Advertisement
ಸುದ್ದಿಗಳು

ಸಾವಯವ ಕೃಷಿ ಮಾಡುವ ರೈತರಿಗೆ ಸಿಹಿ ಸುದ್ದಿ | ಎಲ್ಲಾ ಗೊಬ್ಬರ, ಕೀಟನಾಶಕಗಳಿಗೆ ಸಬ್ಸಿಡಿ

Share

ರೈತರಿಗೆ ಸಿಹಿ ಸುದ್ದಿ:ಎಲ್ಲಾ ಗೊಬ್ಬರ, ಕೀಟನಾಶಕಗಳಿಗೆ ಸಬ್ಸಿಡಿ :  ಆರಂಭವಾಗಿದೆ ರೈತರಿಗಾಗಿ ಹೊಸ ಯೋಜನೆ

Advertisement
Advertisement
Advertisement

ಸರ್ಕಾರ ರೈತರಿಗಾಗಿ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಲೇ ಇರುತ್ತದೆ. ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅಂತಹ ಯೋಜನೆಗಳಲ್ಲಿ ಪರಂಪರಾಗತ್‌ ಯೋಜನೆ ಕೂಡ ಒಂದು. ಕೇಂದ್ರ ಸರ್ಕಾರವು ದೇಶದ ಕೃಷಿ ಕ್ಷೇತ್ರ ಮತ್ತು ಎಲ್ಲಾ ರೈತರ ಸುಧಾರಣೆಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಸಾವಯವ ಕೃಷಿ ಮಾಡವ ರೈತರಿಗೆ ಸರ್ಕಾರ ಉತ್ತೇಜನ ನೀಡಲಿದೆ. ಕೇಂದ್ರ ಸರ್ಕಾರ ಪರಂಪರಾಗತ್ ಕೃಷಿ ವಿಕಾಸ್ ಯೋಜನೆ 2023ರ ಯೋಜನೆ ಅಡಿಯಲ್ಲಿ ಈ ಸೌಲಭ್ಯವನ್ನು ಎಲ್ಲಾ ರೈತ ಫಲಾನುಭವಿಗಳಿಗೆ ನೀಡಲಿದೆ. ಈ ಯೋಜನೆಯ ಮೂಲಕ ಎಲ್ಲಾ ರೈತರನ್ನು ಸಾವಯವ ಕೃಷಿ ಮಾಡಲು ಪ್ರೋತ್ಸಾಹಿಸಲಾಗುವುದು.

Advertisement

ಯೋಜನೆಯ ಪ್ರಯೋಜನಗಳನ್ನು ನೋಡೋದಾದ್ರೆ

  • PKVY ಮೂಲಕ ಮಣ್ಣಿನ ಗುಣಮಟ್ಟ ಉತ್ತಮವಾಗಿರುತ್ತದೆ ಮತ್ತು ಫಲವತ್ತತೆ ಹೆಚ್ಚಾಗುತ್ತದೆ.
  • ಕೃಷಿ ಕ್ಷೇತ್ರದಲ್ಲಿ ಈ ಯೋಜನೆಯಿಂದ ರೈತರ ಆದಾಯವೂ ಸುಧಾರಿಸುತ್ತದೆ.
  • ಈ ಯೋಜನೆಯಡಿ ಪಡೆದ ಪ್ರೋತ್ಸಾಹಧನವು ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹೋಗುತ್ತದೆ.
  • ದೇಶದ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50,000ಪ್ರಕಾರ 3 ವರ್ಷಗಳ ಅವಧಿಗೆ ಈ ಯೋಜನೆಯಡಿ ಸಹಾಯವನ್ನು ನೀಡಲಾಗುತ್ತದೆ.
  • ರೈತರಿಗೆ ಸಾವಯವ ಗೊಬ್ಬರ, ಬೀಜ ಮತ್ತು ಕೀಟನಾಶಕಗಳಿಗೆ 31 ಸಾವಿರ ರೂ.
  • ಮೌಲ್ಯವರ್ಧನೆ ಮತ್ತು ವಿತರಣೆಗೆ ರೂ.8800 ನೀಡಲಾಗುವುದು.

 PKVY ಅರ್ಹತೆಗಳು:

Advertisement
  • ಯೋಜನೆಯಡಿ ಅರ್ಜಿದಾರರು ರೈತ ವರ್ಗದಿಂದ ಮಾತ್ರ ಇರಬೇಕು.
  • ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
  • ಈ ಯೋಜನೆಯಲ್ಲಿ ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು.

ಈ ಯೋಜನೆ ಪಡೆದುಕೊಳ್ಳಲು ನೀವು ಸಲ್ಲಿಸಬೇಕಾದ ದಾಖಲೆಗಳು :

  • ಮೂಲ ವಿಳಾಸ ಪುರಾವೆ
  • ಆಧಾರ್ ಕಾರ್ಡ್
  • ಪಡಿತರ ಚೀಟಿ
  • ಜನನ ಪ್ರಮಾಣಪತ್ರ
  • ಮೊಬೈಲ್ ನಂಬರ
  • ವಯಸ್ಸಿನ ಪ್ರಮಾಣಪತ್ರ / ಜನನ ಪ್ರಮಾಣಪತ್ರ
  • ಪಾಸ್ಪೋರ್ಟ್ ಗಾತ್ರದ ಫೋಟೋ
  • ಬ್ಯಾಂಕ್ ಖಾತೆ ಹೇಳಿಕೆ

ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಹಾಗೆಯೆ ಅಧಿಕೃತ ವೆಬ್ಸೈಟ್‌ https://pgsindia-ncof.gov.in/PKVY/Index.aspx# ನಲ್ಲೂ ನೀವು ಮಾಹಿತಿ ಹಾಗೂ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಾವಯವ ಕೃಷಿ ಎಂದರೆ ಏನು..?

https://youtu.be/VwddfpkQ94Y?si=LMz9u08OYbG4B2il

1 hour ago

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |

ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…

1 hour ago

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

20 hours ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

20 hours ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

21 hours ago

ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ

ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…

21 hours ago