ಅಗಲಿದ ಡಿ.ಸಿ. ಮಾಸ್ಟರ್ ಗೊಂದು ನಮನಗಳು

August 27, 2020
1:03 PM

ಒಂದು ಶಾಲೆ ಅಭಿವೃದ್ಧಿಯಾಗಬೇಕಾದರೆ ಹಲವರ ಪರಿಶ್ರಮವಿರುತ್ತದೆ. ಅಲ್ಲಿ ಸಂಸ್ಥಾಪಕರ ಪಾತ್ರಕ್ಕೆ ಸರಿ ಸಾಟಿಯಾಗಿ ಕೈ ಜೋಡಿಸಲು ಅಧ್ಯಾಪಕರು, ಕಮಿಟಿಯವರು, ಊರವರು , ವಿದ್ಯಾರ್ಥಿಗಳು ಸಮರ್ಥರಾದಾಗ ಯಶಸ್ಸಿನ ಉತ್ತುಂಗವೇರುವುದರಲ್ಲಿ ಸಂಶಯವೇ ಇಲ್ಲ. ಪ್ರತಿಯೊಬ್ಬರ ನಿಸ್ವಾರ್ಥ ದುಡಿಮೆಯ ಅಗತ್ಯ ವಿದ್ಯಾಸಂಸ್ಥೆ ಬಯಸುತ್ತದೆ.

Advertisement
Advertisement
Advertisement
Advertisement
Advertisement

ಈ ವಿಷಯಗಳಲ್ಲಿ ನಮ್ಮ ವಿದ್ಯಾಭೋಧಿನಿ ಶಿಕ್ಷಣ ಸಂಸ್ಥೆಗಳು ಯಶಸ್ವಿ ಮೈಲುಗಲ್ಲನ್ನೇ ಸ್ಥಾಪಿಸಿತ್ತು. ದಿಟ್ಟ ಮುಖ್ಯೋಪಾಧ್ಯಾಯರಾಗಿದ್ದ ಬಿ.ವಿ ಶಗ್ರಿತ್ತಾಯರು ಹಾಗೂ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿದ ಅಧ್ಯಾಪಕರ ತಂಡವೇ ವಿದ್ಯಾಭೋಧಿನಿ ಪ್ರೌಢಶಾಲೆಯ ಪ್ರಮುಖ ಆಸ್ತಿ. ಅವರ ಪರಿಶ್ರಮಕ್ಕೆ ಬೆಂಗಾವಲಾಗಿದ್ದ ಎಜುಕೇಶನ್ ಸೊಸೈಟಿ. ಬಾಳಿಲ ಶಿಕ್ಷಣ ಸಂಸ್ಥೆಗಳೊಂದಿಗೆ ಪ್ರಮುಖವಾಗಿ ಕೇಳಿ ಬರುವ ಹೆಸರು ದಿನೇಶ್ಚಂದ್ರ ಕಿಲಂಗೋಡಿ. ಶಿಕ್ಷಕರಾಗಿ ತಮ್ಮ ವಿಶಿಷ್ಟ ಮ್ಯಾನರಿಸಂನಿಂದಾಗಿ ವಿದ್ಯಾರ್ಥಿಗಳೊಂದಿಗೆ ಮಾತ್ರವಲ್ಲದೆ ಮಕ್ಕಳ ಪೋಷಕರೊಂದಿಗೂ ಹೆಸರುವಾಸಿಯಾಗಿದ್ದವರು. ‌ ತಮ್ಮ ಅಪೂರ್ವ ಜ್ನಾಪಕ ಶಕ್ತಿಯಿಂದಲೂ ಹೆಸರುವಾಸಿಯಾಗಿದ್ದವರು. ದೂರವಾಣಿ( ಆ ದಿನಗಳಲ್ಲಿ ಮೊಬೈಲ್ ಇರಲಿಲ್ಲ) ಒಮ್ಮೆ ಕೇಳಿಸಿಕೊಂಡ ದೂರವಾಣಿ ಸಂಖ್ಯೆಗಳು ಅವರಿಗೆ ಬಾಯಿಪಾಠ. ಎಷ್ಟು ವರುಷಗಳು ಕಳೆದರು ಮುಖ ನೋಡಿದ ಕೂಡಲೇ ದೂರವಾಣಿ ಸಂಖ್ಯೆ ಹೇಳಿ ಬಿಡುತ್ತಿದ್ದರು. ಯಾವುದೇ ನಂಬರ್ ಬೇಕಿದ್ದರೆ ಆ ಮಾಸ್ಟರ್ ಹತ್ತಿರ ವಿಚಾರಿಸಿದಿರಾ ಎಂಬಷ್ಟರ ಮಟ್ಟಿಗೆ.
ಅವರು ಯಾವ ವಿದ್ಯಾರ್ಥಿಗಳನ್ನೂ ಕಡೆಗಣಿಸಿದ ಉದಾಹರಣೆಗಳಿಲ್ಲ. ಎಲ್ಲರನ್ನು ಸಮಾನವಾಗಿ ಗುರುತಿಸುತ್ತಿದ್ದವರು. ಎಲ್ಲಿ ಅವರ ಅಗತ್ಯವಿದೆಯೋ ಅಲ್ಲಿ ಸಕ್ರೀಯರಾಗಿರುತ್ತಿದ್ದರು. ಹಿರಿಯ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಶಾಲೆ ಹಾಗೂ ವಿದ್ಯಾರ್ಥಿಗಳ ನಡುವೆ ಕೊಂಡಿಯಾಗಿದ್ದವರು. ವಿಜ್ಞಾನ, ಗಣಿತ ಶಿಕ್ಷಕರಾಗಿ ಮಕ್ಕಳ ನೆಚ್ಚಿನವರಾಗಿದ್ದರು. ಅದರಲ್ಲೂ ಶೈಕ್ಷಣಿಕ ಪ್ರವಾಸಗಳ ಸಂಘಟನೆಯಲ್ಲಿ ಗುರುತರವಾದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಸೀಮಿತ ಖರ್ಚುವೆಚ್ಚದಲ್ಲಿ ಪ್ರವಾಸಗಳನ್ನು ಆಯೋಜಿಸುತ್ತಿದ್ದರು. ದೂರ ದೂರದ ಪ್ರವಾಸಗಳು ಕೈಗೆಟುಕುವ ದರದಲ್ಲಿ ಹಳ್ಳಿ ಮಕ್ಕಳಿಗೆ ಲಭ್ಯವಾಗುತ್ತಿದ್ದುದರ ಹಿಂದೆ ಆ ಮಾಸ್ಟರ್ ರ ಪರಿಶ್ರಮವಿದೆ.

Advertisement

ಕೆಲವು ವರುಷಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೂ ಅದೇ ಉತ್ಸಾಹದಿಂದ ಸಕ್ರೀಯರಾಗಿ ಶಾಲಾಕೆಲಸಗಳಲ್ಲಿ ತೊಡಗಿರುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ ಬಂದ ಸುದ್ದಿ ಆ ಮಾಸ್ಟರ್ ಇನ್ನಿಲ್ಲ. ನಂಬಲು ಕಷ್ಟವಾಯಿತು. ಅವರ ಆತ್ಮಕ್ಕೆ ‌ಚಿರಶಾಂತಿಯನ್ನು ಭಗವಂತ ಕರುಣಿಸಲಿ.

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮಾರ್ಚ್ ಆರಂಭದಲ್ಲೇ ರಾಜ್ಯದ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳ
March 4, 2025
10:11 PM
by: The Rural Mirror ಸುದ್ದಿಜಾಲ
ಅಡಿಕೆ ಎಲೆಚುಕ್ಕಿ ರೋಗ | ಸರ್ಕಾರದಿಂದ ಪ್ರತ್ಯೇಕ ಪರಿಹಾರ ಇಲ್ಲ | ಡಿಸೀಸ್‌ ಫಾರ್ಕಾಸ್ಟ್‌ ಮಾಡಲು ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ ಒತ್ತಾಯ |
March 4, 2025
3:30 PM
by: ದ ರೂರಲ್ ಮಿರರ್.ಕಾಂ
ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ
March 4, 2025
2:33 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ
March 3, 2025
7:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror