ಅರಂತೋಡಿನಲ್ಲಿ ತಾಲೂಕು ಮಟ್ಟದ ಸ್ವಚ್ಚ ಮೇವ ಜಯತೇ ಆಂದೋಲನಕ್ಕೆ ಚಾಲನೆ

Advertisement
ಅರಂತೋಡು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸುಳ್ಯ ಹಾಗೂ ಅರಂತೋಡು ಗ್ರಾ.ಪಂ ಸಹಯೋಗದಲ್ಲಿ ತಾಲೂಕು ಮಟ್ಟದ ಸ್ವಚ್ಚ ಮೇವ ಜಯತೇ ಆಂದೋಲನ ಉದ್ಘಾಟನಾ ಕಾರ್ಯಕ್ರಮ ಅರಂತೋಡು -ತೊಡಿಕಾನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಶಾಸಕ ಎಸ್. ಅಂಗಾರ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ತಾ.ಪಂ ಉಪಾಧ್ಯಕ್ಷೆ ಶುಭದಾ ಎಸ್ ಸ್ವಚ್ಚತಾ ರಥಕ್ಕೆ ಚಾಲನೆ ನೀಡಿದರು.
ತಾಲೂಕು ಸ್ವಚ್ಛತಾ ಜಾಥಕ್ಕೆ ಸುಳ್ಯ ತಾ.ಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಚಾಲನೆ ನೀಡಿದರು. ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸಿದರು.
ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ಭಿತ್ತಿಪತ್ರ ಮತ್ತು ಕರಪತ್ರ ಬಿಡುಗಡೆ ಮಾಡಿದರು.  ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯರಾದ ಎಸ್.ಎನ್.ಮನ್ಮಥ, ಪುಪ್ಪಾವತಿ ಬಾಳಿಲ, ತಾ.ಪಂ ಸದಸ್ಯೆ ಪುಪ್ಪಾ ಮೇದಪ್ಪ ಗೌಡ, ಅರಂತೋಡು ಗ್ರಾ.ಪಂ ಅಧ್ಯಕ್ಷೆ ಲೀಲಾವತಿ ಕೊಡಂಕೇರಿ, ಗ್ರಾ.ಪಂ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಅರಂತೋಡು- ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ್, ಅರಂತೋಡು ಪ್ರೌಢಶಾಲಾ ಮುಖ್ಯಗುರು ಆನಂದ , ಸುಳ್ಯ ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ಮಧುಕುಮಾರ್, ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪ್ರೀತಿ ನಾಯ್ಕ್, ತಾ.ಪಂ ಸಹಾಯಕ ನಿದೇರ್ಶಕ ಉದ್ಯೋಗ ಖಾತರಿ ಯೋಜನೆ ಭವಾನಿಶಂಕರ, ಪಿಡ್ಬ್ಯುಡಿ ಇಂಜಿನಿಯರ್ ಹನುಮಂತಪ್ಪ, ಸಿಡಿಪಿಒ ಮೇಲ್ವಿಚಾರಕಿ ರವಿ ಶ್ರೀ, ತೋಟಗಾರಿಕಾ ಇಲಾಖೆಯ ಮಧುಶ್ರೀ,  ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Be the first to comment on "ಅರಂತೋಡಿನಲ್ಲಿ ತಾಲೂಕು ಮಟ್ಟದ ಸ್ವಚ್ಚ ಮೇವ ಜಯತೇ ಆಂದೋಲನಕ್ಕೆ ಚಾಲನೆ"

Leave a comment

Your email address will not be published.


*