ಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋ ಹಗ್ಗ-ಜಗ್ಗಾಟ | ಅನುಮತಿ ನಿರಾಕರಿಸಿ ಪೊಲೀಸ್ ಆಯುಕ್ತರ ಆದೇಶ

October 10, 2023
10:21 PM
ಮೈಸೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋ ಎರಡೂ ಕಾರ್ಯಕ್ರಮಗಳಿಗೂ ಅನುಮತಿ ನಿರಾಕರಣೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ದಸರಾ ಹಬ್ಬ ಬಂದಾಗ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರ ಆಚರಣೆಯ ಕೂಗು ಕೇಳಿಬರುತ್ತದೆ. ಒಂದಷ್ಟು ಪರ ವಿರೋಧ ಚರ್ಚೆಗಳು ನಡೆದು ದಸರಾ ಮುಗಿಯುವ ವೇಳೆಗೆ ತಣ್ಣಗಾಗುತ್ತದೆ. ಈ ಬಾರಿಯೂ ಮಹಿಷಾ ದಸರ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋ ಮಾಡಲು ಹೊರಟಿದ್ದ ಎರಡು ತಂಡಗಳಿಗೆ ಅನುಮತಿ ನಿರಾಕರಿಸಿ ಮೈಸೂರು ಪೊಲೀಸ್ ಆಯುಕ್ತ ಬಿ.ರಮೇಶ್ ಮಂಗಳವಾರ ಆದೇಶ ಹೊರಡಿಸಿದ್ದಾರೆ.

Advertisement

ಮೈಸೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡೂ ಕಾರ್ಯಕ್ರಮಗಳಿಗೂ ಅನುಮತಿ ನಿರಾಕರಣೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಅ. 13ರಂದು ಮಹಿಷ ದಸರಾ ಆಚರಣೆಗೆ ಮಹಿಷ ದಸರಾ ಆಚರಣಾ ಸಮಿತಿ ಅನುಮತಿ ಕೋರಿತ್ತು. ಮತ್ತೊಂದು ಕಡೆ ಚಲೋ-ಚಾಮುಂಡಿ ಬೆಟ್ಟ ಕಾರ್ಯಕ್ರಮಕ್ಕೆ ಬಿಜೆಪಿ ನಗರ ಸಮಿತಿ ಅನುಮತಿ ಕೋರಿತ್ತು. ʼʼಮೇಲ್ಕಂಡ ಎರಡೂ ಕಾರ್ಯಕ್ರಮಗಳಗೆ ಅನುಮತಿ ನೀಡಿದಲ್ಲಿ ಮೈಸೂರು ನಗರದ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳು ಇರುವುದರಿಂದ ಎರಡು ಕಾರ್ಯಕ್ರಮಗಳಿಗೆ ಪೊಲೀಸ್ ಅನುಮತಿಯನ್ನು ನಿರಾಕರಣೆ ಮಾಡಲಾಗಿದೆʼʼ ಎಂದು ಮೈಸೂರು ನಗರ ಪೊಲೀಸ್ ಅಯುಕ್ತ ಬಿ.ರಮೇಶ್‌ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದ್ದ ಮಹಿಷ ದಸರಾ ಹಾಗೂ ಇದನ್ನು ವಿರೋಧಿಸಿ ಸಂಸದ ಪ್ರತಾಪ್‌ ಸಿಂಹ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮಗಳಿಗೆ ಅನುಮತಿಯನ್ನು ಕೇಳಲಾಗಿತ್ತು. ಆದರೆ, ಇವರೆಡೂ ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಕುಂದು ತರಬಹುದೆಂಬ ಲೆಕ್ಕಾಚಾರದಿಂದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಎರಡೂ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನಿರಾಕರಣೆ ಮಾಡಿದ್ದಾರೆ.

ಈ ಮೂಲಕ ಮಹಿಷ ದಸರಾ ಆಚರಣಾ ಸಮಿತಿಗೆ ಹಾಗೂ ಚಾಮುಂಡಿ ಚಲೋಗೂ ಅನುಮತಿ ಇಲ್ಲ. ಅ.13 ರಂದು ಮಹಿಷ ದಸರಾ ಆಚರಣೆ ಹಿನ್ನೆಲೆಯಲ್ಲಿ ಬೆಳಗ್ಗೆ 9-30 ಗಂಟೆಗೆ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ತೀರ್ಮಾನ ಮಾಡಲಾಗಿದೆ. ಚಾಮುಂಡಿ ಬೆಟ್ಟದ ತಪ್ಪಲಿನ ಮುಖ್ಯದ್ವಾರ ತಾವರೆಕಟ್ಟೆ ಬಳಿಯಿಂದ ಜಾಥ ಹೊರಡಲಾಗುತ್ತದೆ. ಮತ್ತೊಂದೆಡೆ ಬಿಜೆಪಿ ಮಹಿಷ ದಸರಾ ಆಚರಣೆ ವಿರೋಧಿಸಿತ್ತು. ಅ.13 ರಂದು ಬೆಳಗ್ಗೆ 8 ಗಂಟೆಗೆ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿತ್ತು. ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹತ್ತುವುದು. ವಾಹನಗಳಲ್ಲಿ ರಸ್ತೆಯ ಮುಖಾಂತರ ಚಾಮುಂಡಿ ಬೆಟ್ಟಕ್ಕೆ ತೆರಳುವುದು. ಚಾಮುಂಡಿ ಬೆಟ್ಟದಲ್ಲಿ ಚಲೋ‌ ನಡೆಸಲು ತೀರ್ಮಾನಿಸಿತ್ತು. ಇಲ್ಲಿ ಗಲಭೆಗಳಾಗುವ ಮುನ್ಸೂಚನೆಯಿಂದ ಎರಡು ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಣೆ ಮಾಡಲಾಗಿದೆ. ಮೈಸೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡೂ ಕಾರ್ಯಕ್ರಮಗಳಿಗೂ ಅನುಮತಿ ನಿರಾಕರಣೆ. ಮೈಸೂರು ನಗರದ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಮಹಿಷ ದಸರಾ- ಚಾಮುಂಡಿ ಚಲೋಗೆ ಬ್ರೇಕ್ ಹಾಕಲಾಗಿದೆ.

– ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೆಳಗಾವಿಯಲ್ಲಿ 3 ದಿನಗಳ ಮಾವು, ಜೇನು ಮೇಳ | ರೈತರಿಂದ ಪ್ರದರ್ಶನ, ಗ್ರಾಹಕರಿಗೆ ನೇರ ಮಾರಾಟ
April 26, 2025
9:54 PM
by: The Rural Mirror ಸುದ್ದಿಜಾಲ
ದೇಶಾದ್ಯಂತ 47 ಸ್ಥಳಗಳಲ್ಲಿ ಉದ್ಯೋಗ ಮೇಳ | 51000 ನವ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಣೆ
April 26, 2025
9:12 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 26-04-2025 | ಸಂಜೆ ಗುಡುಗು ಸಹಿತ ಮಳೆ ಸಾಧ್ಯತೆ |
April 26, 2025
1:58 PM
by: ಸಾಯಿಶೇಖರ್ ಕರಿಕಳ
ಚಿಕ್ಕಬಳ್ಳಾಪುರ ಜಿಲ್ಲೆ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ 2863 ಎಕರೆ ಭೂಮಿ
April 26, 2025
9:21 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group