್ತಿದ್ದಾಳೆ ಅನ್ನುವಂತ ಘಟನೆಗಳು ನಡೆಯುತ್ತಿವೆ. ದಿನದಿಂದ ದಿನಕ್ಕೆ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇದೆ. ಮಣಿಪುರ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಬಳಿಕ ದೇಶದ್ಯಾಂತ ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆ ಶುರುವಾಗಿರುವ ಹೊತ್ತಲ್ಲೇ ದೊಡ್ಡ ಆಘಾತ ಮೂಡಿಸುವಂತ  ಅಂಕಿ ಅಂಶಗಳು  ಬಿಡುಗಡೆಯಾಗಿದೆ.

Advertisement

2021 ಕ್ಕೆ ಹೋಲಿಸಿದರೆ 2022ರಲ್ಲಿ ಮಹಿಳೆಯರ #Women ಮೇಲಿನ ದೌರ್ಜನ್ಯ ಪ್ರಕರಣಗಳು 30% ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗ #NWC ವರದಿ ನೀಡಿದೆ. 2021 ರಲ್ಲಿ ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗದಲ್ಲಿ 23,700 ಪ್ರಕರಣಗಳು ದಾಖಲಾಗಿದ್ದವು, 2022 ರಲ್ಲಿ ಇದು 30,957ಕ್ಕೆ ಏರಿಕೆಯಾಗಿದೆ. 2014ರಲ್ಲಿ 33,906 ಪ್ರಕರಣಗಳು ದಾಖಲಾಗಿರುವುದು ಈವರೆಗೂ ಅತಿ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಆಯೋಗ ಬಿಡುಗಡೆ ಮಾಡಿರುವ ಮಾಹಿತಿ ಹೇಳಿದೆ.

2022 ರಲ್ಲಿ ಮಹಿಳಾ ಆಯೋಗದಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳ ಪೈಕಿ 54.5% ರಷ್ಟು (16,872) ಪ್ರಕರಣಗಳು ಉತ್ತರ ಪ್ರದೇಶದಿಂದ ದಾಖಲಾಗಿದೆ. ದೆಹಲಿಯಿಂದ 3,004 (10%), ಮಹಾರಾಷ್ಟ್ರದಿಂದ 1,381 (5%), ಬಿಹಾರದಿಂದ 1,368 (4.4%), ಹರಿಯಾಣದಲ್ಲಿ 1,362 (4.4%), ರಾಜಸ್ಥಾನ 1,030 (3.3%), ತಮಿಳುನಾಡು 668 (2.2%), ಪಶ್ಚಿಮ ಬಂಗಾಳ 621 (2%), ಕರ್ನಾಟಕದಿಂದ 554 (1.8%) ಮತ್ತು ಉಳಿದ ರಾಜ್ಯಗಳು 2,955 (9.5%) ಪ್ರಕರಣಗಳು ದಾಖಲಾಗಿವೆ. ಈ ದೂರುಗಳಲ್ಲಿ ಹೆಚ್ಚಿನವು ಭಾವನಾತ್ಮಕ ನಿಂದನೆ ಮತ್ತು ಕೌಟುಂಬಿಕ ಹಿಂಸಾಚಾರದ ಹಿನ್ನೆಲೆಯದಾಗಿದೆ. ಘನತೆಯಿಂದ ಬದುಕುವ ಹಕ್ಕು ವಿಭಾಗದಲ್ಲಿ ಒಟ್ಟು 9,710 ದೂರುಗಳು, 6,970 ದೂರುಗಳು ಮಹಿಳೆಯರ ರಕ್ಷಣೆ, ಕೌಟುಂಬಿಕ ದೌರ್ಜನ್ಯದ ವಿರುದ್ಧ ಮತ್ತು 4,600 ದೂರುಗಳು ವಿವಾಹಿತ ಮಹಿಳೆಯರ ಕಿರುಕುಳ/ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ದಾಖಲಾಗಿವೆ.

 

2,500 ಕ್ಕೂ ಹೆಚ್ಚಿನ ದೂರುಗಳನ್ನು ‘ಮಹಿಳೆ ಅಥವಾ ಕಿರುಕುಳದ ದೌರ್ಜನ್ಯ’ ವಿಭಾಗದ ಅಡಿಯಲ್ಲಿ ದಾಖಲಿಸಿದೆ. 1,701 ದೂರುಗಳು ‘ಅತ್ಯಾಚಾರ/ಅತ್ಯಾಚಾರದ ಪ್ರಯತ್ನ’ ಅಡಿಯಲ್ಲಿ, 1,623 ದೂರುಗಳು ‘ಮಹಿಳೆಯರ ಪ್ರಕರಣದಲ್ಲಿ ಪೊಲೀಸ್ ನಿರಾಸಕ್ತಿ’ ಅಡಿಯಲ್ಲಿ ಮತ್ತು 924 ದೂರುಗಳು ‘ಸೈಬರ್ ಅಪರಾಧಗಳ’ ಅಡಿಯಲ್ಲಿ ದಾಖಲಾಗಿವೆ.

Advertisement

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, 2022 ರಲ್ಲಿ ‘ವಿವಾಹಿತ ಮಹಿಳೆಯರಿಗೆ ಕಿರುಕುಳ/ವರದಕ್ಷಿಣೆ ಕಿರುಕುಳ’ ಅಡಿಯಲ್ಲಿ 357 ದೂರುಗಳ ಡೇಟಾವನ್ನು ಪ್ರಸ್ತುತಪಡಿಸಿದರು. 2021 ರಲ್ಲಿ 341 ಮತ್ತು 2020 ರಲ್ಲಿ 330 ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದರು.  ಕಳೆದ 3 ವರ್ಷ ಹಾಗೂ ಪ್ರಸುತ್ತ ವರ್ಷದಲ್ಲಿ ಆಯೋಗದಲ್ಲಿ ‘ವರದಕ್ಷಿಣೆ’ ಮತ್ತು ‘ಅತ್ಯಾಚಾರ ಅಥವಾ ಅತ್ಯಾಚಾರ ಯತ್ನ’ ವಿಭಾಗಗಳ ಅಡಿಯಲ್ಲಿ ದಾಖಲಾದ ದೂರುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಕೇಂದ್ರ ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ. ನ್ಯಾಯಾಲಯಗಳು 1,44,000 ಕ್ಕೂ ಹೆಚ್ಚು ದೂರುಗಳನ್ನು ವಿಲೇವಾರಿ ಮಾಡಿದೆ, 1,98,000 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ.

Source : Online

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಶಕ್ತಿ ವಸತಿ ಶಾಲೆಯಲ್ಲಿ ಗುರು ಪೂರ್ಣಿಮೆ | ದೇವರು ಹಾಗೂ ಗುರು ಇಬ್ಬರೂ ಪೂಜೆಗೆ ಯೋಗ್ಯ
July 10, 2025
8:04 PM
by: The Rural Mirror ಸುದ್ದಿಜಾಲ
ಭಾರತತ್ವವನ್ನೇ ಕಳೆದುಕೊಂಡು ಯಾವ ಸಾಧನೆಯೂ ಮಾಡಲಾಗದು – ರಾಘವೇಶ್ವರ ಶ್ರೀ
July 10, 2025
7:42 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 10-07-2025 | ಮುಂದಿನ 10 ದಿನಗಳವರೆಗೂ ಸಾಮಾನ್ಯ ಮಳೆ | ಜು.16 ರಿಂದ ಎಲ್ಲೆಲ್ಲಿ ಮಳೆಯಾಗುವ ಸಾಧ್ಯತೆ..?
July 10, 2025
2:11 PM
by: ಸಾಯಿಶೇಖರ್ ಕರಿಕಳ
ಮುಂದಿನ 7 ದಿನಗಳ ಉತ್ತಮ ಮಳೆ – ಹವಾಮಾನ ಇಲಾಖೆ
July 10, 2025
8:26 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group