ಅಂಕತ್ತಡ್ಕ : ಗ್ರಾಮಾಭಿವೃದ್ಧಿ ಯೋಜನೆಯ ಪಾಲ್ತಾಡಿ,ಬೊಳಿಕ್ಕಲ ಒಕ್ಕೂಟದ ಪದಗ್ರಹಣ

Advertisement

ಸವಣೂರು :  ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಗಳಿಂದ ಸಮಾಜದಲ್ಲಿ ಸಂಸ್ಕಾರ,ಸಂಸ್ಕೃತಿ,ಪ್ರಕೃತಿ ಉಳಿಸುವ ಧನಾತ್ಮಕ ಕಾರ್ಯಗಳಾಗುತ್ತಿದೆ ಎಂದು ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಹೇಳಿದರು.

Advertisement

ಅವರು ಪಾಲ್ತಾಡಿ ಗ್ರಾಮದ ಅಂಕತ್ತಡ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪಾಲ್ತಾಡಿ ಕಾರ್ಯಕ್ಷೇತ್ರದ ಬೊಳಿಕ್ಕಲ ಮತ್ತು ಪಾಲ್ತಾಡಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆಂತರಿಕ ಲೆಕ್ಕಪರಿಶೋಧಕಿ ಶಾಲಿನಿ ಮಾತನಾಡಿ, ಯೋಜನೆಯ ಮುಖಾಂತರ ಇವತ್ತು ಅನೇಕ ಕುಟುಂಬಗಳು ಸಂತೃಪ್ತ ಜೀವನ ನಡೆಸುತ್ತಿದೆ. ಸಮಾಜಕ್ಕೆ ನಮ್ಮ ಸೇವೆಗಳ ಅರ್ಪಣೆಯಾದಾಗ ಸಮಾಜವು ಸುಧಾರಿಸುವುದರೊಂದಿಗೆ ನಾವು ನಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಎಂದರು.
ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಅರಿಯಡ್ಕ ವಲಯಾಧ್ಯಕ್ಷ ಉದಯ ಕುಮಾರ್ ಜಿ.ಕೆ ಮಾತನಾಡಿ, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಿ ವಿಚಾರವನ್ನು ಅರಿತುಕೊಂಡು ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಶ್ಲಾಘನೀಯ. ತನ್ನ ಬೆಳೆ, ಭೂಮಿ ಫಲವತ್ತತ್ತೆಯನ್ನು ಕಾಣುತ್ತಿದೆ ಎಂದರೆ ಅದು ಯೋಜನೆಯಿಂದ ಸಾಧ್ಯವಾಗಿದೆ ಎಂದರು.
ಅಂಕತ್ತಡ್ಕ ಹಿ.ಪ್ರಾ.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಬಿ.ಪಿ.ವಿಶ್ವನಾಥ ಪೂಜಾರಿ , ಅಧ್ಯಕ್ಷತೆ ವಹಿಸಿದ್ದ ಕೆದಂಬಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲ ಮಾತನಾಡಿದರು.

Advertisement
Advertisement

ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ನಿಕಟಪೂರ್ವ ಪದಾಧಿಕಾರಿಗಳು ತಾಂಬೂಲ, ಪುಸ್ತಕ ಹಸ್ತಾಂತರಿಸುವುದರ ಮೂಲಕ ಅಧಿಕಾರವನ್ನು ಹಸ್ತಾಂತರಿಸಲಾಯಿತು.

ವೇದಿಕೆಯಲ್ಲಿ ಬೊಳಿಕ್ಕಲ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ,ಉಪಾಧ್ಯಕ್ಷೆ ಜಯ,ಕಾರ್ಯದರ್ಶಿ ಅನಿತಾ, ಜತೆ ಕಾರ್ಯದರ್ಶಿ ಗಿರಿಜಾ,ಕೋಶಾಧಿಕಾರಿ ತಿಮ್ಮಪ್ಪ ಪೂಜಾರಿ , ನೂತನ ಅಧ್ಯಕ್ಷ ಧನಂಜಯ,ಕಮಲ ಪಲ್ಲತ್ತಡ್ಕ, ಕಾರ್ಯದರ್ಶಿ ಲೇಖಾ,ಜತೆ ಕಾರ್ಯದರ್ಶಿ ಕಮಲ ,ಕೋಶಾಧಿಕಾರಿ ಬಾಲಕೃಷ್ಣ ದೇವಳಿಕೆ ,ಪಾಲ್ತಾಡಿ ಒಕ್ಕೂಟದ ಅಧ್ಯಕ್ಷೆ ಬೇಬಿ,ಉಪಾಧ್ಯಕ್ಷ ವಸಂತ ,ಕಾರ್ಯದರ್ಶಿ ಗೋಪಾಲಕೃಷ್ಣ ,ಜತೆ ಕಾರ್ಯದರ್ಶಿ ಜಯಂತಿ,ಕೋಶಾಧಿಕಾರಿ ಸುಮಲತಾ, ನೂತನ ಅಧ್ಯಕ್ಷೆ ಲಲಿತಾ,ಉಪಾಧ್ಯಕ್ಷ ಬಿ.ಎಂ.ರಾಮ,ಕಾರ್ಯದರ್ಶಿ ಪದ್ಮಾವತಿ,ಜತೆ ಕಾರ್ಯದರ್ಶಿ ಮೀನಾಕ್ಷಿ ,ಕೋಶಾಧಿಕಾರಿ ಕೃಷ್ಣ ಪ್ಪ ಉಪಸ್ಥಿತರಿದ್ದರು.

Advertisement

ಶ್ಯಾಮಲಾ ರೈ ಅಂಕತ್ತಡ್ಕ ಸ್ವಾಗತಿಸಿದರು.ಲಕ್ಷ್ಮೀ ಪಾಲ್ತಾಡು ಪ್ರಾರ್ಥಿಸಿದರು.ಸೇವಾ ಪ್ರತಿನಿಧಿ ವಾರಿಜ ವರದಿ ಮಂಡಿಸಿದರು.ಒಕ್ಕೂಟದ ಕಾರ್ಯದರ್ಶಿ ಗೋಪಾಲಕೃಷ್ಣ ಮಣಿಯಾಣಿ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.ಸೇವಾ ಪ್ರತಿನಿಧಿ ವಿಮಲಾ ವಂದಿಸಿದರು.ಈಶ್ವರಮಂಗಲ ಸೇವಾ ಪ್ರತಿನಿಧಿ ಸುಂದರ ಸಹಕರಿಸಿದರು.ಅರಿಯಡ್ಕ ವಲಯ ಮೇಲ್ವಿಚಾರಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಅಂಕತ್ತಡ್ಕ : ಗ್ರಾಮಾಭಿವೃದ್ಧಿ ಯೋಜನೆಯ ಪಾಲ್ತಾಡಿ,ಬೊಳಿಕ್ಕಲ ಒಕ್ಕೂಟದ ಪದಗ್ರಹಣ"

Leave a comment

Your email address will not be published.


*