ತಿರುವನಂತಪುರ: ತಡವಾಗಿ ಆಗಮಿಸಿದ ಮುಂಗಾರು ಮಳೆ ಏನಾಗುತ್ತದೆ ? ದುರ್ಬಲವಾಗುತ್ತಾ ? ವೇಗ ಪಡೆಯುತ್ತಾ ? ಈ ಪ್ರಶ್ನೆಗೆ ಕಾರಣ ಇದೆ. ಇದೀಗ ಅರಬಿ ಸಮುದ್ರದಲ್ಲಿ ಭಾನುವಾರ ಬೆಳಿಗ್ಗಿನಿಂದಲೇ ವಾಯುಭಾರ ಕುಸಿತ ಉಂಟಾಗಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ತೀವ್ರ ತರಹದ ವಾಯುಭಾರ ಕುಸಿತ ಉಂಟಾಗಿ ಅದು ವಾಯು ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದು ಸುಳಿ ಗಾಳಿಯಾಗಿ ರೂಪುಗೊಳ್ಳಲಿದೆ ಎಂಬ ಸೂಚನೆ ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಗಾಳಿಗೆ ಹೆಸರು ನೀಡುವ ಸರದಿ ಈಗ ಭಾರತದ್ದಾಗಿದ್ದು ವಾಯು ಎಂಬ ಹೆಸರು ನೀಡಲಾಗಿದೆ. ಸೋಮವಾರ ರಾತ್ರಿ ವಾಯುಭಾರ ಕುಸಿತ ತೀವ್ರಗೊಳ್ಳಲಿದ್ದು ಅದುವರೆಗೆ ಕೇರಳದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ. ಕರ್ನಾಟಕ, ಗೋವಾ ತೀರಗಳಲ್ಲೂ ಮಳೆಯಾಗುವ ಸಂಭವ ಇದೆ. ಬುಧವಾರದ ವೇಳೆಗೆ ವಾಯುಭಾರ ಕುಸಿತ ಸುಳಿಗಾಳಿಯಾಗಿ ರೂಪಾಂತರಗೊಂಡು ದಕ್ಷಿಣ ಭಾರತದ ತೀರ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಸುತ್ತದೆಯೇ ಹೊರತು ಗಾಳಿ ಬೀಸಿ ನಾಶ ಉಂಟು ಮಾಡುವುದಿಲ್ಲ ಎಂಬ ಸೂಚನೆ ನೀಡಿದೆ. ಇದೇ ಚಂಡಮಾರುತವಾಗಿ ಪರಿವರ್ತನೆ ಸಾಧ್ಯತೆಯೂ ಇದೆ.
ಈಗ ಭಾರೀ ಮಳೆಯಾಗುವ ಸಂಭವವಿದ್ದರೂ ಈ ಬೆಳವಣಿಗೆ ಮುಂಗಾರು ಮಳೆಯನ್ನು ದುರ್ಬಲಗೊಳಿಸುವ ಆತಂಕ ಇದೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ. ಸುಳಿಗಾಳಿ ಗುಜರಾತ್ ತೀರದ ಮೂಲಕ ಪಾಕಿಸ್ಥಾನದ ಕರಾಚಿ ಭಾಗಕ್ಕೆ ಸಾಗುವ ಸಂಭವವಿದ್ದು ಅಲ್ಲೂ ಮಳೆಯಾಗಬಹುದು. ಅದು ಭಾರತದ ತೀರ ಪ್ರದೇಶದ ಮಳೆ ಕಡಿಮೆಯಾಗಲು ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತದೆ.
ಮಂಗಳೂರು ಪ್ರದೇಶದಲ್ಲೂ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ : ಕೇರಳದಲ್ಲಿ ಭಾರೀ ಮಳೆಯೊಂದಿಗೆ ಸುಳಿಗಾಳಿ ಸಾಧ್ಯತೆ"