ಸುಳ್ಯ: ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್‍ನ ಚುನಾವಣೆಯಲ್ಲಿ ಸುಳ್ಯ ತಾಲೂಕಿನ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಪ್ರತಿನಿಧಿಗಳಾಗಿ ಮತದಾನ ಮಾಡಿದ್ದ 17 ಮಂದಿಯೂ ರಾಜೀನಾಮೆ ನೀಡಲು ಬಿಜೆಪಿ, ಸಹಕಾರ ಭಾರತಿ ಹಾಗೂ ಸಂಘಪರಿವಾರ ಸೂಚನೆ ನೀಡಿದ ಬೆನ್ನಲ್ಲೇ ರಾಜೀನಾಮೆ ಪರ್ವ ಆರಂಭವಾಗಿದೆ.
ಎಸ್‍ಸಿಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಗೆ ಸೋಲಾದ ಬಳಿಕ ಶಿಸ್ತು ಕ್ರಮಕ್ಕೆ ಮುಂದಾದ ಸಹಕಾರ ಭಾರತಿ ಹಾಗೂ ಬಿಜೆಪಿ ಮತ್ತು ಸಂಘಪರಿವಾರ 17 ಮಂದಿಯೂ ರಾಜೀನಾಮೆ ನೀಡಲು ಸೂಚನೆ ನೀಡಿದೆ. ಹೀಗಾಗಿ ಈಗ ರಾಜೀನಾಮೆ ಪರ್ವ ಆರಂಭವಾಗಿದೆ.
ಈ ಸೂಚನೆಗೂ ಮುನ್ನವೇ ಅಭ್ಯರ್ಥಿಯಾಗಿದ್ದ ವೆಂಕಟ್ ದಂಬೆಕೋಡಿ ಅವರು ನೈತಿಕ ಹೊಣೆ ಹೊತ್ತು ತಾನು ನಿರ್ದೇಶಕನಾಗಿರುವ ಗುತ್ತಿಗಾರು ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕ್ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಿದ್ದರು. ಈ ಮೂಲಕ ಮಾದರಿಯಾಗಿದ್ದರು. ಇದೀಗ ಸಂಘಪರಿವಾರದಿಂದ ಸೂಚನೆ ಬಂದ ಬಳಿಕ ಮುರುಳ್ಯ- ಎಣ್ಮೂರು ಸಹಕಾರಿ ಬ್ಯಾಂಕ್ ನಿರ್ದೇಶಕ ಪ್ರಸನ್ನ ಎಣ್ಮೂರು ಅವರು ಸಹಕಾರಿ ಸಂಘದ ಕಾರ್ಯದರ್ಶಿ ಅವರಿಗೆ ರಾಜಿನಾಮೆ ಪತ್ರ ನೀಡಿದ್ದಾರೆ. ಇದರ ಜೊತಗೆ ಸಹಕಾರಿ ಭಾರತಿಯ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡುವುದಾಗಿ ಜಿಲ್ಲಾ ಅಧ್ಯಕ್ಷರಿಗೆ ಪತ್ರ ರವಾನಿಸಿದ್ದಾರೆ.
ಸಹಕಾರ ಭಾರತಿ ತಾಲೂಕು ಅಧ್ಯಕ್ಷ , ನೆಲ್ಲೂರು ಕೆಮ್ರಾಜೆ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಷ್ಣು ಭಟ್ ಅವರು ಸಹಕಾರಿ ಸಂಘದ ನಿರ್ದೇಶಕರ ಸಭೆ ಕರೆದು ರಾಜೀನಾಮೆ ನೀಡುವುದಾಗಿ “ಸುಳ್ಯನ್ಯೂಸ್.ಕಾಂ” ತಿಳಿಸಿದ್ದಾರೆ.
ಈ ಹೆಸರು ಹೇಳಲಿಚ್ಚಿಸದ ಮುಖಂಡರೊಬ್ಬರು, ಸಂಘಪರಿವಾರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಧರ್ಮದ ಮೇಲೆ ನಂಬಿಕೆ ಇರುವ ಪಕ್ಷವು ಹಾಗಾದರೆ ಕಾನತ್ತೂರಿಗೆ ಬರಲು ಹೇಳಿ ಸತ್ಯದ ನುಡಿಯನ್ನು ಹೇಳಿಸಿದ್ದೇಕೆ ?, ಎಲ್ಲರನ್ನೂ ಸಂಶಯದಿಂದ ನೋಡುವುದೇಕೆ ? ಹಾಗಿದ್ದರೆ ದೈವ-ದೇವರ ಮೇಲೆಯೇ ನಂಬಿಕೆ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಅಡ್ಡ ಮತದಾನ ಪರಿಣಾಮ : ರಾಜೀನಾಮೆ ಪರ್ವ ಆರಂಭ"