ಇದು ‘ಕುಂಡಿಗೆ’ ಆಮಂತ್ರಣ..! , ಇದು ಆಂದೋಳನದ ಭಾಗ

May 4, 2019
7:00 AM

ಪುತ್ತೂರು: ಒಂದು ಆಂದೋಳನವು ಬದುಕಿನ ಭಾಗವಾದಾಗ ಅದು ಅನುಭವವಾಗುತ್ತದೆ, ಅನುಭಾವವಾಗುತ್ತದೆ. ಬದುಕಿನ ಭಾಗವಾಗುವ ಆಂದೋಳನಗಳಲ್ಲಿ ಹೋರಾಟದ ಕಿಚ್ಚಿಲ್ಲ, ಬಣ್ಣಗಳಿಲ್ಲ, ಧ್ವಜಗಳಿಲ್ಲ, ಘೋಷಣೆಗಳಿಲ್ಲ. ಅಲ್ಲಿರುವುದು ಸಾತ್ವಿಕತೆ ಒಂದೇ!

Advertisement
Advertisement
Advertisement

ಬಂಟ್ವಾಳ ತಾಲೂಕಿನ ಕೇಪು ಉಬರು ‘ಹಲಸು ಸ್ನೇಹಿ ಕೂಟ’ವು ದಶಕದೀಚೆಗೆ ಊಟದ ಬಟ್ಟಲನ್ನು ವಿಷಮುಕ್ತಗೊಳಿಸುವ ಆಂದೋಳನವನ್ನು ಸದ್ದಿಲ್ಲದೆ ಮಾಡಿದೆ, ಮಾಡುತ್ತಿದೆ. ಕೂಟದ ತೆಕ್ಕೆಗೆ ಬಂದ ಕುಟುಂಬಗಳ ಊಟದ ಮೇಜುಗಳಲ್ಲಿ ಸಾವಯವ ಉತ್ಪನ್ನಗಳಿಗೆ ಸ್ಥಾನ, ಮಾನ. ಹಲಸು, ಮಾವು, ಸಿರಿಧಾನ್ಯ, ತರಕಾರಿ, ಸೊಪ್ಪು.. ಹೀಗೆ ಅನ್ಯಾನ್ಯ ಒಳಸುರಿಗಳು ಖಾದ್ಯಗಳ ಮೂಲವಸ್ತುಗಳು.
ತರಬೇತಿ, ಪ್ರಾತ್ಯಕ್ಷಿಕೆ, ಮೇಳ ಮೊದಲಾದ ಪ್ರಕ್ರಿಯೆಗಳಿಂದ ಹಲಸು ಸ್ನೇಹಿ ಕೂಟವು ಸುಮನಸಿಗರ ಒಂದು ತಂಡವಾಗಿ ರೂಪುಗೊಂಡಿದೆ. ಹಸಿರು ಎನ್ನುವುದು ಕೇವಲ ಪ್ರಕೃತಿ, ಆಹಾರ ಇಷ್ಟಕ್ಕೆ ಸೀಮಿತವಾಗಿಲ್ಲ. ಅದರ ಅರಿವನ್ನು ಬಿಂಬಿಸುವ ಹಲವಾರು ‘ಕೆಣಿ’ಗಳನ್ನೂ ಅನುಷ್ಠಾನಗೊಳಿಸಿದೆ. ಈ ರೀತಿಯ ಕೆಣಿಗಳು ಮನದೊಳಗೆ ಗಾಢವಾಗಿ ಇಳಿದ ಪರಿಣಾಮಗಳ ಫಲಿತಾಂಶ ಇಲ್ಲಿದೆ ನೋಡಿ.

Advertisement


ಇದು ರಾಧಾಕೃಷ್ಣ ಶರ್ಮ ಮುಳಿಯ ಇವರ ವಿವಾಹದ ಆಮಂತ್ರಣ. ಬಾಳೆಯ ಕುಂಡಿಗೆಯ (ಪೂಂಬೆ) ದಳಗಳಾಕೃತಿಯ ವಿನ್ಯಾಸ. ಮೂರು ಎಸಳುಗಳ ಆರು ಪುಟಗಳಲ್ಲಿ ಮದುವೆಯ ವಿವರಗಳು. ಬಂಟ್ವಾಳದ ಕಲಾವಿದ ಮೌನೀಶ ಮಲ್ಯರ ವಿನ್ಯಾಸ. ಅಧ್ಯಾಪಕ ಅರವಿಂದ ಕುಡ್ಲರ ಸಂಯೋಜನೆ. ಮುಳಿಯ ಶರ್ಮ ಮನೆಮಂದಿಯ ಕಲ್ಪನೆ.
ಫಕ್ಕನೆ ಮೇಲ್ನೋಟಕ್ಕೆ ನೋಡುವಾಗ ಆಮಂತ್ರಣ ಪತ್ರಿಕೆಯ ವಿನ್ಯಾಸದಲ್ಲಿ ಹೊಸತು ಕಾಣದಿರಬಹುದು. ಆದರೆ ಹಸಿರು, ಕೃಷಿಯು ಮನದೊಳಗೆ ಇಳಿದು ‘ನಾವು ಅದೇ’ ಆದಾಗ ಇಂತಹ ಯೋಚನೆಗಳು, ಯೋಚನೆಗಳು ರೂಪುಗೊಳ್ಳುತ್ತವೆ.
ರಾಧಾಕೃಷ್ಣರ ತಂದೆ ಮುಳಿಯ ವೆಂಕಟಕೃಷ್ಣ ಶರ್ಮ. ಇವರು ತಮ್ಮ ಹಿರಿಯ ಮಗನ ವಿವಾಹದ ಆಮಂತ್ರಣವನ್ನು ಹಲಸಿನ ವಿನ್ಯಾಸದಲ್ಲಿ ಅಚ್ಚು ಹಾಕಿಸಿದ್ದರು. ಈ ಮೂಲಕವಾದರೂ ಹಲಸು, ಕುಂಡಿಗೆಗಳು ಮತ್ತೊಮ್ಮೆ ಅನ್ನದ ಬಟ್ಟಲಲ್ಲಿ ಸ್ಥಾನ ಪಡೆದುಕೊಳ್ಳಲಿ, ಅಲ್ವಾ.


ಇಂತಹ ಆಮಂತ್ರಣ ಪತ್ರಿಕೆಯನ್ನು ಒಂದು ಕಲೆಯಾಗಿ, ಆಂದೋಳನದ ಉಪಾಧಿಯಾಗಿ ನೋಡುವ ಮನಸ್ಸುಗಳು ಬೇಕಾಗಿವೆ!

Advertisement

( ನಿರೂಪಣೆ : ನಾ.ಕಾರಂತ ಪೆರಾಜೆ )

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಮೇರಿಕಾ ಪ್ರವಾಸದಲ್ಲಿರುವ ಚಿತ್ರನಟ ರವಿಚಂದ್ರನ್‌ ಅವರಿಗೆ ಹಲ್ಲುನೋವು…! | ಭಾರತೀಯ ದಂತ ವೈದ್ಯೆಯಿಂದ ಚಿಕಿತ್ಸೆ ಪಡೆದ ಚಿತ್ರನಟ |
September 22, 2023
2:28 PM
by: ದ ರೂರಲ್ ಮಿರರ್.ಕಾಂ
PM Kisan AI Chatbot: ರೈತರ ಸಹಾಯಕ್ಕೆ AI : ಪಿಎಂ ಕಿಸಾನ್ ಸ್ಕೀಮ್​ನಲ್ಲಿ ಇನ್ಮುಂದೆ ರೈತರಿಗೆ ಸಹಾಯಕ್ಕೆ ಬರಲಿದೆ ಎಐ ಚಾಟ್​ಬೋಟ್
September 22, 2023
2:18 PM
by: The Rural Mirror ಸುದ್ದಿಜಾಲ
#Rubber | ದೇಶದಲ್ಲಿ ನೈಸರ್ಗಿಕ ರಬ್ಬರ್ ಬಳಕೆ ಹೆಚ್ಚಳ | ಟಯರ್‌ ಉದ್ಯಮಕ್ಕೆ ಈ ಬಾರಿಯೂ ರಬ್ಬರ್‌ ಬೇಡಿಕೆ ನಿರೀಕ್ಷೆ | ರಬ್ಬರ್‌ ಉತ್ಪಾದನೆಯ ಕೊರತೆ |
September 22, 2023
1:51 PM
by: ದ ರೂರಲ್ ಮಿರರ್.ಕಾಂ
#MandyaBandh | ಕಾವೇರಿ ನೀರಿಗಾಗಿ ಮಂಡ್ಯ ಬಂದ್‌ಗೆ ಕರೆ | ಕಾನೂನು ಉಲ್ಲಂಘಿಸಿದ್ರೆ ಕ್ರಮ | ಪ್ರತಿಭಟನಾಕಾರರಿಗೆ ಎಚ್ಚರಿಕೆ ಕೊಟ್ಟ ಗೃಹಸಚಿವ ಜಿ.ಪರಮೇಶ್ವರ್ |
September 22, 2023
1:16 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror