ಮಡಿಕೇರಿ: ಕೊಡಗು ಜಿಲ್ಲೆಯ ಕರಿಕೆಯಲ್ಲಿ ಮನೆ ಮಾಲಕರು ತಮ್ಮ ಮನೆಗೆ ಅಡಿಕೆ ಕಳ್ಳತನಕ್ಕೆ ಬಂದಿದ್ದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕಳ್ಳ ಮೃತಪಟ್ಟಿದ್ದಾನೆ. ದೇವಂಗೋಡಿ ಗಣೇಶ್ ಮೃತಪಟ್ಟವ. ಈತ ಈ ಹಿಂದೆ ಕೂಡ ಹಲವು ಮನೆ ಕಳ್ಳತನ ಮಾಡಿ ಸಿಕ್ಕಿಬಿದ್ದು, ಶಿಕ್ಷೆ ಅನುಭವಿಸಿದ್ದ. ಬಿಡುಗಡೆಯಾಗಿ ಬಂದ ನಂತರದಲ್ಲೂ ಈತ ಕಳ್ಳತನ ಮುಂದುವರಿಸಿದ್ದ ಎನ್ನಲಾಗಿದೆ.
ಮಂದೋಡಿ ಮೊಣ್ಣಪ್ಪ ಅವರ ಮನೆಯಲ್ಲಿದ್ದ ಅಡಿಕೆ ದಾಸ್ತಾನನ್ನು ಕದಿಯಲು ಗಣೇಶ್ ಗುರುವಾರ ರಾತ್ರಿ ಮುಂದಾಗಿದ್ದ. ಸದ್ದು ಕೇಳಿ ಹೊರಬಂದ ಮಂಡೇಡಿ ಮೊಣ್ಣಪ್ಪ ಅವರ ಮನೆಯವರು ಗುಂಡಿನ ದಾಳಿ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಭಾಗಮಂಡಲ ಪೊಲೀಸರ ಭೇಟಿ ನೀಡಿದ್ದಾರೆ. ಗಣೇಶ್ ಮೇಲೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿತ್ತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel