ಚುನಾವಣಾ ಕಣ | ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ | ಪ್ರಧಾನಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟ ಕಾಂಗ್ರೆಸ್‌ ಅಭ್ಯರ್ಥಿ |

April 13, 2024
2:21 PM

ಲೋಕ ಸಮರದ ಜಿದ್ದಾ ಜಿದ್ದಿನಲ್ಲಿ ಅಭ್ಯರ್ಥಿಗಳಿಗಿಂತ(Candidate) ಹೆಚ್ಚು ಸ್ಟಾರ್‌ ಪ್ರಚಾರಕರಿಗೇ(Star Campaigner) ಡಿಮ್ಯಾಂಡ್‌ ಜಾಸ್ತಿ. ಅದರಲ್ಲೂ ಪ್ರಧಾನಿ ಮೋದಿ(PM Modi) ವಿರುದ್ಧ ವಿರೋಧ ಪಕ್ಷಗಳ ಅಭ್ಯರ್ಥಿಗಳು, ನಾಯಕರುಗಳು(Leaders) ಟೀಕೆ ಮಾಡಲು ಕಾಯುತ್ತಿರುತ್ತಾರೆ. ಇದೀಗ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಕರ್ನಾಟಕಕ್ಕೆ(Karnataka) ಭೇಟಿ ನೀಡಲಿದ್ದಾರೆ. ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿಗೆ ಬೆಂಗಳೂರು ಉತ್ತರದ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜೀವ್‌ ಗೌಡ (Rajeev Gowda) ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

Advertisement
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನಾಳೆ ರಾಜ್ಯಕ್ಕೆ ‌ಬರ್ತಿದ್ದಾರೆ. ಅವರು ಬರುವ ಮುನ್ನ ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು. ಬೆಂಗಳೂರಿನಲ್ಲಿ ನೀರನ ಸಮಸ್ಯೆ ದೊಡ್ಡದಿದೆ. ಮೇಕೆದಾಟಿಗೆ ಪ್ರಪೋಸಲ್ ಕೊಟ್ಟಿದ್ದೆವು. ಯಾಕೆ ಎನ್‌ವಿರಾನ್‌ಮೆಂಟ್‌ ಅಪ್ರೂವಲ್ ಕೊಟ್ಟಿಲ್ಲ. ಕೃಷ್ಣ ಟ್ರಿಬ್ಯೂನಲ್ ಆಗಿ 10 ವರ್ಷ ಆಯ್ತು. ಯಾಕೆ‌ ಗೆಜೆಟ್ ಹೊರಡಿಸಿಲ್ಲ? ಅಪ್ಪರ್ ಭದ್ರಾಗೆ 5,300 ಕೋಟಿ ರೂ. ಘೋಷಿಸಿದ್ರು. ಯಾಕೆ ಇಲ್ಲಿಯವರೆಗೆ ಅದರ ಹಣ ಬಿಡುಗಡೆ ಮಾಡಿಲ್ಲ ಎಂದು ರಾಜೀವ್‌ ಗೌಡ ಕೇಳಿದ್ದಾರೆ.

15 ನೇ ಹಣಕಾಸು ಆಯೋಗದ ರಿಪೋರ್ಟ್ ಏನಿದೆ? ಕರ್ನಾಟಕಕ್ಕೆ 5,400 ಕೋಟಿ ಶಿಫಾರಸು ಮಾಡಿತ್ತು. ಅದರ ಬಗ್ಗೆ ಯಾಕೆ ಚಕಾರವಿಲ್ಲ. ಇಂಪ್ಲಿಮೆಂಟ್ ಮಾಡ್ತೇವೆ ಅಂದವರು ಯಾಕೆ ಮಾಡಿಲ್ಲ? ಫೈನಾನ್ಸ್ ಕಮಿಷನ್ ರೆಕಮೆಂಡೇಷನ್ ಮಾಡಿತ್ತು. ಯಾಕೆ ಹಣವನ್ನ ನಮಗೆ ಬಿಡುಗಡೆ ಮಾಡಿಲ್ಲ? ಪೆರಿಪೆರಲ್ ರಿಂಗ್ ರಸ್ತೆಗೆ ಹಣ ಯಾಕೆ ಕೊಟ್ಟಿಲ್ಲ. ಪ್ರಧಾನಿ, ಸಬರಬನ್ ರೈಲು ಉದ್ಘಾಟಿಸಿದರು. 40 ತಿಂಗಳಲ್ಲಿ ಯೋಜನೆ ಪೂರ್ಣ ಎಂದಿದ್ರಿ. ಈಗ 20 ತಿಂಗಳಾಯ್ತು, ಎಲ್ಲಿ ಹೋಯ್ತು ಯೋಜನೆ? ಬರ ಪರಿಹಾರದ ಬಗ್ಗೆ ಗಮನವೇ ಕೊಟ್ಟಿಲ್ಲ. 223 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಹೆಚ್ಚಿದೆ. ಗ್ರಾಮೀಣ ಭಾಗದ ಜನ ಸಂಕಷ್ಟದಲ್ಲಿದ್ದಾರೆ. ಇಲ್ಲಿಯವರೆಗೆ ಪರಿಹಾರದ ಹಣ ಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ನಾ ಕಾವೂಂಗಾ ನಾ ಕಾನೇ ದೂಂಗಾ ಅಂತೀರ. ನಮ್ಮ ಎಂಪಿಯೊಬ್ಬರ ಮೇಲೆ ಇಡಿ ಕೇಸ್ ಇದೆ. ಅವರನ್ನ ಯಾಕೆ ಸಚಿವ ಸಂಪುಟಕ್ಕೆ ತೆಗೆದುಕೊಂಡ್ರಿ. ಶೋಭಾ ಅವರ ಮೇಲೆ 44 ಕೋಟಿ ರೂ. ಆರೋಪವಿದೆ. ಅವರನ್ನ ಹೇಗೆ ಸಚಿವೆಯನ್ನಾಗಿ ಮಾಡಿದ್ರಿ. ಇದು ನ್ಯಾಯಕ್ಕೆ ವಿರುದ್ಧವಾದುದು. ಶೋಭಾ ಕರಂದ್ಲಾಜೆ ಅವರನ್ನ ತಕ್ಷಣ ಕೆಳಗಿಳಿಸಿ, ಎಲೆಕ್ಟ್ರೋ ಬಾಂಡ್‌ನಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಇಡಿ ರೇಡ್ ಮಾಡಿಸ್ತೀರ. ನಂತರ ಹಣವನ್ನ ಕಲೆಕ್ಟ್ ಮಾಡ್ತೀರ. ಭ್ರಷ್ಟಾಚಾರ ಅಂದ್ರೆ ಮೋದಿ ಸರ್ಕಾರ ಬರುತ್ತೆ. ನಮ್ಮ ರಾಜ್ಯಕ್ಕೆ ಬಂದಾಗ ಉತ್ತರ ಕೊಡಬೇಕು ಎಂದು ಟಾಂಗ್‌ ಕೊಟ್ಟಿದ್ದಾರೆ.

  • ಅಂತರ್ಜಾಲ ಮಾಹಿತಿ
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕದನ ವಿರಾಮ ಘೋಷಣೆ | ಭಾರತ ಮತ್ತು ಪಾಕಿಸ್ತಾನ ಗಡಿಯಾಚೆಗಿನ ದಾಳಿಯನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ
May 10, 2025
7:42 PM
by: The Rural Mirror ಸುದ್ದಿಜಾಲ
ಕೃಷಿಕರ ಸಂಸ್ಥೆ ಕ್ಯಾಂಪ್ಕೊ ವತಿಯಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆ
May 10, 2025
7:05 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 09-05-2025 | ಮೇ14 ರಿಂದ ಉತ್ತಮ ಮಳೆಯ ನಿರೀಕ್ಷೆ ಇದೆ
May 10, 2025
12:20 PM
by: ಸಾಯಿಶೇಖರ್ ಕರಿಕಳ
ಜೂನ್‌ನಿಂದ ಈ 6 ರಾಶಿಯವರ ಅದೃಷ್ಟ ಖುಲಾಯಿಸಲಿದೆ… ಕೋಟ್ಯಾಧಿಪತಿಗಳಾಗುವ ಯೋಗ!
May 10, 2025
8:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group