ಸಕ್ಕರೆ ಹಿತಮಿತವಾಗಿ ಬಳಸುವುದು ಒಳ್ಳೆಯದು ಏಕೆ…? | ಅತಿಯಾಗಿ ಸಕ್ಕರೆ ಬಳಕೆ ಏನಾಗುತ್ತದೆ….?

October 27, 2023
10:04 PM

ಪ್ರತಿದಿನ ನಾವು ಇಷ್ಟಪಟ್ಟು ತಿನ್ನುವ ಸಿಹಿ ತಿಂಡಿಗಳನ್ನ ತಯಾರಿಸುವುದು ಸಕ್ಕರೆ ಬಳಸಿ. ಪದೇ ಪದೇ ಸಕ್ಕರೆ ಬಳಸಿ ತಯಾರಿಸಿದ ಚಹಾ, ಕಾಫಿ, ಕೂಲ್ಡ್ರೀಂಕ್ಸ್, ಬೇಕರಿ ತಿನಿಸುಗಳನ್ನು ತಿನ್ನುವುದು ಅಪಾಯಕಾರಿ. ನಮ್ಮ ಜೀವನಶೈಲಿಗೆ ತಕ್ಕಂತೆ ಹಿತಮಿತವಾಗಿ ಸಕ್ಕರೆ ಬಳಸುವುದು ಒಳ್ಳೆಯದು ಇಲ್ಲವಾದರೆ ಆರೋಗ್ಯಕ್ಕೆ ಮಾರಕ.

Advertisement
Advertisement

ವಿಶ್ವ ಆರೋಗ್ಯ ಸಂಸ್ಥೆ (WHO) ದಿನಕ್ಕೆ 6 ಚಮಚ ಅಥವಾ 25 ಗ್ರಾಂ ಮಾತ್ರ ಸಕ್ಕರೆ ಬಳಸಲು ಶಿಫಾರಸ್ಸು ಮಾಡಿದೆ. ಹೆಚ್ಚಾದರೆ ಕಾಯಿಲೆ ಖಂಡಿತ. ಭಾರತದಲ್ಲಿ ಸಕ್ಕರೆ ಬಳಕೆಗೆ ಮೊದಲು ನಮ್ಮ ಪೂರ್ವಜರು ಸಂಸ್ಕರಿಸಿದ ಶುದ್ಧ ಬೆಲ್ಲವನ್ನು ಉಪಯೋಗಿಸುತ್ತಿದ್ದರು ಆದ್ದರಿಂದಲೇ ಸಧೃಡವಾಗಿದ್ದರು. ವೈದ್ಯರುಗಳು, ವಿಜ್ಞಾನಿಗಳು ಸಕ್ಕರೆಯನ್ನು “ಬಿಳಿ ವಿಷ” ಎಂದು ಎಚ್ಚರಿಸಿದ್ದಾರೆ. ಹೆಚ್ಚು ಸಕ್ಕರೆ ಸೇವನೆ ನಮ್ಮ ದೇಹವನ್ನು ರೋಗಗಳ ಗೂಡಾಗಿ ಪರಿವರ್ತಿಸುವುದರಲ್ಲಿ ಸಂಶಯವಿಲ್ಲ.
ಸಕ್ಕರೆ ತಯಾರಿಕೆ ಮತ್ತು ಅತೀಯಾದ ಬಳಕೆಯಿಂದಾಗುವ ಅಪಾಯ ತಿಳಿಯೋಣ.

ಸಕ್ಕರೆ ಯಾವುದೇ ಪೋಷಕಾಂಶಗಳು ಇಲ್ಲದ ಬಿಳಿ ಬಣ್ಣದ ಸಿಹಿ ಪದಾರ್ಥ. ಸಕ್ಕರೆ ಬಿಳಿ ಬಣ್ಣಕ್ಕೆ ಬರಲು (ಬ್ಲೀಚ್) “ಸಲ್ಫರ್ ಡೈ ಆಕ್ಸೈಡ್” (sulfur dioxide) ಎಂಬ ಭಾರವಾದ ಮಾರಕ ರಾಸಾಯನಿಕ ಬಳಸುವರು. ಅದೇ ಸಲ್ಫರ್ ಮದ್ದಿನ ಪಠಾಕಿಗಳ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ.‌  ಸಲ್ಫರ್ ರಾಸಾಯನಿಕದಿಂದ ಉಸಿರುನಾಳದ ಊತ (Bronchitis) ದಮ್ಮು (Asthma) ತಿವ್ರವಾಗುವುದು ಮತ್ತು ಹೃದಯ – ರಕ್ತನಾಳಗಳ ಕಾಯಿಲೆಗಳು ಕಾಣಿಸಿಕೊಳ್ಳಬಹುದು.

ಸಕ್ಕರೆ ಸಂಸ್ಕರಿಸಲು ಸಲ್ಫರ್ ಡೈ ಆಕ್ಸೈಡ್ (Sulphur dioxide), ಫಾಸ್ಫೋರಿಕ ಆಮ್ಲ (Phosphoric acid), ಕ್ಯಾಲ್ಸಿಯಂ ಹೈಡ್ರಾಕ್ಸೈಡ್ (calcium hydroxide) ಬಳಸಲಾಗುತ್ತೆ. ಹಾಗಾಗಿಯೇ ಸಕ್ಕರೆಯಲ್ಲಿ ಯಾವುದೇ ರೀತಿಯ ಪೋಷಕಾಂಶಗಳಿರಲ್ಲ.

ಸಕ್ಕರೆಯನ್ನು ಶುದ್ಧೀಕರಿಸುವಾಗ (Refining) ಅದರಲ್ಲಿನ ಸುಮಾರು 64 ಅನ್ನಘಟಕಗಳು ನಾಶವಾಗುತ್ತವೆ. ಜೀವಸತ್ವಗಳು (vitamin), ಖನಿಜದ್ರವ್ಯಗಳು (mineral), ಕಿಣ್ವಗಳು (enzymes), ಎಮಿನೋ ಆಸಿಡ್ಸ, ತಂತು (fiber) ಇತ್ಯಾದಿಗಳೆಲ್ಲವೂ ನಾಶವಾಗುತ್ತವೆ ಮತ್ತು ಉಳಿಯುವುದೆಂದರೆ ಯಾವುದೇ ಪೋಷಕಾಂಶವಿಲ್ಲದ ಹಾನಿಕರವಾದ ಸುಕ್ರೋಜ್( sucrose) ಮಾತ್ರ!
ಸಕ್ಕರೆ ಸೇವನೆಯಿಂದ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳಿಗೆ ಆಹಾರವಾಗುತ್ತದೆ. ಆವಾಗ ಬ್ಯಾಕ್ಟೀರಿಯಾಗಳು ಉತ್ಪಾದಿಸಿದ ಲ್ಯಾಕ್ಟಿಕ್ ಆಮ್ಲದಿಂದ ಹಲ್ಲಿನ ಮೇಲ್ಪದರ ನಾಶವಾಗಿ “ದಂತ ಕುಳಿ”ಯಾಗುತ್ತದೆ.

Advertisement

ಅತಿಯಾದ ಸಕ್ಕರೆ ಬಳಕೆ ನಮ್ಮ ದೇಹದಲ್ಲಿ ಕೊಬ್ಬನ್ನು ಹೆಚ್ಚಿಸಿ ಕೆಟ್ಟ ಕೊಲೆಸ್ಟ್ವಾಲ (LDL)ಪ್ರಮಾಣ ಏರಿಸುವ ಮೂಲಕ ಅನಾವಶ್ಯಕ ಬೊಜ್ಜು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಹ್ರದಯಾಘಾತಕ್ಕೆ ನಾಂದಿಯಾಗತ್ತೆ. ಸಕ್ಕರೆ ಸೇವನೆಯು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ತಕ್ಷಣ ಪರಿಣಾಮ ಬೀರುವುದು. ಇದರಿಂದ ಬೊಜ್ಜು, ಹೃದಯದ ಕಾಯಿಲೆ ಮತ್ತು ಮಧುಮೇಹ ಬರುವುದು. ಆಧುನಿಕ ಸಂಶೋಧನೆಯ ಪ್ರಕಾರ ಅಧಿಕ ಸಕ್ಕರೆಯುಕ್ತ(Glycemic) ಆಹಾರ ಮತ್ತು ವಿವಿಧ ರೀತಿಯ ಕ್ಯಾನ್ಸರ್ ಗೂ ಸಂಬಂಧವಿದೆ.ಸಕ್ಕರೆಯಿಂದ ಶರೀರದಲ್ಲಿನ ಕ್ಯಾಲ್ಸಿಯಂ ಮತ್ತು ರಂಜಕದ ಸಮತೋಲನವು ಏರುಪೇರಾಗುತ್ತೆ.

ಸಕ್ಕರೆಯಿಂದ ಚರ್ಮದಲ್ಲಿ ಕೊಲ್ಯಾಜಿನ್ ತಯಾರಿಕೆ ಕಡಿಮೆಯಾಗುವುದರಿಂದ ಚರ್ಮದಲ್ಲಿ ನೆರಿಗೆ ಮತ್ತು ಚರ್ಮವು ಜೋತು ಬೀಳುವಂತೆ ಮಾಡಿ ಅದು ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಸಕ್ಕರೆಯು ರಕ್ತನಾಳಗಳಿಗೆ ಹೋದ ಬಳಿಕ ಅದು ಪ್ರೋಟೀನ್ ಜತೆಗೆ ಸೇರಿಕೊಳ್ಳುವುದು. ಪ್ರೋಟೀನ್ ಮತ್ತು ಸಕ್ಕರೆ ಸೇರಿಕೊಳ್ಳುವ ಪರಿಣಾಮ ಚರ್ಮದ ಸ್ಥಿತಿಸ್ಥಾಪಕತ್ವವು ಕಳೆದುಕೊಳ್ಳುವುದು ಮತ್ತು ಇದರಿಂದ ವಯಸ್ಸಾಗುವ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳುವುದು.

ಅತಿಯಾದ ಸಕ್ಕರೆ ಬಳಕೆಯಿಂದ ರಕ್ತದೊತ್ತಡ (BP) ಹೆಚ್ಚಾಗಿ ಮೆದುಳು ಆಘಾತ ಮತ್ತು ಮೆದುಳಿನಲ್ಲಿ ರಕ್ತಸ್ರಾವ ಆಗುವ ಸಂಭವ ಹೆಚ್ಚು. ಸಕ್ಕರೆಯ ಅತಿಯಾದ ಬಳಕೆಯು ಮಧುಮೇಹ(Diabetes) ಮತ್ತು ಜಠರದ ಹುಣ್ಣಿಗೆ( Gastric ulcer) ಹಾದಿ ಮಾಡಿಕೊಡುತ್ತದೆ.

ಯಕೃತ್ ನ ಅತ್ಯಂತ ದೊಡ್ಡ ವೈರಿ ಎಂದರೆ ಮದ್ಯ. ಒಂದು ವೇಳೆ ಇದರೊಂದಿಗೆ ಸಕ್ಕರೆ ಸೇರಿದರೆ ಮಂಗನಿಗೆ ಮಧ್ಯ ಕುಡಿಸಿದಂತಾಗುತ್ತದೆ. ಮಧ್ಯ ಯಕೃತ್ ಗೆ ಮಾಡುವ ಹಾನಿಯನ್ನು ಸಕ್ಕರೆ ಸಾವಿರ ಪಟ್ಟು ಹೆಚ್ಚಿಸುತ್ತದೆ. ಪರಿಣಾಮ: ಯಕೃತ್ ವೈಫಲ್ಯ.

ದೇಹ ಸಕ್ಕರೆಯನ್ನು ಜೀರ್ಣಿಸಿಕೊಂಡ ಬಳಿಕ ರಕ್ತದಲ್ಲಿ ಡೋಪಮೈನ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ಒಂದು ಮೆದುಳಿಗೆ ಮುದ ನೀಡುವ ರಾಸಾಯನಿಕವಾಗಿದ್ದು ಮೆದುಳು ಹೆಚ್ಚು ಹೆಚ್ಚು ಇಷ್ಟಪಡತೊಡಗುತ್ತದೆ. ಮುಂದೆ ಸಕ್ಕರೆ “ವ್ಯಸನ” (Addictive)ದಂತೆ ಕಾಡುತ್ತದೆ.

Advertisement

ದೊಡ್ಡ ಕರುಳಿನ ಕ್ಯಾನ್ಸರ್ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್‌ ಗೆ ಕಾರಣವಾಗಬಹುದು. ರಕ್ತದಲ್ಲಿ ಅಗತ್ಯಕ್ಕೂ ಹೆಚ್ಚು ಸಕ್ಕರೆ (ಗ್ಲುಕೋಸ್) ಇರುವ ಸಂದರ್ಭದಲ್ಲಿ ಮೆದುಳಿಗೆ ಹಾನಿಯಾಗುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆ ಹೆಚ್ಚುತ್ತದೆ ಹೆಚ್ಚು ಸಕ್ಕರೆ ಸೇವಿಸಿದಷ್ಟೂ ನಾವು ದೈಹಿಕ ಚಟುವಟಿಕೆಗಳನ್ನೂ ಹೆಚ್ಚಿಸಬೇಕು. ಸ್ಥೂಲವಾಗಿ ಹೇಳಬೇಕೆಂದರೆ ಪ್ರತಿ ಒಂದು ಚಮಚ ಸಕ್ಕರೆಯಿಂದ ಲಭ್ಯವಾಗುವ ಕ್ಯಾಲೋರಿಗಳನ್ನು ಬಳಸಲು ಸುಮಾರು ಮುಕ್ಕಾಲು ಕಿ.ಮೀ ನಡೆಯಬೇಕಾಗತ್ತೆ. ಜಡತ್ವದಿಂದ ಕ್ಯಾಲೋರಿಗಳು ಬಳಸಲ್ಪಡದೇ ದೇಹದಲ್ಲಿಯೇ ಉಳಿದು ಹಲವು ದೈಹಿಕ ತೊಂದರೆಗಳಿಗೆ ಕಾರಣವಾಗುತ್ತವೆ.

ಆದ್ದರಿಂದ ಅತಿಯಾಗಿ ಬಳಕೆಯಾಗುವ ಸಕ್ಕರೆಯು ಒಂದು “ಬಿಳಿ ವಿಷ”ವೆಂದೇ ಹೇಳಬಹುದು. ಸಾಧ್ಯವಾದಷ್ಟು ಸಕ್ಕರೆ ಬಳಕೆಯನ್ನು ಕಡಿಮೆಗೊಳಿಸಿ ಬೆಲ್ಲದ ಬಳಕೆ ಅದರಲ್ಲೂ ಸಾವಯವ ಬೆಲ್ಲದ ಬಳಕೆಯನ್ನು ಹೆಚ್ಚಿಸುವುದೊಳಿತು. ಏಕೆಂದರೆ ಬೆಲ್ಲದಲ್ಲಿ ಮನುಷ್ಯನ ಆರೋಗ್ಯಕ್ಕೆ ಅಗತ್ಯವಾದ ಕಬ್ಬಿಣದ ಅಂಶ ಹೇರಳವಾಗಿದ್ದು ಸಕ್ಕರೆಯ ಬಳಕೆಯಿಂದಾಗುವ ದುಸ್ಪರಿಣಾಮಗಳು ಕಡಿಮೆ ಇರುತ್ತವೆ. ಜೀವನಶೈಲಿಗೆ ಹೊಂದಿಕೊಂಡು ಹಿತಮಿತವಾಗಿ ಸಿಹಿ ಸೇವನೆ ಮಾಡಿದರೆ ಅದರಿಂದ ಹೆಚ್ಚು ಸಮಸ್ಯೆಯಿಲ್ಲ.

ಬರಹ :
 ಡಾ. ಪ್ರಕಾಶ ಬಾರ್ಕಿ, ಕಾಗಿನೆಲೆ.
The World Health Organization (WHO) recommends consuming only 6 tablespoons or 25 grams of sugar per day. If it increases, it is definitely a disease. Before the use of sugar in India, our forefathers used processed pure jaggery that is why it was strong. Doctors, scientists have warned sugar as "white poison". There is no doubt that consuming too much sugar can turn our body into a breeding ground for diseases.
Let's know the dangers of sugar manufacturing and excessive consumption.

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹಾಳೆತಟ್ಟೆಯ ಬಳಿಕ ಈಗ ಮಾವಿನಹಣ್ಣು | ಭಾರತದ 15 ಮಾವಿನ ಹಣ್ಣು ಶಿಪ್‌ಮೆಂಟ್‌ಗಳನ್ನು ತಿರಸ್ಕರಿಸಿದ ಅಮೇರಿಕಾ |
May 21, 2025
7:45 AM
by: The Rural Mirror ಸುದ್ದಿಜಾಲ
ದೀಪ ಹಚ್ಚುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
May 21, 2025
7:09 AM
by: ದ ರೂರಲ್ ಮಿರರ್.ಕಾಂ
ಮಳೆ ಸುದ್ದಿ ಏನು ? | ನಾಳೆಯೂ ರೆಡ್‌ ಎಲರ್ಟ್‌ ಎಲ್ಲಿ..?
May 20, 2025
9:44 PM
by: The Rural Mirror ಸುದ್ದಿಜಾಲ
ಸಿಂಧು ಜಲ ಒಪ್ಪಂದ ಅಮಾನತು – ದೇಶದ ಹಲವು ರಾಜ್ಯಗಳ ರೈತರಿಗೆ ಅನುಕೂಲ
May 20, 2025
7:53 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group