ಆರೋಗ್ಯವಂತ ಸಮಾಜಕ್ಕಾಗಿ ಸಾವಯವ ಬದುಕು ಅನಿವಾರ್ಯ-ಸಾವಯವ ಹಬ್ಬ ವಿಚಾರಗೋಷ್ಠಿಯಲ್ಲಿ ಸಂಶುದ್ಧೀನ್ ಸಂಪ್ಯ

January 5, 2020
5:23 PM

ಪುತ್ತೂರು: ರಾಸಾಯನಿಕ ಬಳಕೆಯಿಂದಾಗಿ ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥಗಳು ವಿಷಮಯವಾಗಿದ್ದು, ಹಲವಾರು ರೋಗಗಳಿಗೆ ಕಾರಣವಾಗುತ್ತಿದೆ. ಆರೋಗ್ಯವಂತ ಸಮಾಜಕ್ಕಾಗಿ ಸಾವಯವ ಬದುಕು ಅನಿವಾರ್ಯವಾಗಿದೆ ಎಂದು ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ಧೀನ್ ಸಂಪ್ಯ ಹೇಳಿದರು.

ಅವರು ಶನಿವಾರ ನವಚೇತನ ಸ್ನೇಹಸಂಗಮ ಪುತ್ತೂರು, ಜೆಸಿಐ ಪುತ್ತೂರು ಇವುಗಳ ಆಯೋಜನೆಯಲ್ಲಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ 2 ದಿನಗಳ ಕಾಲ ನಡೆಯುತ್ತಿರುವ ಸಾವಯವ ಹಬ್ಬದಲ್ಲಿನ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದಿನ ಜನರು ಸಾವಯವ ಪದ್ದತಿಯನ್ನು ಮಾತ್ರ ಅಳವಡಿಸಿಕೊಂಡಿದ್ದ ಕಾರಣ ಆರೋಗ್ಯವಂತರಾಗಿ ದೀರ್ಘಾಯ್ಯುಷಿಗಳಾಗಿ ಬದುಕಿದ್ದರು. ಆದರೆ ಇಂದಿನ ಜನಾಂಗ ಹೆಚ್ಚಿನ ಮಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಕಂಡು ಬರುತ್ತದೆ. ಇದಕ್ಕೆಲ್ಲಾ ವಿಷಕಾರಕ ಆಹಾರ ಸೇವನೆಯೂ ಮುಖ್ಯ ಕಾರಣವಾಗಿದ್ದು, ಇದನ್ನು ತಡೆಯುವ ಪ್ರಯತ್ನಗಳಾಗಬೇಕು. ಸಾವಯವ ಆಹಾರ ಸೇವನೆ ಗುರಿ ನಮ್ಮದಾಗಬೇಕು ಎಂದರು.

`ಸಾವಯವ ಬದುಕು’ ಕುರಿತು ವಿಷಯ ಮಂಡಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ವಿಶ್ವೇಶ್ವರ ಸಜ್ಜನ ಅವರು ಕೃಷಿ ಭೂಮಿಯು ಕೃಷಿಕನಿಗೆ ದೇವಾಲಯವಿದ್ದಂತೆ. ಕೃಷಿ ಕೆಲಸ ಎಂದಿಗೂ ಅವಮಾನಕಾರಿಯಲ್ಲ. ಅದೊಂದು ಅಭಿಮಾನವಾಗಿದೆ. ಆದರೆ ಕೃಷಿಕರನ್ನು ನೋಡುವ ದೃಷ್ಠಿಕೋನವು ಬದಲಾಗಬೇಕಾದ ಅನಿವಾರ್ಯತೆಯಿದೆ. ರೈತನ ಬೆಳೆಗೆ ಆತನೇ ಬೆಲೆ ನಿಗದಿಪಡಿಸುವ ವಾತಾವರಣವನ್ನು ಸೃಷ್ಠಿಸಬೇಕಾಗಿದೆ ಎಂದರು.

`ಸಾವಯವ ಕೃಷಿ ವೈವಿದ್ಯ’ ಕುರಿತು ವಿಷಯ ಮಂಡಿಸಿದ ಕೃಷಿಕ ಮಡಿಕೇರಿಯ ಸಿವಿಲ್ ಇಂಜಿನಿಯರ್ ಶಿವಕುಮಾರ ಮಾತನಾಡಿ ಕೃತಿಯ ವಿವಿಧ ಆಯಾಮಗಳ ಬಗ್ಗೆ ವಿವರಿಸಿದರು. ಹಲವು ಕೃಷಿ ಅಧ್ಯಯನಕಾರರು, ತಜ್ಞರ ಬಗ್ಗೆ ವಿವರ ನೀಡಿದ ಅವರು ಕೃಷಿಯು ಎಂದಿಗೂ ನಮ್ಮನ್ನು ಸೋಲಿಸುವುದಿಲ್ಲ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಭತ್ತದ ಕೃಷಿಕ ಕೊಡಿಪ್ಪಾಡಿಯ ರಘುಪತಿ ಏರ್ಕಡಿತ್ತಾಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಂಕಣಕಾರ, ಲೇಖಕ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ
ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ
April 1, 2026
6:13 AM
by: ಮಿರರ್‌ ಡೆಸ್ಕ್
ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ
April 1, 2026
6:07 AM
by: ಮಿರರ್‌ ಡೆಸ್ಕ್
ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್
April 1, 2026
5:56 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror