ಅಮ್ಮ ನೀನೆಂದರೆ ನನಗಿಷ್ಟ.

ಬರೆದರೆ ಮುಗಿಯದ, ಮಾತಾಡಿದರೆ ಕೊನೆಯಿಲ್ಲದ ವಿಷಯಕ್ಕೆ ಉದಾಹರಣೆಯೇ “ಅಮ್ಮ”…

Advertisement
Advertisement
ಮಗಳು ಬೆಳೆಯುತ್ತಾ ಅಮ್ಮನಾಗುವ ಪರಿ ಅನನ್ಯ. ಹೆಣ್ಣು ತನ್ನ ರಕ್ತ ಹಂಚಿಕೊಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಮಗು ಹುಟ್ಟುವವರೆಗೂ ತಾನೇ ಮಗಳಾಗಿರುತ್ತಾಳೆ. ಆ ಕ್ಷಣಕ್ಕೆ ತನ್ನೇಲ್ಲಾ ನೋವು ಮರೆತು ಮಗಳು  ಅಮ್ಮನಾಗುತ್ತಾಳೆ.  ಆಮೇಲಿಂದ  ಯಾವ ನೋವು ಆಕೆಯನ್ನು ಭಾದಿಸಲಾರದು. ಎಲ್ಲಾ ಕಷ್ಟ ಗಳನ್ನೂ  ಮಗುವಿನ ಮುಖ ನೋಡಿ ಮರೆತು ಬಿಡುತ್ತಾಳೆ.
ಮಗುವಿನ ಬೆಳವಣಿಗೆಯ ಪ್ರತಿ ಹಂತವನ್ನು ಸಂತೋಷದಿಂದ ಅನುಭವಿಸುತ್ತಾಳೆ. ತನ್ನ ಬಾಲ್ಯ ವನ್ನು ಮಗುವಿನ ಬೆಳವಣಿಗೆಯಲ್ಲಿ ಕಾಣುತ್ತಾಳೆ. ಮಗುವಿನ ನೋವು ನಲಿವು ತನ್ನದೇ ಎಂಬಂತ ಭಾವನೆ ಆಕೆಯದು. ಈ ಸಂಧರ್ಭದಲ್ಲಿ ಬೇರೆ ಯಾವ ವಿಷಯಗಳತ್ತಲೂ  ಆಕೆಯ ಮನವಾಲಲಾ ರದು. ಏನಿದ್ದರೂ ತನ್ನ ಮಗುವೇ ಕೇಂದ್ರ ಬಿಂದು. ಮಗುವಿನ ಬಣ್ಣ ರೂಪ ಹೇಗೇ ಇದ್ದರೂ ಆದು ತನ್ನ ‌ಮಗು ಎಂಬ ಭಾವನೇಯೇ‌ ಮುಖ್ಯ.
ಎಷ್ಟೋ ಮಹಿಳೆಯರು ಮಗು ಹುಟ್ಟುವ ಸಂಧರ್ಭದಲ್ಲಿ ದೊಡ್ಡಂಕಿಯ ಸಂಬಳದ ‌ಕೆಲಸಕ್ಕೆ ರಾಜೀನಾಮೆ ಯನ್ನು ಕೊಟ್ಟು ಮಕ್ಕಳ ಲಾಲನೆ ಪೋಷಣೆ ಯಲ್ಲೇ ಕಾಲ ಕಳೆಯುತ್ತಾರೆ. ಆದರೆ ಕೆಲವು ಅಮ್ಮಂದಿರಿಗೆ  ಉದರ ಪೋಷಣೆಗೆ ಉದ್ಯೋಗ ಅನಿವಾರ್ಯ. ಮನಸು ಗಟ್ಟಿ ಮಾಡಿ ಕೊಂಡು ಮನೆ , ಮಗು ಉದ್ಯೋಗ ಹೀಗೆ ಹಲವು ಜವಾಬ್ದಾರಿ ಗಳನ್ನು   ಅನಿವಾರ್ಯ ಸಂಕಷ್ಟವನ್ನು ಜಾಣ್ಮೆ ಯಿಂದ ಅಮ್ಮಂದಿರು ನಿಭಾಯಿಸಿ ಬಿಡುತ್ತಾರೆ. ನಾನು ಇಂತಹ ಗಟ್ಟಿಗಿತ್ತಿ ಅಮ್ಮನ ಹಿರಿಯ ಮಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಉದ್ಯೋಗಸ್ಥ ಅಮ್ಮಂದಿರು ಪಡುವ ಬವಣೆ ಅನುಭವಿಸಿದ ಅಮ್ಮನಿಗೂ , ಅವರ ಮಕ್ಕಳಿಗೂ‌ ಗೊತ್ತು. ಶಾಲೆಯಿಂದ ಸುಸ್ತಾಗಿ ಬರುವ ಮಕ್ಕಳು ಅಮ್ಮನ ಅಪ್ಪುಗೆಯನ್ನು ಬಯಸುತ್ತಾರೆ. ಆದರೆ ಮಕ್ಕಳು ಮನೆಗೆ ಬಂದಾಗ ಅವರೇ ಬೀಗ ತೆಗೆದು ಬಿಸ್ಕೇಟ್ ಹಾಲು ಕುಡಿಯುವ ಅನಿವಾರ್ಯತೆ.  ಮನೆಯಲ್ಲಿ ಹಿರಿಯರಿದ್ದರೆ ಅಮ್ಮಂದಿರಿಗೆ ಆನೆಬಲ. ಮಕ್ಕಳ ಜವಾಬ್ದಾರಿ ಯನ್ನು ಪ್ರೀತಿ ಪಾತ್ರರು ವಹಿಸಿ ಕೊಂಡಾಗ  ನಿರಾಳ.
ಉದ್ಯೋಗಸ್ಥ ಅಪ್ಪ ಅಮ್ಮ ನ ಹಿರಿಯ ಮಗಳಾದ ನನಗೆ  ಅವರ ಮನಸಿನ ತುಮುಲಗಳು ಸಂಕಟ ಗಳನ್ನು ಹತ್ತಿರದಿಂದ ಕಂಡಿದ್ದೇನೆ.. ಸಣ್ಣವಳಿದ್ದಾಗ ಎಷ್ಟು ಹಠ ಮಾಡಿದರೂ ಒಂದೇ ಒಂದು ಪೆಟ್ಟಾಗಲಿ ಬೈಗಳವಾಗಲಿ ತಿಂದ ನೆನಪಿಲ್ಲ. ಈಗ ನಾನು ಅಮ್ಮನಾದ ಮೇಲೆ ಯೋಚಿಸಿದರೆ ಬೇಜಾರಾಗುತ್ತದೆ. ಅಷ್ಟು ಕೆಲಸದ ಒತ್ತಡದ ನಡುವೆಯೂ  ಸಮಚಿತ್ತದಿಂದ ಸಮಸ್ಯೆ ಗಳನ್ನು ಅಪ್ಪ ,ಅಮ್ಮ ಹೇಗೆ ನಿಭಾಯಿಸಲು ಸಾಧ್ಯ ವಾಯಿತು?  ನಮ್ಮ ಮೇಲೆ ಒಂದು ಚೂರು ರೇಗದೆ ಇರುತ್ತಿದ್ದರಲ್ಲ.   ಅಮ್ಮ ನ ವಿದ್ಯಾರ್ಥಿ ಗಳು ಸಿಕ್ಕಿದಾಗ ಅವರು ಮಾತನಾಡುವ ಪರಿಯಿಂದಲೇ ನಮಗರಿವಾಗುತ್ತದೆ  , ಅಮ್ಮ ನಮಗೆ ಮಾತ್ರ ಅಮ್ಮನಾಗಿರಲಿಲ್ಲ, ತನ್ನ ವಿದ್ಯಾರ್ಥಿ ಗಳಿಗೂ ಅಮ್ಮನೇ ಆಗಿದ್ದಳು. ಅಮ್ಮ ನಾನು ಪೂರ್ಣ ಮನಸ್ಸಿನಿಂದ ಹೇಳುತ್ತಿದ್ದೇನೆ ” ಅಮ್ಮ ನೀನೆಂದರೆ ನನಗಿಷ್ಟ”
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಅಮ್ಮ ನೀನೆಂದರೆ ನನಗಿಷ್ಟ."

Leave a comment

Your email address will not be published.


*