ಕರ್ನಾಟಕದಲ್ಲೂ ಚೆಸ್‌ ಪ್ರತಿಭೆಗಳಿದ್ದಾರೆ | ಗ್ರಾಮೀಣ ಭಾಗದಲ್ಲೂ ಚೆಸ್‌ ಬೆಳೆಯಬೇಕು |”ಚೆಸ್‌ ಇನ್‌ ಸ್ಕೂಲ್”‌ ಆರಂಭವಾಗಲಿ |

ಪ್ರತೀ ಮಗುವಿಗೂ ಚೆಸ್‌ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಚೆಸ್‌ ತರಬೇತಿ ನೀಡುವ ಬಗ್ಗೆ ರಾಜ್ಯ ಚೆಸ್‌ ಎಸೋಸಿಯೇಶನ್‌ ಈಗಾಗಲೇ ಶುರು ಮಾಡಿದೆ. ತುಮಕೂರು, ಶಿವಮೊಗ್ಗದಲ್ಲಿ ಈ ಪ್ರಯತ್ನ ನಡೆಯುತ್ತಿದೆ.  ಇದು ವ್ಯಾಪಕವಾಗಬೇಕು, ಎಲ್ಲಾ ಜಿಲ್ಲೆಗಳಲ್ಲೂ ಆರಂಭವಾಗಬೇಕು ಎಂಬುದು ಎಸೋಸಿಯೇಶನ್‌ ಉದ್ದೇಶ. “ಚೆಸ್‌ ಇನ್‌ ಸ್ಕೂಲ್”ಗಾಗಿ ಸಮಿತಿಯೂ ರಚನೆ ಆಗಿದೆ.