ಅರ್ಹರಾದ ಎಲ್ಲಾ ರೈತರಿಗೂ ಸಾಲಮನ್ನಾ ಸೌಲಭ್ಯ ದೊರೆಯಲಿದೆ

October 21, 2019
7:15 PM

ಸುಳ್ಯ: ಕರ್ನಾಟಕ ಸರಕಾರ  ಘೋಷಿಸಿದ ಸಾಲಮನ್ನಾ ಸೌಲಭ್ಯ ಅರ್ಹರಾದ ಎಲ್ಲಾ ರೈತರಿಗೂ ದೊರೆಯಲಿದೆ. ಚಾಲ್ತಿ ಖಾತೆ ಸಂಖ್ಯೆ ಅಪ್‍ಲೋಡ್ ಆಗದ ಕಾರಣ ಸಾಲಮನ್ನಾ ಹಣ ಪಾವತಿಯಾಗಲು ವಿಳಂಬ ಆಗಿದೆ. ಅ.22 ರಿಂದ ಒಂದು ವಾರಗಳ ಕಾಲ ಖಾತೆ ಅಪ್‍ಲೋಡ್ ಮಾಡಲು ಅವಕಾಶ ನೀಡಲಾಗಿದೆ. ಖಾತೆ ಸಂಖ್ಯೆ ಹಾಕದ ಕಾರಣ ಹಣ ಪಾವತಿಗೆ ಬಾಕಿರುವ ಎಲ್ಲಾ ರೈತರಿಗೂ ಖಾತೆ ಸಂಖ್ಯೆ ಅಪ್‍ಲೋಡ್ ಆದ ಕೂಡಲೇ ಹಣ ಪಾವತಿಯಾಗಲಿದೆ ಎಂದು ಸುಳ್ಯ ತಾಲೂಕು ಸಹಕಾರಿ ಯೂನಿಯನ್‍ನ ಅಧ್ಯಕ್ಷ ರಮೇಶ್ ದೇಲಂಪಾಡಿ ಹೇಳಿದ್ದಾರೆ.

Advertisement

ಸಾಲ ಮನ್ನಾ ಬಾಕಿ ಕುರಿತು ಚರ್ಚಿಸಲು ಸಹಕಾರಿ ಸಂಘಗಳ ಅಧ್ಯಕ್ಷರು, ನಿರ್ದೇಶಕರ ಮತ್ತು ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಳ್ಯ ತಾಲೂಕಿನಲ್ಲಿ ಒಟ್ಟು 14,114 ಮಂದಿ ರೈತರ 118.12 ಕೋಟಿ ಸಾಲ ಮನ್ನಾ ಬೇಡಿಕೆ ಇತ್ತು. ಇದರಲ್ಲಿ 10,436 ರೈತರು ಅರ್ಹರು ಎಂದು ಗುರುತಿಸಲಾಗಿದ್ದು 76.05 ಕೋಟಿ ರೂ ಬರಲಿದೆ. ಅದರಲ್ಲಿ 9,564 ರೈತರಿಗೆ 74.17 ಕೋಟಿ ಬಿಡುಗಡೆ ಆಗಿದೆ. ಇದರಲ್ಲಿ 3,851 ರೈತರ ಖಾತೆಗೆ 39.84 ಕೋಟಿ ಜಮೆ ಆಗಿದೆ. ಚಾಲ್ತಿ ಖಾತೆ ನಮೂದಾಗಿಲ್ಲ ಎಂಬ ಕಾರಣಕ್ಕೆ 5,713 ಮಂದಿ ರೈತರ 44.33 ಕೋಟಿ ರೂ ಅಪೆಕ್ಸ್ ಬ್ಯಾಂಕ್‍ಗೆ ಹಿಂದಕ್ಕೆ ಹೋಗಿದೆ. ಖಾತೆ ಸಂಖ್ಯೆ ನಮೂದಾದ ಕೂಡಲೇ ಈ ಹಣ ಖಾತೆಗೆ ಜಮೆ ಆಗಲಿದೆ ಎಂದು ಅವರು ಹೇಳಿದರು. ಪಡಿತರ ಚೀಟಿ ನವೀಕರಣ ಮತ್ತಿತರ ತಾಂತ್ರಿಕ ಕಾರಣಗಳಿಂದಾಗಿ 3568 ಮಂದಿಯ ಅರ್ಹತೆ ನಷ್ಟವಾಗಿದ್ದು ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿ ಅವರಿಗೂ ಸಾಲಮನ್ನಾ ಸೌಲಭ್ಯ ದೊರಕಿಸುವ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.

ವಿಳಂಬಕ್ಕೆ ಸಹಕಾರಿ ಸಂಘಗಳು ಕಾರಣ ಅಲ್ಲ : ಕೆ.ಎಸ್.ದೇವರಾಜ್
ರೈತರ ಹಣ ಬರಲು ವಿಳಂಬವಗಲು ಸಹಕಾರಿ ಸಂಘಗಳು ಅಥವಾ ಡಿಸಿಸಿ ಬ್ಯಾಂಕ್ ಕಾರಣ ಅಲ್ಲ. ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ವಿಳಂಬ ಆಗಿದೆ ಹೊರತು ಇದರಲ್ಲಿ ಸಹಕಾರಿ ಸಂಘಗಳು ಅಥವಾ ಡಿಸಿಸಿ ಬ್ಯಾಂಕ್‍ಗಳ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್.ದೇವರಾಜ್ ಹೇಳಿದ್ದಾರೆ. ರೈತರ ಸಾಲ ಮನ್ನಾ ಬಾಕಿ ರಾಜ್ಯ ಅಪೆಕ್ಸ್ ಬ್ಯಾಂಕ್ ಖಾತೆಯಲ್ಲಿದೆ. ಕೆಲವೊಂದು ಗೊಂದಲ ಮತ್ತು ತಾಂತ್ರಿಕ ಸಮಸ್ಯೆಗಳಿಂದ ಹಿಂದೆ ಖಾತೆ ಸಂಖ್ಯೆ ಅಪ್‍ಲೋಡ್ ಆಗದ ಕಾರಣ ಹಣ ಬರಲು ವಿಳಂಬ ಆಗಿದೆ. ಖಾತೆ ಸಂಖ್ಯೆ ಅಪ್‍ಲೋಡ್ ಆದ ಕೂಡಲೇ ಅರ್ಹರಾದ ಎಲ್ಲರಿಗೂ ಸಾಲ ಮನ್ನಾ ಹಣ ದೊರೆಯಲಿದೆ ಎಂದರು.

ಫಸಲ್ ಭೀಮಾ ಯೋಜನೆ ಹಣ ಬಿಡುಗಡೆ ಆಗುತ್ತಿದೆ: ಹವಾಮಾನ ಆಧಾರಿತ ಫಸಲ್ ಭೀಮಾ ವಿಮಾ ಯೋಜನೆಯಲ್ಲಿ ಸಹಕಾರಿ ಸಂಘಗಳ ಮೂಲಕ ವಿಮಾ ಕಂತು ನೀಡಿದ ಕೃಷಿಕರಿಗೆ ಹಣ ಬಿಡುಗಡೆ ಆಗ್ತಾ ಇದೆ ಎಂದು ಡಿಸಿಸಿ ಬ್ಯಾಂಕ್‍ನ ಮಾರಾಟ ಅಧಿಕಾರಿ ಸಂತೋಷ್ ಮರಕಡ ಹೇಳಿದ್ದಾರೆ. 1.5 ಕೋಟಿ ಬಿಡುಗಡೆ ಆಗಿದ್ದು. ಕಾಳುಮೆಣಸು ಕೃಷಿಕರಿಗೆ ಈಗ ಹಣ ಬಿಡುಗಡೆಯಾಗುತ್ತಿದ್ದು ಅಡಕೆ ಕೃಷಿಕರಿಗೆ ಕೆಲವೇ ದಿನದಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದು ಹೇಳಿದರು. ಫಸಲ್ ಭೀಮಾ ಯೋಜನೆಯಲ್ಲಿ ಒಟ್ಟು 23 ಕೋಟಿ ರೂ ಬಿಡುಗಡೆ ಆಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಹಕಾರಿ ಯೂನಿಯನ್‍ನ ಪದಾಧಿಕಾರಿಗಳಾದ ಪಿ.ಸಿ.ಜಯರಾಮ, ಮುಳಿಯ ಕೇಶವ ಭಟ್, ಉದಯಕುಮಾರ್ ಬೆಟ್ಟ, ಸೋಮಶೇಖರ ಕೊಯಿಂಗಾಜೆ, ಶೈಲೇಶ್ ಅಂಬೆಕಲ್ಲು, ಹರೀಶ್ ಉಬರಡ್ಕ, ವೆಂಕಟ್ರಮಣ ಮುಳ್ಯ, ಕೃಪಾಶಂಕರ ತುದಿಯಡ್ಕ, ಭಾಗೀರಥಿ ಮುರುಳ್ಯ, ಶಾರದಾ ಶೆಟ್ಟಿ ಉಬರಡ್ಕ, ಲಿಂಗಪ್ಪ ಗೌಡ, ರಾಮಕೃಷ್ಣ ರೈ ಮತ್ತಿತರರು ಉಪಸ್ಥಿತರಿದ್ದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಕಲಿ, ಕಳಪೆ ಗುಣಮಟ್ಟದ ರಸಗೊಬ್ಬರ ಪೂರೈಕೆ | ಕಠಿಣ ಕ್ರಮಕ್ಕೆ  ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ನಿರ್ದೇಶನ
July 17, 2025
10:13 PM
by: The Rural Mirror ಸುದ್ದಿಜಾಲ
ಮಂಡ್ಯದಲ್ಲಿ  ಸ್ವಸಹಾಯ ಸಂಘದ ಮಹಿಳೆಯರಿಗೆ ಮೇಕೆ, ಕುರಿ, ಕೋಳಿ ಸಾಕಾಣಿಕೆ ಅವಕಾಶ
July 17, 2025
10:01 PM
by: The Rural Mirror ಸುದ್ದಿಜಾಲ
ಇಂಧನ ಆಮದು ದೇಶಗಳ ಗುಂಪು ವಿಸ್ತರಿಸಿದ ಭಾರತ – 2 ಲಕ್ಷ ಚ.ಕಿ.ಮೀ. ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಪರಿಶೋಧನೆ
July 17, 2025
9:51 PM
by: The Rural Mirror ಸುದ್ದಿಜಾಲ
ಮುಳ್ಳಯ್ಯನಗಿರಿಗೆ 600 ವಾಹನಗಳಿಗೆ ಪ್ರವೇಶ | ವಾಹನಗಳ ದಟ್ಟಣೆ ನಿಯಂತ್ರಿಸಲು ಕ್ರಮ
July 17, 2025
9:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group