ಅಚ್ಚೇದಿನ್‌ ಬಂದಿದ್ದು ಬಡವರಿಗಲ್ಲ, ಅಂಬಾನಿ, ಅದಾನಿ, ಚೋಕ್ಸಿ, ನೀರವ್‌ ಮೋದಿಗೆ ಮಾತ್ರ- ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Advertisement

ಬೆಂಗಳೂರು : 380 ರೂಪಾಯಿ ಇದ್ದ ಗ್ಯಾಸ್ ಬೆಲೆ ಈಗ ಒಂಬೈನೂರು  ಆಗಿದೆ. ಆದ್ದರಿಂದ ಬಡವರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಅಚ್ಚೇದಿನ್‌ ಬರಲಿಲ್ಲ.ಅಚ್ಚೇದಿನ್‌ ಬಂದಿದ್ದು ಅಂಬಾನಿ, ಅದಾನಿ, ಚೋಕ್ಸಿ, ನೀರವ್‌ ಮೋದಿಗೆ ಮಾತ್ರ ಎಂದು ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

Advertisement

ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಪರವಾಗಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು,’ ಬಿಜೆಪಿ ಎಂಪಿಗಳು ಏನೂ ಮಾಡಿಲ್ಲ. ನಮಗೆ ವೋಟು ಕೊಡಿ ಅಂತಾ ಕೇಳ್ತಿಲ್ಲ, ಮೋದಿಗೆ ವೋಟು ಕೊಡಿ ಅಂತಿದ್ದಾರೆ. ಜನರು ಈಗಾಗಲೆ ಭ್ರಮನಿರಸನ ಆಗಿದ್ದಾರೆ. ಜನರ ಖಾತೆಗೆ ಹದಿನೈದು ಲಕ್ಷ ಅಂದ್ರು, ಹದಿನೈದು ಪೈಸೆನೂ ಬರಲಿಲ್ಲ. ಅಂತಹದರಲ್ಲಿ  ನಿಮ್ಮ ಮುಖ ನೋಡಿ ವೋಟು ಹಾಕಬೇಕಾ ಮೋದಿಯವರೇ? ಎಂದು ಪ್ರಶ್ನಸಿದ್ದಾರೆ.ರಾಜ್ಯದಲ್ಲಿ ಬರಗಾಲ ಇದ್ದಾಗ ಮೋದಿಯವರನ್ನು ಭೇಟಿ ಮಾಡಿದ್ದೆ. ವಿಶೇಷ ಅನುದಾನ ಕೊಡಿ ಅಂತಾ ಕೇಳಿದ್ದೆ. ನರೇಂದ್ರ ಮೋದಿ ಒಂದೇ ಒಂದು ರೂಪಾಯಿ ಅನುದಾನ ಕೊಡಲಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಅಚ್ಚೇದಿನ್‌ ಬಂದಿದ್ದು ಬಡವರಿಗಲ್ಲ, ಅಂಬಾನಿ, ಅದಾನಿ, ಚೋಕ್ಸಿ, ನೀರವ್‌ ಮೋದಿಗೆ ಮಾತ್ರ- ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ"

Leave a comment

Your email address will not be published.


*