ರೈತರು ತಮ್ಮ ಹೊಲದ ನಕ್ಷೆ ಏಕೆ ಇಟ್ಟುಕೊಳ್ಳಬೇಕು..? | ಹೊಲದ ನಕ್ಷೆಯನ್ನು ಬರೆಯುವುದಾದರೂ ಹೇಗೆ?

August 15, 2024
9:47 AM

ನಮ್ಮಲ್ಲಿನ ಅನೇಕ ರೈತರು ತಮ್ಮಲ್ಲಿರುವ ಹೊಲಗಳ ಸ್ಥಿತಿಗತಿಯನ್ನು ಸುಧಾರಿಸುವತ್ತ ಗಮನ ಹರಿಸುತ್ತಿದ್ದಾರೆ. ಹಾಗೆಯೇ ತಮ್ಮ ಹೊಲದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವತ್ತಲೂ ಆಸಕ್ತಿ ತೋರುತ್ತಿದ್ದಾರೆ. ಇದನ್ನು ಸಾಧಿಸುವತ್ತ ಯೋಜನೆಯೊಂದನ್ನು ರೂಪಿಸಿಕೊಳ್ಳಬೇಕು. ಈ ಯೋಜನೆಗೆ ಸಹಕಾರಿಯಾಗುವಂತೆ ನಮ್ಮ ಹೊಲದ ನಕ್ಷೆಯೊಂದನ್ನು ತಯಾರಿಸಲೇಬೇಕು.

Advertisement

ನಮ್ಮ ಹೊಲದ ನಕ್ಷೆಯಲ್ಲಿ ಇದಿಷ್ಟು ಇರಬೇಕು: 

  • ಹೊಲದ ದಿಕ್ಕುಗಳನ್ನು ತಿಳಿಸಬಹುದು. ಅದರ ಉದ್ದಗಲಗಳನ್ನು ಸ್ಪಷ್ಟವಾಗಿ ದಾಖಲಿಸಬಹುದು
  • ಹೊಲದ ಮೇಲ್ಮಣ್ಣು ಸವೆಯುತ್ತಿರುವ ಸ್ಥಳವನ್ನು ಹಾಗೂ ಹೊಲದಲ್ಲಿ ಬೀಳುವ ಮಳೆನೀರು ಹೊಲದಿಂದಾಚೆಗೆ ಹರಿದು ಹೋಗುವ ಪಥವನ್ನು ಗುರುತಿಸಬಹುದು.
  • ಅಳವಡಿಸಿಕೊಂಡಿರುವ ಕೃಷಿಪದ್ದತಿಯಿಂದ ಹೊಲದಲ್ಲಿರುವ ಮಣ್ಣು ಮತ್ತು ನೀರು ಮಾಲಿನ್ಯಗೊಳ್ಳುತ್ತಿರುವುದನ್ನು ಗಮನಿಸಬಹುದು
  • ಹೊಲದಲ್ಲಿನ ಪ್ರತಿಯೊಂದು ಕೋನಗಳಲ್ಲಾಗುತ್ತಿರುವ ಘಟನೆಗಳನ್ನು ಅರ್ಥಮಾಡಿಕೊಳ್ಳಬಹುದು
  • ಹೊಲವನ್ನು ಸುಧಾರಿಸುವತ್ತ ಮಾಡಬಹುದಾದ ಕ್ರಮಗಳನ್ನು ಕುರಿತು ಯೋಜನೆ ರೂಪಿಸಬಹುದು
  • ಹೊಲದಲ್ಲಿನ ಮಣ್ಣಿನ ವಿಧಗಳು ಹಾಗೂ ಅವುಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಬಹುದು.
  • ಹೊಲದಲ್ಲಿನ ಇಳಿಜಾರು ಪ್ರದೇಶವನ್ನು ಗುರುತಿಸಿ, ಆ ಇಳಿಜಾರಿನ ಕಾರಣ ಹೊಲದಿಂದ ಸವೆಯುತ್ತಿರುವ ಮೇಲ್ಮಣ್ಣು ಮತ್ತು ಹರಿದು ಹೊಲದಿಂದಾಚೆಗೆ ಪೋಲಾಗುತ್ತಿರುವ ಮಳೆನೀರು
  • ಇವುಗಳನ್ನು ಸಂರಕ್ಷಿಸುವತ್ತ ನಿರ್ವಹಣಾ ತಂತ್ರೋಪಾಯಗಳನ್ನು ರೂಪಿಸಬಹುದು
  • ಪ್ರತಿಯೊಂದು ಬೇಸಾಯ ಹಂಗಾಮಿನಲ್ಲಿ ಬೆಳೆಗಳ ಬದಲಾವಣೆಗಳತ್ತ ಆಲೋಚಿಸಬಹುದು
  • ಬೆಳೆಯುವ ಬೆಳೆಗಳಿಗೆ ಹಾಗೂ ಮಣ್ಣು ಜೀವಿಗಳಿಗೆ ಅಗತ್ಯವಾಗಿರುವ ಕಾಂಪೋಸ್ಟ್ ಮತ್ತಿತರ ಸಹಜ ಸಾವಯವ ಗೊಬ್ಬರಗಳನ್ನು ತಯಾರಿಸುವ ಸ್ಥಳಗಳನ್ನು ನಿರ್ಧರಿಸಬಹುದು
  • ಬೇಸಾಯದ ಅಂಗವೇ ದನದ ಅಥವಾ ಜಾನುವಾರುಗಳ ಕೊಟ್ಟಿಗೆಗಳು ಮತ್ತು ಉಪಕರಣಗಳನ್ನುಇರಿಸಲು ಅಗತ್ಯವಾಗಿರುವ ಕೋಣೆಗಳನ್ನು ನಿರ್ಮಿಸುವ ಸ್ಥಳವನ್ನು ನಿರ್ಧರಿಸಬಹುದು
  • ಹಾಗೆಯೇ, ಹೊಲದ ಬಂದೋಬಸ್ತಿಗಾಗಿ ಅಗತ್ಯ ಬೇಲಿಗಳನ್ನು ಹಾಕಿಕೊಳ್ಳಲು ಯೋಜನೆ ರೂಪಿಸಬಹುದು
  • ಮುಂದಿನ ದಿನಗಳಲ್ಲಿ ಹೊಲದ ಮೌಲ್ಯವನ್ನು ಹೆಚ್ಚಿಸುವ ಕ್ರಮಗಳ ಕುರಿತು ಯೋಜನೆಗಳನ್ನು ರೂಪಿಸಲು ನಮ್ಮ ಹೊಲದ ನಕ್ಷೆಯೊಂದನ್ನು ಇರಿಸಿಕೊಳ್ಳುವುದು ಒಳ್ಳೆಯದು.

ಮಾಹಿತಿ : ಡಿಜಿಟಲ್‌ ಮೀಡಿಯಾ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮನೆಯೊಳಗೆ ನುಗ್ಗಿದ ಚಿರತೆ | ಸತತ 5 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ |
April 4, 2025
4:45 PM
by: The Rural Mirror ಸುದ್ದಿಜಾಲ
ರಸ್ತೆ ಸರಕು ಸಾಗಾಣೆಯಲ್ಲೂ ತೀವ್ರ ಏರಿಕೆ  |  ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ
April 4, 2025
2:24 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04-04-2025 | ಇಂದು ಕೆಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಎ.7 ರಿಂದ ಮಳೆ ಕಡಿಮೆಯಾಗುವ ಲಕ್ಷಣ |
April 4, 2025
1:10 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ನಾಡಿನಲ್ಲಿ ಉಪಬೆಳೆಯಾಗಿ ತರಕಾರಿ ಕೃಷಿ ಮಾಡಿದ ಯುವಕ
April 4, 2025
8:00 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror

Join Our Group