ಪಂಜ: ಅಡಿಕೆ ಮರ ಏರುವ ತರಬೇತಿ ಶಿಬಿರ ಈಗ ಆಂದೋಲನದ ರೂಪ ಪಡೆಯುತ್ತಿದೆ. ಸಹಕಾರಿ ಸಂಘಗಳು ಮುಂಚೂಣಿಯಲ್ಲಿ ನಿಂತು ಅಡಿಕೆ ಬೆಳೆಗಾರರ ರಕ್ಷಣೆಯ ಕಡೆಗೆ ಹೆಜ್ಜೆ ಇಟ್ಟಿವೆ. ಅಡಿಕೆ ಮರ ಏರುವ ತರಬೇತಿ ಮೂಲಕ ಸ್ವ ಉದ್ಯೋಗ, ಕೃಷಿ ರಕ್ಷಣೆಯ ಕಡೆಗೆ ಮನಸ್ಸು ಮಾಡಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ ವಿಟ್ಲ ಸಿಪಿಸಿಆರ್ ಐ ವಠಾರದಲ್ಲಿ ಅಡಿಕೆ ಮರ ಏರುವ ತರಬೇತಿ ಶಿಬಿರ ” ಅಡಿಕೆ ಕೌಶಲ್ಯ ಪಡೆ ” ರಚನೆ ಆಗಿತ್ತು. ಅದೇ ಹುಮ್ಮಸ್ಸಿನಲ್ಲಿ ಮತ್ತೊಂದು ಶಿಬಿರ ನಡೆಯಿತು. ಎರಡೂ ಶಿಬಿರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದು ಇಡೀ ಜಿಲ್ಲೆಗೆ, ಅಡಿಕೆ ಬೆಳೆಗಾರರಿಗೆ ಉತ್ತಮ ಸಂದೇಶ ನೀಡಿತು. ಇದರ ಬೆನ್ನಲ್ಲೇ ಸಹಕಾರಿ ಸಂಘಗಳ ಮೂಲಕ ಜಿಲ್ಲೆಯಲ್ಲಿ ಇಂತಹ ಶಿಬಿರ ನಡೆಯುವ ಬಗ್ಗೆ ಯೋಚನೆ ಆರಂಭವಾಯಿತು.
ಇದೀಗ ಆ ಯೋಚನೆ ಕಾರ್ಯರೂಪಕ್ಕೆ ಬಂದಿದೆ. ಈಗಾಗಲೇ ಪೆರ್ಲದಲ್ಲಿ ಅಡಿಕೆ ಮರ ಏರುವ ತರಬೇತಿ ಶಿಬಿರ ಸಹಕಾರಿ ಸಂಘದ ಮೂಲಕ ನಡೆದಿದೆ. ಇದೀಗ ಪ್ರೇರಣೆ ಪಡೆದ ಇನ್ನೂ ಹಲವಾರು ಸಹಕಾರಿ ಸಂಘಗಳೂ ಮುಂದೆ ಬಂದಿವೆ. ಗ್ರಾಮೀಣ ಭಾಗದಲ್ಲಿ ನುರಿತ ಕಾರ್ಮಿಕರ ತಯಾರು ಮಾಡುವುದು ಹಾಗೂ ಸ್ವ ಉದ್ಯೋಗಕ್ಕೆ ಅವಕಾಶ ನೀಡುವುದು ಈಗ ಮುಖ್ಯ ಉದ್ದೇಶವಾಗಿದೆ.
ಶಿಬಿರದ ಬಗ್ಗೆ ಪಂಜ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಹೀಗೆ ಹೇಳುತ್ತಾರೆ,
ಶಿಬಿರದ ಬಗ್ಗೆ ಮುಖ್ಯ ತರಬೇತುದಾರ ಅಣ್ಣು ನಾಯ್ಕ್ ಹೀಗೆ ಹೇಳುತ್ತಾರೆ,
ಪಂಜದಲ್ಲಿ ಈಗ ನಡೆಯುತ್ತಿರುವ ಶಿಬಿರವನ್ನು 3 ಸಹಕಾರಿ ಸಂಘಗಳು ಜೊತೆಯಾಗಿ ಸೇರಿ ಮಾಡುತ್ತಿದೆ. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಗುತ್ತಿಗಾರು ಮತ್ತು ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಶ್ರಯದಲ್ಲಿ ಜೇಸಿಐ ಪಂಜ ಪಂಚಶ್ರೀ ಮತ್ತು ಲಯನ್ಸ್ ಪಂಜ ಸಹಕಾರದೊಂದಿಗೆ ಶಿಬಿರ ನಡೆಯುತ್ತಿದೆ.
(ಪಂಜದಲ್ಲಿ ನಡೆಯುತ್ತಿರುವ ಶಿಬಿರ)
ಶಿಬಿರದ ಬಗ್ಗೆ ಕೃಷಿಕ ಸುರೇಶ್ಚಂದ್ರ ಕಲ್ಮಡ್ಕ ಹೀಗೆ ಅಭಿಪ್ರಾಯಪಡುತ್ತಾರೆ,
ಸಹಕಾರಿ ಸಂಘಗಳು ಈಗ ಅಡಿಕೆ ಮರ ಏರುವ ಶಿಬಿರವನ್ನು ಆಂದೋಲನ ರೂಪದಲ್ಲಿ ಮಾಡಿ ಕೃಷಿಕರ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇದೇ ಪ್ರೇರಣೆಯಲ್ಲಿ ಸುಳ್ಯ ತಾಲೂಕಿನ ವಿವಿಧ ಸಹಕಾರಿ ಸಂಘಗಳು ಆಸಕ್ತಿಯನ್ನು ವಹಿಸಿವೆ. ಜಿಲ್ಲೆಯ ವಿವಿಧ ಸಹಕಾರಿ ಸಂಘಗಳೂ ಮುಂದೆ ಬಂದಿವೆ. ಹೀಗಾಗಿ ಅಡಿಕೆಗೆ ಭವಿಷ್ಯವನ್ನು ಸಹಕಾರಿ ಸಂಘಗಳೇ ರೂಪಿಸುತ್ತಿವೆ.
This slideshow requires JavaScript.
ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿ ಅಭಿಪ್ರಾಯ ಹೀಗಿದೆ,
ಪಂಜದ ಶಿಬಿರದ ತರಬೇತುದಾರರು ಇವರು,