ಸುಳ್ಯ: ಅಜ್ಜಾವರ ಗ್ರಾಮದ ಮಾವಿನಪಳ್ಳ ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡು ಬ್ರಹ್ಮಕಲಶದ ಪೂರ್ವಭಾವಿಯಾಗಿ ಸೀಮೆ ದೇವರಾದ ತೊಡಿಕಾನ ಮಲ್ಲಿಕಾರ್ಜುನ ದೇವರ ಆಶೀರ್ವಾದ ಪಡೆಯಲು ಅಜ್ಜಾವರದಿಂದ ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ತೊಡಿಕಾನ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ತೊಡಿಕಾನ ಕ್ಷೇತ್ರಕ್ಕೆ ಆಗಮಿಸಿದ ಸಾವಿರಾರು ಭಕ್ತರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವಾಕರ ರೈ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ವ್ಯವಸ್ಥಾಪನಾ ಸಮಿತಿಯ ಸದಸ್ಯರು ಮತ್ತಿತರರು ಸೇರಿ ಸ್ವಾಗತಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಹಾಗೂ ಮಾವಿನಪಳ್ಳ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚನಿಯ ಕಲ್ತಡ್ಕ, ಬ್ರಹ್ಮಕಲಶ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಸುರೇಶ್ ಕಣೆಮರಡ್ಕ, ಕುಮಾರ್ ರೈ ಮೇನಾಲ, ಪ್ರಬೋದ್ ಶೆಟ್ಟಿ ಮೇನಾಲ, ಬಾಲಕೃಷ್ಣ ಪಿ. ಎಸ್ , ರಾಘವ ಅಜ್ಜಾವರ, ಶೀನಪ್ಪ ಬಯಂಬು ,ರಮೇಶ್ ಇರಂತಮಜಲು, ಸುಭೋದ್ ಶೆಟ್ಟಿ ಮೇನಾಲ, ಭಾಸ್ಕರ ರಾವ್ ಬಯಂಬು, ಮಹೇಶ್ ಮೇನಾಲ, ಲೋಕೇಶ್ ತೋಟಚಾವಡಿ, ರಾಜೇಶ್ ರೈ ಮೇನಾಲ , ಸಾವಿತ್ರಿ ಅಜ್ಜಾವರ, ಮತ್ತಿತರರು ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ಪಾದಯಾತ್ರೆಯಲ್ಲಿ ಭಜನೆ ನಡೆಯಿತು. ಪಾದಯಾತ್ರೆಗೆ ಸ್ಥಳೀಯರು ಅಲ್ಲಲ್ಲಿ ಸ್ವಾಗತ ನೀಡಿದರು. ಪಾನೀಯ ಮತ್ತು ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.