ಸುಳ್ಯ: ಸಾಧನೆ ಮಾಡಲು ಯಾವುದೊಂದು ಕೊರತೆಗಳೂ ಅಡ್ಡಿಯಾಗದು ಎಂಬುದಕ್ಕೆ ಈ ವಿದ್ಯಾರ್ಥಿ ಸಾಕ್ಷಿ. ಈ ವಿದ್ಯಾರ್ಥಿಗೆ ಕಣ್ಣಿಲ್ಲ. ಆದರೆ ಅದೇ ಸಾಧನೆಗೆ ಅಡ್ಡಿ ಆಗಲೇ ಇಲ್ಲ.
ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಚೆನ್ನಾಗಿ ಓದಿ ತಂಗಿಯ ಮೂಲಕ ಪರೀಕ್ಷೆ ಬರೆದ ಶರತ್ 517 ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನಿಯಾಗಿದ್ದಾನೆ. ಸುಳ್ಯದ ಸಾಂದೀಪನಿ ಶಾಲೆಯಲ್ಲಿ ಕಲಿಯುತ್ತಿದ್ದ ಶರತ್ ಶಾಲೆಯ ಸಂಚಾಲಕ ಎಂ.ಬಿ.ಸದಾಶಿವ ಅವರ ಮಾರ್ಗದರ್ಶನದಂತೆ ಸುಳ್ಯದ ಗಾಂಧಿನಗರ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಗೆ ದಾಖಲಾಗಿ ಪರೀಕ್ಷೆ ಬರೆದಿದ್ದಾನೆ. ದೃಷ್ಟಿ ವಿಕಲ ಚೇತನನಾದರೂ ತಂಗಿಯ
ಸಹಾಯದಿಂದ ಪರೀಕ್ಷೆ ಬರೆದು ಉತ್ತಮ ಅಂಕಗಳಿಸಿದ್ದಾನೆ. ಕಲ್ಲುಗುಂಡಿಯ ಮಣಿಕಂಠ ಹಾ ಗೂ ಮೋಹಿನಿ ದಂಪತಿಗಳ ಪುತ್ರನಾಗಿರುವ ಶರತ್ ಉತ್ತಮ ಹಾಡುಗಾರನೂ ಹೌದು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel