ಇಂದು ಶಾಲೆ ಪುನರಾರಂಭ: ಅಮ್ಮಾ…… ಎಲ್ಲಿದೆ ಚೀಲ, ಎಲ್ಲಿದೆ ಪುಸ್ತಕ…..!

Advertisement

ಸುಳ್ಯ: ಬೇಸಿಗೆ ರಜೆ ಕಳೆದು ಶಾಲೆ ಇಂದು ಪುನರಾರಂಭಗೊಳ್ಳುತ್ತಿದೆ. ಶಾಲೆಯಲ್ಲಿ ಸಂಭ್ರಮ ಮನೆ ಮಾಡಲಿದೆ. ಮಕ್ಕಳಿಗೆ ಹಳೆಯ ಗೆಳೆಯರು, ಹೊಸ ಗೆಳೆಯರು ಸಿಕ್ಕಿ ರಜೆಯ ಮಜಾ ಚರ್ಚಿಸುವ ಹೊತ್ತು ಬಂದಿದೆ. ಅದಕ್ಕೂ ಮೊದಲು,  ಅಮ್ಮಾ… ಚೀಲ ಎಲ್ಲಿದೆ, ಪುಸ್ತಕ ಎಲ್ಲಿದೆ… ಬೇಗ ಬೇಗ ಲೇಟಾಯಿತು ಶಾಲೆಗೆ……  ಎಂದು ತಡಕಾಡುವ ಹೊತ್ತು ಶುರುವಾಗಿದೆ.

Advertisement

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29 ರಂದು ಆರಂಭಗೊಳ್ಳುತ್ತಿದೆ.  ಸುದೀರ್ಘ‌ ರಜೆಯ ಬಳಿಕ ವಿದ್ಯಾರ್ಥಿಗಳು ಶಾಲೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿ ಮೇ 29ರಂದು ಪ್ರಾರಂಭೋತ್ಸವ ನಡೆಯಲಿದೆ. ಎಲ್ಲಾ ಶಾಲೆಗಳಲ್ಲೂ ಸ್ವಾಗತ ಕಾರ್ಯಕ್ರಮ ನಡೆಯಬೇಕು. ಇದಕ್ಕಾಗಿಯೇ ಶಾಲೆಯಲ್ಲಿ  ಸಿದ್ಧತೆ ನಡೆಯಬೇಕು. ಶಾಲೆಗಳನ್ನು ತಳಿರು ತೋರಣ ಗಳಿಂದ ಸಿಂಗರಿಸಬೇಕು.

Advertisement
Advertisement

ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪಠ್ಯಪುಸ್ತಕಗಳು ಉಚಿತವಾಗಿ ದೊರೆಯುತ್ತವೆ.  ಸರಕಾರದಿಂದ ಈಗಾಗಲೇ ಶೇ.75ರಷ್ಟು ಪಠ್ಯಪುಸ್ತಕಗಳು ಸರಬರಾಜು ಆಗಿದ್ದು, ಶಾಲಾ ಆರಂಭೋತ್ಸವದಂದೇ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲು ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ಇದೆಲ್ಲಾ ಸರಿ. ಈ ಬಾರಿ ಮಳೆ ಇನ್ನೂ ಶುರುವಾಗಿಲ್ಲ. ಬಿಸಿಲಿನ ಕಾರಣದಿಂದ ಸೆಖೆಯಲ್ಲಿ ಕ್ಲಾಸಲ್ಲಿ  ಕುಳಿತುಕೊಳ್ಳುವುದು  ಹೇಗೆ ಎಂಬುದು ಹೆತ್ತವರ ತಲೆಬಿಸಿ. ವಿಪರೀತ ಬೆವರುತ್ತದೆ, ಹಿಂದೆಲ್ಲಾ ಆದಂತೆ ಜೂನ್ ಮೊದಲ ವಾರದಲ್ಲಿ ಶಾಲೆ ಪುನರಾರಂಭವಾದರೆ ಸಾಕಿತ್ತು ಎಂದು  ಹೆತ್ತವರು ಹೇಳುತ್ತಾರೆ.

Advertisement

 

 

Advertisement

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಇಂದು ಶಾಲೆ ಪುನರಾರಂಭ: ಅಮ್ಮಾ…… ಎಲ್ಲಿದೆ ಚೀಲ, ಎಲ್ಲಿದೆ ಪುಸ್ತಕ…..!"

Leave a comment

Your email address will not be published.


*