ಅನ್ವೇಷಣಾ-2019 ರಾಜ್ಯ ಮಟ್ಟದ ಅಗ್ರಿಟಿಂಕರಿಂಗ್ ಫೆಸ್ಟ್ : ಕೃಷಿ ವಿಚಾರ ಗೋಷ್ಠಿ

November 30, 2019
6:58 PM

ಪುತ್ತೂರು: ತಾಯಿ ತನ್ನ ಮಗುವನ್ನು ಹೆತ್ತಾಗ ಯಾವ ನೋವನ್ನು ಅನುಭವಿಸುತ್ತಾಳೊ ಹಾಗೆಯೇ ತಾಯ್ತನದ ಸುಖವನ್ನು ಅನುಭವಿಸುತ್ತಾಳೆ. ಅಂತೆಯೇ ಯಾವುದೇ ಸಂಗತಿಯನ್ನು ನಾವು ತಿಳಿಯಬೇಕಾದರೆ ಮೊದಲು ನಾವು ಅದರಲ್ಲಿನ ನೋವನ್ನು ಅನುಭವಿಸಬೇಕು. ಕಲ್ಪನೆಗಳು ಹೇಗೆ ಬೆಳೆಯುತ್ತವೆಯೋ ಹಾಗೆಯೇ ಕುತೂಹಲಗಳೊಂದಿಗೆ ಬಾಂಧವ್ಯಗಳು ಬೆಳೆಯುತ್ತದೆ. ಅದಕ್ಕೆ ಪೂರಕವಾದ ವಾತವರಣವನ್ನು ರೂಪಿಸಬೇಕು ಎಂದು ಭಾರತ ಸರ್ಕಾರದ ಜಿಐಎಎನ್‍ನ ನಿವೃತ್ತ ಸಿಇಒ ಡಾ. ವಿಜಯ ವಿಠಲ ಹೇಳಿದರು.

Advertisement
Advertisement
Advertisement

ಅವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಇವರ ಆಶ್ರಯದಲ್ಲಿ ಕರ್ನಾಟಕ ಲಘು ಉದ್ಯೋಗ ಭಾರತಿ ಸಹಯೋಗದೊಂದಿಗೆ ಅನ್ವೇಷಣಾ-2019 ಅಗ್ರಿಟಿಂಕರಿಂಗ್ ಫೆಸ್ಟ್ ನಲ್ಲಿ ಆಯೋಜಿಸಿದ್ದ ಕೃಷಿ ವಿಚಾರಗೋಷ್ಠಿಯಲ್ಲಿ ‘ಕೃಷಿಯಲ್ಲಿ ನೂತನ ಪರಿಕಲ್ಪನೆಗಳು’ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶನಿವಾರದಂದು ಮಾತನಾಡಿದರು.
ಸಂಶೋಧನೆ ಎಂಬುದು ನಿಂತ ನೀರಾಗದೆ ಸದಾ ಹೊಸ ವಿಚಾರ ಧಾರೆಗಳಿಗೆ ಮುನ್ನುಡಿಯನ್ನು ಬರೆಯುವಂತಾಗಬೇಕು. ಸಂಶೋಧಕನಾದವನಿಗೆ ಕೂತೂಹಲ ಎಂಬುದು ಮುಖ್ಯವಾಗಿರುತ್ತದೆ. ಇದಕ್ಕೆ ಪೂರಕವಾಗಿ ವಾತವರಣವು ಇದ್ದಾಗ ಸಂಶೋಧಕನು ಸಾಧನೆಯ ಹಾದಿಯಲ್ಲಿ ಮುಂದುವರಿಯಲೂ ಸಾಧ್ಯವಾಗುತ್ತದೆ. ಅನ್ವೇಷಕನಿಗೆ ಯೋಜನೆಯು ಬಲವಾಗಿರಬೇಕು ಜೊತೆಗೆ ಯಾವುದು ಎಲ್ಲಿ, ಹೇಗೆ, ಯಾವಾಗ ಎಂಬುದನ್ನು ಅರಿತಾಗ ಅನ್ವೇಷಣೆ ಎಂಬ ಪದಕ್ಕೆ ಪೂರ್ಣಅರ್ಥ ಸಿಗುತ್ತದೆ. ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಬಾಲ್ಯದಲ್ಲಿಯೇ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದಾಗ ಕೃಷಿಯಲ್ಲಿ ನೂತನ ಕಲ್ಪನೆಗಳು ಮೂಡಲು ಸಾಧ್ಯ ಎಂದು ಹೇಳಿದರು.

Advertisement

ಎಂ.ಎಸ್.ಎಂ.ಇ-ಸೆಂಟರ್ ಆಫ್ ಎಕ್ಸಲೆನ್ಸ್, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಇದರ ನಿರ್ದೇಶಕ ಎಸ್.ಎಂ.ಜಮಖಂಡಿ ಅವರು ‘ಹೊಸ ಉತ್ಪನ್ನಗಳ ಅಭಿವೃದ್ಧಿ’ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ಜನರಿಗೆ ಕಡಿಮೆ ದರದಲ್ಲಿ ಸಿಗುವಂತಹ ಉತ್ಪನ್ನ ತಂತ್ರಜ್ಞಾನಗಳ ಮೂಲಕ ಸರಳ ರೀತಿಯಲ್ಲಿ ಉಪಯೋಗಿಸುವಂತೆ ಇರಬೇಕು. ಹೀಗಾಗಲು ನಮ್ಮಲ್ಲಿ ಹುದುಗಿರುವ ಸಂಶೋಧನ ಮನೋಭಾವವನ್ನು ಅನಾವರಣಗೊಳಿಸುವ ಮೂಲಕ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರಗೊಳಿಸಬಹುದು. ಇವುಗಳನ್ನೆಲ್ಲಾ ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ಸಮಾಜಕ್ಕೆ ಅಥವಾ ಯಾವುದೇ ಕ್ಷೇತ್ರಕ್ಕೆ ನಮ್ಮ ಕೊಡುಗೆಯನ್ನು ನೀಡಬಹುದು ಎಂದು ಹೇಳಿದರು.

ಪುತ್ತೂರಿನ ಡಿ.ಸಿ.ಆರ್. ಹಿರಿಯ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ಅವರು ‘ಯುವ ಕೃಷಿಕರಿಗಾಗಿ ಮೊಬೈಲ್ ಆ್ಯಪ್’ ಎಂಬ ವಿಷಯದ ಕುರಿತು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವ ಸಮುದಾಯವು ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಇಂತಹ ಸಂದರ್ಭಗಳಲ್ಲಿ ಕೆಲವೊಂದು ಆ್ಯಪ್‍ಗಳು ಯುವ ರೈತರನ್ನು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತವೆ. ಆದ್ದರಿಂದ ರೈತರು ಕೃಷಿಯ ಬಗ್ಗೆ ಉಪಯುಕ್ತ ಮಾಹಿತಿ ಇರುವ ಮೊಬೈಲ್ ಆ್ಯಪ್‍ಗಳನ್ನು ಬಳಸಿ ಸಮಾಜದಲ್ಲಿ ಉತ್ತಮ ರೈತರಾಗಿ ಹೊರಹೊಮ್ಮಬೇಕು. ಇಂದಿನ ಯುವ ಸಮುದಾಯವು ಅಂತರ್ಜಾಲ ಎಂಬ ಮಾಯಾ ಲೋಕದಲ್ಲಿ ಮುಳುಗದೇ ಉಪಯುಕ್ತ ವಿಷಯಗಳನ್ನು ಅಳವಡಿಸಿಕೊಂಡು ಹೊಸ ಅವಿಷ್ಕಾರಕ್ಕೆ ನಾಂದಿ ಹಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿಜ್ಞಾನ ವಿಭಾಗದ ಶಿಕ್ಷಕಿ ಶಾರದಾ ಸ್ವಾಗತಿಸಿದರು. ಆಡಳಿತ ಮಂಡಳಿಯ ಸದಸ್ಯೆ ಸುಧಾ ವಂದಿಸಿದರು. ಆಂಗ್ಲ ವಿಭಾಗದ ಶಿಕ್ಷಕಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ
January 23, 2025
10:50 AM
by: The Rural Mirror ಸುದ್ದಿಜಾಲ
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ |  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
January 23, 2025
10:41 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror