ಬೆಳ್ಳಾರೆ: ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಪ್ರಸಿದ್ಧ ಝಿಯಾರತ್ ಕೇಂದ್ರ ಗಳಲ್ಲಿ ಒಂದಾದ ಅತ್ತಿಕರಮಜಲು ಜುಮಾ ಮಸೀದಿಯ ನೂತನ ಖತೀಬರಾಗಿ ಚಿಂತಕರೂ ಖ್ಯಾತ ವಾಗ್ಮಿಯೂ ಆದ ಯಾಸರ್ ಅರಫಾತ್ ಕೌಸರಿಯವರು ಸೇವೆ ಸಲ್ಲಿಸಲಿದ್ದಾರೆ ಎಂದು ಜಮಾಅತ್ ಕಮಿಟಿಯು ಪ್ರಕಟನೆಗೆ ತಿಳಿಸಿದೆ.
ಇವರು ಕುಂಬ್ರ ಇಸ್ಲಾಮಿಕ್ ಸೆಂಟರ್ ನಲ್ಲಿ ಧಾರ್ಮಿಕ ಮತ್ತು ಲೌಕಿಕ ವಿಧ್ಯಾಭ್ಯಾಸ ಮಾಡಿ ಪದವಿಧರರಾಗಿ ಕಾರ್ಯ ನಿರ್ವಹಿಸಿ ,ಕೌಸರಿ ಬಿರುದು ಪಡೆದ ಇವರು ಆ ಬಳಿಕ ದೇರಳಕಟ್ಟೆ ಜುಮಾಮಸೀದಿಯಲ್ಲಿ 6 ವರುಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿದ್ದು ,ಸುಪ್ರಸಿದ್ದ ವಾಗ್ಮಿಯೂ ಕನ್ನಡದಲ್ಲಿ ಹಲವಾರು ವೇದಿಕೆಯಲ್ಲಿ ಭಾಷಣ ಮಾಡಿದ ವಾಕ್ ಚಾತುರ್ಯ ಅನುಭವವುಳ್ಳ ಇವರು ಪ್ರಸ್ತುತ ಈಗ ಅತ್ತಿಕರಮಜಲು ಜುಮಾಮಸೀದಿಯಲ್ಲಿ ಜೂನ್ 7 ರಿಂದ ಖತೀಬರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel