ಅಡಿಕೆ ಉಳಿಸಲು ಯತ್ನಿಸುತ್ತಿವೆ ಸಹಕಾರಿ ಸಂಘಗಳು…..

ಸುಳ್ಯ: ಅಡಿಕೆ ಉಳಿಸಲು ಸಹಕಾರಿ ಸಂಘಗಳು ಈಗ ಪ್ರಯತ್ನ ಮಾಡುತ್ತಿವೆ. ಈಗ ಸಹಕಾರಿ ಸಂಘಗಳ ಪಾತ್ರವೂ ದೊಡ್ಡದಿದೆ. ಅದೇನು ?.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳು ಉಳಿದಿರುವುದು  ಹಾಗೂ ಬೆಳೆಯುತ್ತಿರುವುದು  ಅಡಿಕೆ ಬೆಳೆಗಾರರಿಂದ. ಅಡಿಕೆ ಕೃಷಿಕರಿಂದ. ಕೃಷಿಕರು  ಸಾಲ ಪಡೆಯುವುದು  ಹಾಗೂ ಸಾಲ ಮರುಪಾವತಿ ಮಾಡುವುದು  ಅಡಿಕೆಯನ್ನು  ನಂಬಿಯೇ. ಹಾಗಾಗಿ ಇಂದು ಅಡಿಕೆ ಉಳಿದರೆ ಮಾತ್ರವೇ ಸಹಕಾರಿ ಸಂಘಗಳು ಉಳಿದೀತು. ಸಹಕಾರಿ ಸಂಘಗಳು ಬೆಳೆದರೆ ಮಾತ್ರವೇ ಜಿಲ್ಲೆಯ ಆರ್ಥಿಕ ಶಕ್ತಿ ಹೆಚ್ಚೀತು. ಇದಕ್ಕಾಗಿಯೇ ಇಂದು ಸಹಕಾರಿ ಸಂಘಗಳು ಅಡಿಕೆ ಬೆಳೆಗಾರರ ಪ್ರಮುಖ ಸಮಸ್ಯೆಯಾದ ಔಷಧಿ ಸಿಂಪಡಣೆ, ಅಡಿಕೆ ಕೊಯ್ಲು ಮಾಡಲು ಸ್ವ ಉದ್ಯೋಗ, ಕೌಶಲ ಪಡೆಯತ್ತ ಮನಸ್ಸು ಮಾಡಿದೆ. ಅದರ ಮೊದಲ ಭಾಗ ಆರಂಭವಾಗಿದೆ. ಸುಳ್ಯ ತಾಲೂಕಿನ ಪಂಜದಲ್ಲಿ 3 ಸಹಕಾರಿ ಸಂಘಗಳು ಜೊತೆಯಾಗಿ ಅಡಿಕೆ ಮರ ಏರುವ ತರಬೇತಿ ಶಿಬಿರ ಆಯೋಜನೆ ಮಾಡಿದ್ದಾರೆ. 5 ದಿನಗಳ ಶಿಬಿರ ನಡೆದು ಶುಕ್ರವಾರ ಸಮಾರೋಪಗೊಳ್ಳುತ್ತಿದೆ. ಮುಂದೆ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳಿಗೂ ಇದು ಪ್ರೇರಣೆಯಾಗಬೇಕು, ಮಾದರಿಯಾಗಬೇಕು. ಪ್ರತೀ ಗ್ರಾಮಗಳಲ್ಲಿ ಇಂತಹ ಶಿಬಿರಗಳು ನಡೆದರೆ ಮಾತ್ರವೇ ಅಡಿಕೆ ಬೆಳೆಗಾರರಿಗೆ, ಸಹಕಾರಿ ಸಂಘಗಳಿಗೆ ಉಸಿರು ತುಂಬಲು ಸಾಧ್ಯ.

Advertisement

 

Advertisement

( ತರಬೇತಿಯಲ್ಲಿ ಇರುವ ಶಿಬಿರಾರ್ಥಿಗಳು )

 

Advertisement

 

Advertisement

(ಸೆಂಟರ್ ಪ್ಯಾಡ್ ತಯಾರಿ ಹೀಗೆ )

 

Advertisement

ಪಂಜದಲ್ಲಿ  ನಡೆದ ಶಿಬಿರವು ಅತ್ಯಂತ ಯಶಸ್ವಿಯಾಗಿ ನಡೆದಿದೆ. 32 ಮಂದಿ ತರಬೇತಿ ಪಡೆದಿದ್ದಾರೆ. ತರಬೇತು ಪಡೆದ ಅಟೋ ಚಾಲಕ ಜಯರಾಮ ಅವರು ಹೇಳುವಂತೆ, “ಮುಂದೆ ಭವಿಷ್ಯ ಇರುವುದು  ಇಂತಹ ಉದ್ಯೋಗದಲ್ಲಿ. ಅಟೋ ಓಡಿಸಲು ಪೈಪೋಟಿ ಇದೆ. ಹೀಗಾಗಿ ದಿನಕ್ಕೆ ಕನಿಷ್ಠ ಆದಾಯ ಬರುವ ದಿನ ಇದೆ. ಆದರೆ ಅಡಿಕೆ ಮರ ಏರುವುದಕ್ಕೆ ತರಬೇತು ಪಡೆದ ಬಳಿಕ ಧೈರ್ಯ ಬಂದಿದೆ. ಈ ಉದ್ಯೋಗಕ್ಕೂ ಗೌರವ ಇದೆ” ಎಂದು ಹೇಳುತ್ತಾರೆ.

“ಸಹಕಾರಿ ಸಂಘಗಳು ಇಂತಹ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ರಕ್ಷಣೆ ಬಾರದೇ ಇದ್ದರೆ ಸಹಕಾರಿ ಸಂಘಗಳಿಗೂ ಆರ್ಥಿಕ ವ್ಯವಹಾರ ನಿರ್ವಹಣೆ ಮಾಡಲು ಕಷ್ಟವಿದೆ. ಹೀಗಾಗಿ ಇದು ಸೂಕ್ತ ಸಮಯವಾಗಿದ್ದು ತರಬೇತಿ ನೀಡುವ ಮೂಲಕ ಕನಿಷ್ಠ ಅವರ ಮನೆಯಲ್ಲಾದರೂ ಅಡಿಕೆ ಕೊಯಿಲು, ಔಷಧಿ ಸಿಂಪಡಣೆ ಮಾಡಬಹುದಾಗಿದೆ” ಎಂದು ಹೇಳುತ್ತಾರೆ ಪಂಜ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಅಡಿಕೆ ಉಳಿಸಲು ಯತ್ನಿಸುತ್ತಿವೆ ಸಹಕಾರಿ ಸಂಘಗಳು….."

Leave a comment

Your email address will not be published.


*