ಅಖಿಲ ಭಾರತ ಗೇರು ಬೆಳೆಗಾರರ ಸಂಘ ಸ್ಥಾಪನೆಗೆ ಪೂರ್ವಭಾವಿ ಸಭೆ

Advertisement
Advertisement
Advertisement

ಪುತ್ತೂರು: ಗೇರು ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಅಖಿಲ ಭಾರತ ಗೇರು ಬೆಳೆಗಾರರ ಸಂಘವನ್ನು ಹುಟ್ಟುಹಾಕುವ ಬಗ್ಗೆ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಲ್ಲಿ ಪೂರ್ವಭಾವಿ ಸಭೆ  ನಡೆಯಿತು.

Advertisement

ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ದರ ಹಾಗೂ ಬೆಳೆಯ ಹಲವಾರು ಉಪಯುಕ್ತ ಗುಣಗಳಿಂದಾಗಿ ಗೇರು ಕೃಷಿ ಜನಪ್ರಿಯವಾಗುತ್ತಿದೆ. ಆದರೆ ದಿಢೀರ್ ದರ ಕುಸಿತ, ಮಧ್ಯವರ್ತಿಗಳ ಹಾವಳಿ, ಕೃಷಿಕರಿಗೆ ಸರಕಾರದ ಮಟ್ಟದಲ್ಲಿ ಧ್ವನಿ ಇಲ್ಲದಿರುವುದು ಇತ್ಯಾದಿ ಹಲವಾರು ಸಮಸ್ಯೆಗಳೂ ಬೆಳೆಗಾರರನ್ನು ಕಾಡುತ್ತಿವೆ, ಹಾಗಾಗಿ ಇಂತಹ ಸಂದರ್ಭಗಳಲ್ಲಿ ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಅಖಿಲ ಭಾರತ ಗೇರು ಬೆಳೆಗಾರರ ಸಂಘವನ್ನು ಹುಟ್ಟುಹಾಕಲು ಯೋಜಿಸಲಾಗಿದೆ.

Advertisement

ಕ್ಯಾಂಪ್ಕೋ ಅಧ್ಯಕ್ಷ  ಸತೀಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉದ್ದೇಶಿತ ಗೇರು ಬೆಳೆಗಾರರ ಸಂಘದ ಧ್ಯೇಯೋದ್ದೇಶಗಳನ್ನು ವಿಸ್ತೃತವಾಗಿ ಚರ್ಚಿಸಲಾಯಿತು. ಗೇರು ಕೃಷಿಕರ ಮಾರುಕಟ್ಟೆಯ ಸಮಸ್ಯೆಗಳಿಗೆ ರಾಜ್ಯ ಮತ್ತು ಕೇಂದ್ರದ ಮಟ್ಟದಲ್ಲಿ ಸ್ಪಂದಿಸುವ ಸಮರ್ಥ ವೇದಿಕೆ,  ದೇಶದ ಗೇರು ಕೃಷಿಕರ ನಡುವಿನ ಸಂವಹನ, ಸಂಬಂಧಪಟ್ಟ ಇಲಾಖೆಗಳೊಡನೆ ಸಹಯೋಗ, ಗೇರು ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ಅರಿವು ಮೂಡಿಸುವುದು, ರೈತ ಉತ್ಪಾದಕ ಕಂಪನಿಗಳನ್ನು ಗೇರಿನಲ್ಲಿ ಹುಟ್ಟುಹಾಕಲು ಉತ್ತೇಜನ ಮುಂತಾದ ಚಟುವಟಿಕೆಗಳು ಸಂಘದಿಂದ ನಡೆಯಬೇಕು ಎಂದು ತೀರ್ಮಾನಿಸಲಾಯಿತು.

ಕ್ಯಾಂಪ್ಕೋದಿಂದ ಈ ಸಂಘಕ್ಕೆ ಎಲ್ಲ ಸಹಕಾರ ಸಿಗುವ ಭರವಸೆಯನ್ನು ಸತೀಶ್ಚಂದ್ರ ಅವರು ನೀಡಿದರು. ಜೊತೆಗೆ ಸಂಘಕ್ಕೆ ಶಾಸಕರು ಮತ್ತು ಸಂಸದರ ಸಹಾಯವನ್ನು ಪಡೆದುಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಕ್ಯಾಂಪ್ಕೋ ಈಗಿರುವ ಬೆಳೆಗಳ ಜೊತೆಗೆ ಗೇರು ಬೀಜ ಸಂಸ್ಕರಣೆಯನ್ನೂ ಕೈಗೆತ್ತಿಕೊಳ್ಳಬೇಕೆಂದು ಕೃಷಿಕರು ಅಭಿಪ್ರಾಯಪಟ್ಟರು.

Advertisement
Advertisement

ಗೇರು ಕೃಷಿಕರಾದ ಸುಭಾಷ್ ರೈ ಕಡಮಜಲು, ನನ್ಯ ಅಚ್ಯುತ ಮೂಡತ್ತಾಯ, ದೇವಿಪ್ರಸಾದ ಪುಣಚ, ನಟೇಶ್ ಮೂಡಾಯೂರು, ನಾರಾಯಣ ನಾಯಕ್, ಮನೋಹರ ಶೆಟ್ಟಿ, ದೇವಣ್ಣ ರೈ, ,ದೊಡ್ಡಬಳ್ಳಾಪುರ ನಾಗರಾಜ್ ಮತ್ತವರ ತಂಡದ ಕೃಷಿಕರು ಹಾಜರಿದ್ದರು.

ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ಗಂಗಾಧರ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ವಿಜ್ಞಾನಿ ಡಾ. ಮೋಹನ್ ವಂದಿಸಿದರು.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಅಖಿಲ ಭಾರತ ಗೇರು ಬೆಳೆಗಾರರ ಸಂಘ ಸ್ಥಾಪನೆಗೆ ಪೂರ್ವಭಾವಿ ಸಭೆ"

Leave a comment

Your email address will not be published.


*