ಜಾಲ್ಸೂರು: ಅಡ್ಕಾರು ತಿರುವಿನಲ್ಲಿ ಕಾರು ಬರೆದು ಗುದ್ದಿ ಯುವಕ ಮಾವಜಿಯ ಹರೀಶ್ ಎಂಬವರು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.
ಮಂಗಳೂರಿನಿಂದ ಬರುತ್ತಿರುವ ವೇಳೆ ಅಡ್ಕಾರ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಬರೆಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಮರ್ಕಂಜದ ಮಾವಜಿ ಹರೀಶ್ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ. ಕಾರಿನ ಚಾಲಕ ಸಚಿನ್ ಚಾಂತಾಳ ಗಾಯಗೊಂಡು ಕೆ ವಿ ಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಹರೀಶ್ ಮರ್ಕಂಜ ಗ್ರಾಮದ ಮಾವಾಜಿ ಕೇಶವ ಗೌಡರ ಪುತ್ರ. ಅವಿವಾಹಿತರಾಗಿದ್ದು ತಂದೆ, ತಾಯಿ ಜಾನಕಿ, ಸಹೋದರ ಸುರೇಶ್, ಸಹೋದರಿಯರಾದ ರೂಪಾ, ಸವಿತ ಅವರನ್ನು ಅಗಲಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಅಡ್ಕಾರ್ ಬಳಿ ಕಾರು ಅಪಘಾತ : ಯುವಕ ಸಾವು"