ದೇವ: ದೇವ ಗೆಳೆಯರ ಬಳಗ, ಜ್ಯೋತಿಲಕ್ಷ್ಮೀ ಮಹಿಳಾ ಮಂಡಲ, ಕಿ.ಪ್ರಾ.ಶಾಲೆ, ಅಂಗನವಾಡಿ ಕೇಂದ್ರ ಇವುಗಳ ಜಂಟಿ ಆಶ್ರಯದಲ್ಲಿ 29 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಆ.24 ರಂದು ದೇವ ಶಾಲಾ ವಠಾರದಲ್ಲಿ ನಡೆಯಲಿದೆ.
ಪುರುಷರಿಗೆ, ಮಹಿಳೆಯರಿಗೆ ,ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ, 5 ವರ್ಷದೊಳಗಿನ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷ ಯೋಗಿಶ್ ದೇವ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷ ದಿವಾಕರ ಮುಂಡೋಡಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸಂತೋಷ್ ಕುಮಾರ್ ರೈ, ದೇವಚಳ್ಳ ಗ್ರಾಮ ಲೆಕ್ಕಾಧಿಕಾರಿ ಮಧುಕುಮಾರ್ , ಗುತ್ತಿಗಾರು ರಬ್ಬರ್ ಸೊಸೈಟಿಯ ಬಾಲಕೃಷ್ಣ ಸೋನಮನೆ, ಗುತ್ತಿಗಾರು ಪಿಎಸಿ ಬ್ಯಾಂಕ್ ನ ನಿವೃತ್ತ ಉಪಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್ ಮುಂಡೋಡಿ ಆಗಮಿಸಲಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel