ಆಂಗ್ಲ ಮಾಧ್ಯಮ ಶಿಕ್ಷಣದ ಯೋಜನೆಯಿಂದ ಸರಕಾರಿ ಶಾಲೆಗಳ ಪುನಶ್ಚೇತನ

Advertisement

ಬೆಳ್ಳಾರೆ :  ಆಂಗ್ಲಮಾಧ್ಯಮದ ಶಿಕ್ಷಣ ವ್ಯವಸ್ಥೆಯಿಂದ ಸರಕಾರಿ   ಶಾಲೆಗಳ ಗುಣಮಟ್ಟವೂ ಹೆಚ್ಚುತ್ತದೆ. ಆಂಗ್ಲ ಮಾಧ್ಯಮ ಶಿಕ್ಷಣದ ಯೋಜನೆಯು ಸರಕಾರಿ ಶಾಲೆಗಳ ಪುನಶ್ಚೇತನಕ್ಕೆ ಕಾರಣವಾಗುತ್ತದೆ ಎಂದು ಶಾಸಕ ಎಸ್.ಅಂಗಾರ ಹೇಳಿದರು.

Advertisement

ಅವರು ಮುರುಳ್ಯದ ಸ ಹಿ ಪ್ರಾ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರು. ಇಂದು ಜನರ ಅಪೇಕ್ಷೆ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವುದಾಗಿರುತ್ತದೆ. ಖಾಸಗಿ ವ್ಯವಸ್ಥೆಗಳ ಉಪಟಳದಿಂದಾಗಿ ಸರಕಾರಿ ಶಾಲೆಗಳು ಕಡಿಮೆಯಾಗುತ್ತಿದೆ ಎಂದರು.

Advertisement
Advertisement

ಮುಖ್ಯ ಅತಿಥಿಯಾದ ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಈರಯ್ಯ ಡಿ.ಎನ್ ಮಾತನಾಡಿ ಆಂಗ್ಲ ಭಾಷೆಯಲ್ಲಿ ವಿದ್ಯಾರ್ಜನೆಗೈದವರು ಬುದ್ದಿವಂತರಲ್ಲ, ಸರಕಾರಿ ಶಾಲಾ ವಿದ್ಯಾರ್ಥಿಗಳು ದಡ್ಡರಲ್ಲ. ಸರಕಾರಿ ಉದ್ಯೋಗಿಗಳ ಪೈಕಿ ಬಹುತೇಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮೇಲುಗೈಯಾಗಿದೆ ಎಂದರು.

ತರಗತಿ ಕೊಠಡಿಯನ್ನು ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್ ಮನ್ಮಥ ಉದ್ಘಾಟಿಸಿದರು. ಸ್ಮಾರ್ಟ್ ಟಿ.ವಿಯನ್ನು ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಶಾಲಾರ್ಪಣೆಗೊಳಿಸಿದರು. ಆಟದ ಮನೆಯನ್ನು ಸುಳ್ಯ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶುಭದ ಎಸ್.ರೈ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ ಮಹದೇವ ದೀಪ ಬೆಳಗಿದರು. ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್ ಮನ್ಮಥ ರಂಗಮನೆಗೆ ಒಂದು ಲಕ್ಷ ರೂಪಾಯಿಗಳ ಅನುದಾನ ನೀಡಿದ್ದು, ಇನ್ನೂ ಹೆಚ್ಚಿನ ಅನುದಾನ ಒದಗಿಸಲು ಭರವಸೆ ನೀಡಿದರು.

Advertisement

ವೇದಿಕೆಯಲ್ಲಿ ಪಂಜ ಗ್ರಾ.ಪಂ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ವೆಂಕಟ್ ವಳಲಂಬೆ, ಎಣ್ಮೂರು ಗ್ರಾ.ಪಂ ಉಪಾಧ್ಯಕ್ಷ ಕರುಣಾಕರ ಹುದೇರಿ, ಸದಸ್ಯೆ ಗೀತಾ ಪೂದೆ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಆಲಂಕಾರು ಶಾಲಾ ಮುಖ್ಯಗುರು ನಿಂಗರಾಜು, ರಾಷ್ಟ್ರಪ್ರಶಸ್ತಿ ಪುರಸ್ಕೃ ತ ಸಂಶೋಧಕ ರಾಘವ ಗೌಡ ಪಲ್ಲತ್ತಡ್ಕ, ಜಯಂತ ಕೆ ಸುದೇಶ್ ರೈ, ಅವಿನಾಶ್ ದೇವರಮಜಲು, ಬಾಲಕೃಷ್ಣ ಕೊಟ್ಟಾರ, ಸುಂದರ ಉಪಸ್ಥಿತರಿದ್ದರು. ಎಸ್‍ಡಿಎಂಸಿ ಅಧ್ಯಕ್ಷೆ ಮಧು ಪಿ.ಆರ್ ಪ್ರಸ್ತಾವನೆಗೈದರು.

ಮುಖ್ಯಶಿಕ್ಷಕಿ ಚಂದ್ರಿಕಾ ಸ್ವಾಗತಿಸಿ, ಐತ್ತಪ್ಪ ಅಲೆಕ್ಕಾಡಿ ವಂದಿಸಿದರು. ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಆಂಗ್ಲ ಮಾಧ್ಯಮ ಶಿಕ್ಷಣದ ಯೋಜನೆಯಿಂದ ಸರಕಾರಿ ಶಾಲೆಗಳ ಪುನಶ್ಚೇತನ"

Leave a comment

Your email address will not be published.


*