ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃಧ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ 14ನೇ ವರ್ಷದ ಸೌಹಾರ್ದ ಇಪ್ತಾರ್ ಕೂಟ

Advertisement

ಅರಂತೋಡು : ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃಧ್ಧಿ ಪ್ರತಿಷ್ಠಾನ (ರಿ) ಇದರ ಆಶ್ರಯದಲ್ಲಿ  14ನೇ ವರ್ಷದ ಸೌಹಾರ್ದ ಇಪ್ತಾರ್ ಕೂಟ ನಡೆಯಿತು.

Advertisement

ಇಪ್ತಾರ್ ಕೂಟವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಾಕ್ಷ ಮಂಜುನಾಥ ಗೌಡ, ತೆಕ್ಕಿಲ್ ಸಂಸ್ಥೆಯು ಕಳೆದ 14 ವರ್ಷಗಳಿಂದ ಎಲ್ಲಾ ಧರ್ಮದವರನ್ನು ಕರೆದು ಸೌಹರ್ಧ ಇಪ್ತಾರ್‍ಕೂಟವನ್ನು ಆಯೋಜಿಸಿಕೊಂಡು ಬರುತ್ತಿದ್ದು ಪರಸ್ಪರ ಪ್ರೀತಿ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಸಂಸ್ಥೆಯ ಕಾರ್ಯಕ್ರಮ ಶ್ಲಾಘನೀಯ ಎಂದರು.

Advertisement

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಧನಂಜಯ ಅಡ್ಪಂಗಾಯ ಮಾತಾನಾಡಿ ಎಲ್ಲರನ್ನು ಸೇರಿಸಿ ಮಾಡುವ ಇಂತಹ ಸೌಹರ್ಧ ಇಪ್ತಾರ್ ನಮ್ಮ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ತೆಕ್ಕಿಲ್ ಗ್ರಾಮೀಣಾಭಿವ್ರಧ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ವಹಿಸಿದ್ದರು. ದುವಾ ವನ್ನು ಅರಂತೋಡು ಮಸೀದಿಯ ಧರ್ಮಗುರು ಇಸಾಕ್ ಬಾಖವಿ ನೆರೆವೇರಿಸಿದರು. ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡ ಮತ್ತು ಶರೀಫ್ ಕಂಠಿ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸಂಪಾಜೆ ಗ್ರಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್‍ಕುಂಞ ಗೂನಡ್ಕ, ಅರಂತೋಡು ಜಮಾಅತ್ ಅಧ್ಯಕ್ಷ ಅಬ್ದುಲ್‍ಖಾದರ್ ಪಠೇಲ್,
ಡಾ.ಹರ್ಷವರ್ಧನ, ತಾಜ್ ಮಹಮ್ಮದ್ ಸಂಪಾಜೆ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ಧೀಕ್‍ಕೊಕ್ಕೋ ಭಾಗವಹಿಸಿದರು. ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
ವ್ಯವಸ್ಥಾನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕ ಕೆ.ಎಸ್ ದೇವರಾಜ್, ನಿವೃತ ಪ್ರಾಂಶುಪಾಲ ಕೆ.ಆರ್.ಗಂಗಾಧರ, ತೋಡಿಕಾನ ಮಲ್ಲಿಕಾರ್ಜುನ ದೇವಾಸ್ಥಾನ ವ್ಯವಸ್ಥಾಪಾನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ ಶುಭಹಾರೈಸಿದರು.

ಟಸ್ಟ್ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ, ಕೋಶಾಧಿಕಾರಿ ಟಿ.ಎಂ ಜಾವೇದ್ ತೆಕ್ಕಿಲ್ ವಂದಿಸಿದರು. ಇಪ್ತಾರ್ ಕೂಟದಲ್ಲಿ ಸುಮಾರು 500 ಜನರು ಭಾಗವಹಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃಧ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ 14ನೇ ವರ್ಷದ ಸೌಹಾರ್ದ ಇಪ್ತಾರ್ ಕೂಟ"

Leave a comment

Your email address will not be published.


*