ಅಡಿಕೆ ಮರ ಏರುವ ಸುಲಭ ಉಪಾಯದ ಪ್ರಯತ್ನದಲ್ಲಿ ಪದವೀಧರ ಕೃಷಿಕ

Advertisement

ಬೆಳ್ಳಾರೆ: ಇವರು ಸಿವಿಲ್ ಇಂಜಿನಿಯರ್. ಕೃಷಿ ಮಾಡುತ್ತಿರುವ ಯುವಕ. ಇಂಜಿನಿಯರಿಂಗ್ ಬಳಿಕ ಕೃಷಿಯಲ್ಲೇ ತೊಡಗಿಕೊಂಡು ಕೃಷಿ ಅಭಿವೃದ್ಧಿಗೆ ವಿವಿಧ ಪ್ರಯತ್ನ ಮಾಡಿದ್ದಾರೆ. ಇದೀಗ ಅಡಿಕೆ ಮರ ಏರಲು ಸುಲಭ ಉಪಾಯ ಕಂಡುಹಿಡಿಯುವ ಪ್ರಯತ್ನದಲ್ಲಿ ಇದ್ದಾರೆ. ಈ ಯುವ ಕೃಷಿಕ ಸುಳ್ಯ ತಾಲೂಕಿನ ಮುಪ್ಪೇರ್ಯ ಗ್ರಾಮದ ಕಲ್ಮಡ್ಕ ಬಳಿಯ ಲಾಲ್ ಕೃಷ್ಣ ಕೈಂತಜೆ.

Advertisement

 

Advertisement
Advertisement

Advertisement

 

Advertisement

ಅಡಿಕೆ ಬೆಳೆಗಾರರಿಗೆ ಸದಾ ಕಾಡುವ ಚಿಂತೆ, ಅಡಿಕೆ ಮರ ಏರುವುದು ಹೇಗೆ ? ಅದರ ಜೊತೆಗೆ ಕೊಳೆರೋಗಕ್ಕೆ ಔಷಧಿ ಸಿಂಪಡಣೆ , ಅಡಿಕೆ ಕೊಯ್ಲು ಇದೆರಡೂ ಈಗ ಬೆಳೆಗಾರರಿಗೆ ಕಾಡುವ ಬಹುದೊಡ್ಡ ಸಮಸ್ಯೆ. ಇದಕ್ಕಾಗಿ ವಿವಿಧ ಪ್ರಯತ್ನ ಆಗುತ್ತಿದೆ. ಒಂದು ಕಡೆ ಯಂತ್ರಗಳ ಆವಿಷ್ಕಾರ ನಡೆಯುತ್ತಿದ್ದರೆ ಮತ್ತೊಂದು ಕಡೆ ಸುಲಭದಲ್ಲಿ ಹಾಗೂ ರಕ್ಷಣಾತ್ಮಕವಾಗಿ ಹೇಗೆ ಮರ ಏರಬಹುದು ಎಂಬ ಬಗ್ಗೆಯೂ ಅಧ್ಯಯನ, ಪ್ರಯತ್ನ ನಡೆಯುತ್ತಿದೆ. ಇಂತಹ ಒಂದು ಪ್ರಯತ್ನ ಮುಪ್ಪೇರ್ಯ ಗ್ರಾಮದ ಕಲ್ಮಡ್ಕ ಬಳಿಯ ಲಾಲ್ ಕೃಷ್ಣ ಕೈಂತಜೆ ಮಾಡಿದ್ದಾರೆ.


ಲಾಲ್ ಕೃಷ್ಣ್ ಅವರು ಮರ ಏರುವ ಯಂತ್ರಗಳ ಬಗ್ಗೆ , ಸುಲಭ ಉಪಾಯಗಳ ಬಗ್ಗೆ ಹುಡುಕುತ್ತಿದ್ದಾಗ ಬ್ರೆಜಿಲ್ ನಲ್ಲಿ ಕೃಷಿಕರು ಬಳ್ಳಿಯ ಸಹಾಯದಿಂದ ಮರ ಏರುವ ಉಪಾಯವನ್ನು ನೋಡಿದರು. ಅಲ್ಲಿ ತೆಂಗಿನ ಮರಕ್ಕೆ ಈ ಬಳ್ಳಿಯ ಸಹಾಯದಿಂದ ಏರುತ್ತಿದ್ದರು. ಅದೇ ಮಾದರಿಯಲ್ಲಿ ಅಡಿಕೆ ಮರ ಏರಲು ಬೇಕಾದ ವಿನ್ಯಾಸ ಮಾಡಿದರು. ಎರಡು ಬಳ್ಳಿ ಹಾಗೂ ಬೈಕ್, ಸ್ಕೂಟರ್ ಟಯರ್ ಇದ್ದರೆ ಈ ಪ್ರಯತ್ನ ಸಾಧ್ಯವಾಗುತ್ತದೆ. ಬಳ್ಳಿಯ ಒಂದು ತುದಿಗೆ ಟಯರ್ ಕಟ್ಟಿ, ಇನ್ನೊಂದು ತುದಿಯನ್ನು ಅಡಿಕೆ ಮರಕ್ಕೆ ಸಿಕ್ಕಿಸಿಕೊಂಡು ಏರುವ ಐಡಿಯಾ ಇದು. ಇದರಲ್ಲಿ ಇನ್ನಷ್ಟು ಸುಧಾರಣೆಗಳು ಇವೆ. ಈ ಮೂಲಕ ಸುಲಭದಲ್ಲಿ ಮರ ಏರಲು ಸಾಧ್ಯವಾಗುತ್ತದೆ, ಹಾಗೂ ಆಯಾಸ ಕಡಿಮೆಯಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಇನ್ನೂ ಸುಧಾರಣೆಗಳು ಇವೆ. ಇದು ಆರಂಭವಷ್ಟೇ ಎನ್ನುವ ಲಾಲ್ ಕೃಷ್ಣ, ಇದರಲ್ಲಿ ಇನ್ನಷ್ಟು ರಕ್ಷಣಾ ವ್ಯವಸ್ಥೆಗಳನ್ನೂ ಮರ ಏರುವವರು ಮಾಡಿಕೊಳ್ಳಬಹುದು ಎನ್ನುತ್ತಾರೆ.

Advertisement
Advertisement

ಕೃಷಿಕರ ಬೆಳವಣಿಗೆಗೆ ಹಾಗೂ ಕೃಷಿ ಸುಲಭಕ್ಕೆ ಲಾಲ್ ಕೃಷ್ಣ ಹಾಗೂ ಅವರ ಕುಟುಂಬ ವಿವಿಧ ಪ್ರಯೋಗ ಮಾಡುತ್ತಲೇ ಇದ್ದಾರೆ. ಯುವಕರ ಯೋಚನೆಗಳಿಗೆ ತಕ್ಕಂತೆ ಲಾಲ್ ಕೃಷ್ಣ ಯುವ ಕೃಷಿಕರಾಗಿ ಹೊಸ ಹೊಸ ಐಡಿಯಾ ಹೊಂದಿರುವುದು ಕೃಷಿ ಬೆಳವಣಿಗೆಗೆ ಭರವಸೆ ಮೂಡಿಸುತ್ತಾರೆ.

Advertisement

(ಲಾಲ್ ಕೃಷ್ಣ ಸಂಪರ್ಕ – 9449568502)

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಅಡಿಕೆ ಮರ ಏರುವ ಸುಲಭ ಉಪಾಯದ ಪ್ರಯತ್ನದಲ್ಲಿ ಪದವೀಧರ ಕೃಷಿಕ"

Leave a comment

Your email address will not be published.


*