ಅಂತರ್ಜಲ ಮಟ್ಟದ ತೀವ್ರ ಕುಸಿತದಿಂದ ಬತ್ತಿದ ಜಲ ಮೂಲಗಳು : ಅಂತರ್ಜಲ ಸಂವರ್ಧನೆಗೆ ಮುಂದಾಗಬೇಕಿದೆ ಸಂಘ ಸಂಸ್ಥೆಗಳು

June 2, 2019
7:00 PM
ಎಲ್ಲೆಡೆ ಬೋರವೆಲ್ ಲಾರಿಗಳು ಮತ್ತೆ ಎಡೆಬಿಡದೆ ಸದ್ದು ಮಾಡುತ್ತಿವೆ. ಮುಂಗಾರು ಮಳೆ ವಿಳಂಬವಾಗಿರುವುದರಿಂದ ಈಗಾಗಲೇ ಕೆರೆ, ಬಾವಿ, ಹೊಳೆ, ನದಿಗಳು ಬತ್ತಿದ್ದು ಕೊಳವೆ ಬಾವಿಗಳಲ್ಲಿ ಕೂಡ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು ಜನರಲ್ಲಿ ಮುಖ್ಯವಾಗಿ ಕೃಷಿಕರಲ್ಲಿ ಆತಂಕ ಮನೆ ಮಾಡಿದೆ. ಜನರು ಹೊಸ ಕೊಳವೆ ಬಾವಿಗಳನ್ನು ಕೊರೆಸಸಿ , ಇರುವ ಕೊಳವೆ ಬಾವಿಗಳ ಆಳವನ್ನು ಹೆಚ್ಚಿಸಿ , ಹೆಚ್ಚುವರಿ ಪೈಪ್ ಗಳನ್ನು ಅಳವಡಿಸಿ ಪಂಪನ್ನು ಇನ್ನಷ್ಟು ಆಳಕ್ಕೆ ಅಳವಡಿಸಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತಿದ್ದಾರೆಯೇ ವಿನಹ ನೀರಿನ ಸಮಸ್ಯೆಗೆ ಮೂಲ  ಕಾರಣ ಏನು ಎಂಬುದರ ಬಗ್ಗೆಯಾಗಲಿ ಅಂತರ್ಜಲ ವೃದ್ಧಿಗಾಗಿ ತಾನು ಏನು  ಮಾಡಬಹುದು ಎಂಬುದರ ಬಗ್ಗೆಯಾಗಲಿ ಯೋಚಿಸುವ ಗೋಜಿಗೆ ಹೋಗದಿರುವುದು  ಅತ್ಯಂತ ಆತಂಕಕಾರಿ ಬೆಳವಣಿಗೆ.
ನಮ್ಮೆಲ್ಲರ  ಈ ಮಟ್ಟದ ಪ್ರಜ್ಞಾಶೂನ್ಯತೆ, ಪ್ರಾಕೃತಿಕ ಸಂಪನ್ಮೂಲಗಳನ್ನು ಮನಸೋಇಚ್ಛೆ ಬಳಕೆ ಮಾಡುವ ದುರಾಸೆಯೇ ಅಂತರ್ಜಲ ಮಟ್ಟ ಅಪಾಯಕಾರಿ ಕುಸಿತ ಕಾಣಲು ಕಾರಣ ಎಂದರೆ ತಪ್ಪಾಗಲಾರದು.
ಕೊಳವೆ ಬಾವಿಗಳು ನೀರಿನ ಶಾಶ್ವತ ಮೂಲಗಳಲ್ಲ :
2 ದಶಕಗಳ ಹಿಂದೆ ಹೆಚ್ಚಾಗಿ ಬೇಸಾಯವನ್ನೇ ನೆಚ್ಚಿಕೊಂಡಿದ್ದ ಜಿಲ್ಲೆಯ ಜನತೆ ಕೊಳವೆ ಬಾವಿಯ ಸೌಲಭ್ಯದ ಪರಿಚಯವಾದ ನಂತರ ಕಾಡು ಕಡಿದು ಗುಡ್ಡ ಬಗೆದು ಅಡಿಕೆ ಕೃಷಿ ಮಾಡಲಾರಂಭಿಸಿದ್ದು ಇದೀಗ ಸಂಪೂರ್ಣ ಅಡಿಕೆ ಕೃಷಿ ಮೇಲೆ ಅವಲಂಬಿತವಾಗಿದೆ. ಅತಿಯಾದ ನೀರು ಬೇಡುವ  ಅಡಿಕೆ ಕೃಷಿಯನ್ನು ವ್ಯಾಪಕವಾಗಿ ವಿಸ್ತರಿಸಿದ ಕೃಷಿಕರು ಇದೀಗ ಕೊಳವೆ ಬಾವಿಗಳು ಕೈ ಕೊಡುತ್ತಲೇ ತಲೆ ಮೇಲೆ ಕೈ ಹೊತ್ತು ಚಿಂತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಳವೆ ಬಾವಿಗಳು ನೀರಿನ ಶಾಶ್ವತ ಮೂಲಗಳಲ್ಲ ಎಂಬ ಸತ್ಯ ನಿಧಾನವಾಗಿ ಜನರಿಗೆ ಅರಿವಾಗಲಾರಂಭಿಸಿದೆ.
ನೀರಿಲ್ಲವೆಂದು ಹೋಮ ಹವನದ ಜೊತೆಗೆ ನೀರಿಂಗಿಸಿ :
ಮಳೆ ನೀರು ಇಂಗಿದರೆ ಮಾತ್ರ ಅಂತರ್ಜಲ ವೃದ್ಧಿ ಸಾಧ್ಯ . ನೀರಿಗಾಗಿ ಪ್ರಾರ್ಥನೆ, ಪೂಜೆ ನಡೆಯಲಿ. ಅದರ ಜೊತೆಗೆ  ಜಲ ಸಂರಕ್ಷಣೆ, ಅಂತರ್ಜಲ ಸಂವರ್ಧನೆ, ನೀರಿಂಗಿಸುವಿಕೆ, ಕೊಳವೆ ಬಾವಿಗೆ ಜಲಮರುಪೂರಣ ಮೊದಲಾದ ಯೋಜನೆಗಳನ್ನು ತಮ್ಮ  ಜಮೀನಿನಲ್ಲಿ ಅನುಷ್ಠಾನಗೊಳಿಸಿ ಯಶಸ್ಸು ಪಡೆಯಬೇಕಿದೆ.
ಅಂತರ್ಜಲವನ್ನು ವೃದ್ಧಿಸಿಕೊಂಡು ತಮ್ಮ ಭೂಮಿ ಹಸನಾಗಿಸಿದ ಸಾಧಕರ ಬಗ್ಗೆ ತಿಳಿದು, ಮಾರ್ಗದರ್ಶನ ಪಡೆದು ನಮ್ಮ ಜಮೀನಿನಲ್ಲಿಯೂ ಅನುಷ್ಠಾನಗೊಳಿಸಿದರೆ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಜಲಾನಯನ ಇಲಾಖೆಯವರು ನಿರ್ಮಿಸಿರುವ ಕಿಂಡಿ ಅಣೆಕಟ್ಟುಗಳಿಗೆ ಮಳೆಗಾಲ ಕಳೆದ ನಂತರ ಹಲಗೆಗಳನ್ನು ಅಳವಡಿಸಲು ಜನರು  ಉತ್ಸಾಹ ತೋರಬೇಕು.
ಅಂತರ್ಜಲ ಸಂವರ್ಧನೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಸಂಘ ಸಂಸ್ಥೆಗಳು :
ಜನತೆಯಲ್ಲಿ ಆತಂಕ ಸೃಷ್ಟಿಸಿರುವ ಅಂತರ್ಜಲ ಮಟ್ಟದ ಕುಸಿತದ ಬಗ್ಗೆ, ಪರಿಹಾರ ಮಾರ್ಗೋಪಾಯಗಳ ಬಗ್ಗೆ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘ ಸಂಸ್ಥೆಗಳು  ಜನರನ್ನು ಜಾಗೃತಗೊಳಿಸಬೇಕಿದೆ. ಕೊಳವೆ ಬಾವಿಗಳಿಗೆ ಜಲ ಮರುಪೂರಣ, ಇಂಗುಗುಂಡಿಗಳ ನಿರ್ಮಾಣ, ಮನೆಯ ಮೇಲ್ಚಾವಣಿಗೆ ಬೀಳುವ ಮಳೆ ನೀರಿನ ಕೊಯ್ಲು ಮೊದಲಾದ ಯೋಜನೆಗಳನ್ನು ಗ್ರಾಮ ಗ್ರಾಮಗಳಲ್ಲಿ ಕೈಗೆತ್ತಿಕೊಂಡು ಆಂದೋಲನದ ಮಾದರಿಯಲ್ಲಿ ಅಂತರ್ಜಲ ಸಂವರ್ಧನೆಗೆ ಜನರನ್ನು ಪ್ರೇರೇಪಿಸಿದಾಗ ಮಾತ್ರ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ.
* ಗುರುಪ್ರಿಯಾ ನಾಯಕ್ 
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉತ್ತಮ ಆರೋಗ್ಯಕ್ಕಾಗಿ ಅಶ್ವಗಂಧ | ಅಶ್ವಗಂಧದ ಉಪಯೋಗಗಳು ಕೇಳಿದ್ರೆ, ನಿಜಕ್ಕೂ ಅಚ್ಚರಿಪಡುವಿರಿ…!
September 15, 2023
2:06 PM
by: The Rural Mirror ಸುದ್ದಿಜಾಲ
ಅಡಿಕೆ ಬೆಲೆ ಮತ್ತು ಬೆಳೆ ಎರಡೂ ಅತಿ‌ ಶೀಘ್ರವಾಗಿ ಬಿದ್ದು ಹೋಗಲಿದೆ….! | “ಇನ್ನು ಅಡಿಕೆ ಗೆ ಭವಿಷ್ಯವಿಲ್ಲ…!”
September 10, 2023
10:38 AM
by: ಪ್ರಬಂಧ ಅಂಬುತೀರ್ಥ
ಒಂದು ಆಹ್ವಾನ….! | ಒಂದು ಟ್ವೀಟ್….!‌ | ವಿದೇಶದಲ್ಲೂ ಸದ್ದು ಮಾಡಿತು ರಿಪಬ್ಲಿಕ್‌ ಆಫ್‌ ಭಾರತ್‌ |
September 6, 2023
3:36 PM
by: ದ ರೂರಲ್ ಮಿರರ್.ಕಾಂ
ಮಳೆ ಬಾರದಿದ್ದರೆ ರೈತರಿಗಷ್ಟೇ ನಷ್ಟವಾ..? | ರೈತ ಬೆಳೆದದ್ದನ್ನು ಉಣ್ಣುವ ನಮಗೂ ಕಾದಿದೆ ಸಂಕಷ್ಟ…? | ಜಗತ್ತು ನಿಂತಿರುವುದು ರೈತನ ಮೇಲೆ….! |
September 5, 2023
3:35 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror