ಅಡಿಕೆ ಧಾರಣೆ ಏರಿಕೆಗೆ ಕಾರಣ ಇದೆ | ಈಗ ಅಡಿಕೆ ಮಾರುಕಟ್ಟೆಗೆ ಅನ್ವಯಿಸುವ ಸಿದ್ಧಾಂತಗಳು ಯಾವುದು..?

ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ ಇತ್ಯಾದಿ ಸುದ್ದಿಗಳು ಆಗಾಗ್ಗೆ ಹರಿದಾಡುತ್ತಿದೆ. ಈ ವರ್ಷ ಅಡಿಕೆ ಇಳುವರಿ ಎಲ್ಲೆಡೆಯೂ ಕಡಿಮೆಯಾಗಿದೆ. ಹೀಗಿರುವಾಗ ಉತ್ತಮ ಧಾರಣೆ ಬೆಳೆಗಾರರಿಗೆ ಸಿಗಬೇಕು. ಈ ಧಾರಣೆ ನಿರಂತರವೂ ಆಗಿರಬೇಕು, ಬಹುತೇಕ ಸ್ಥಿರಧಾರಣೆಯೂ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಅಡಿಕೆ ಮಾರುಕಟ್ಟೆಯ ಟ್ರೆಂಡ್‌ ಬಗ್ಗೆ ಮಾರುಕಟ್ಟೆ ತಜ್ಞ, ನಿವೃತ್ತ ಉಪನ್ಯಾಸಕ ಡಾ|ವಿಘ್ನೇಶ್ವರ ಭಟ್‌ ವರ್ಮುಡಿ ಅವರು ಇಲ್ಲಿ ಬರೆದಿದ್ದಾರೆ….