ಇದು ವೈರಲ್ ಸುದ್ದಿ : ಅಡ್ಡಮತದಾನದ ಬಿಸಿ ಬಿಜೆಪಿ ಕಾರ್ಯಕರ್ತರಲ್ಲಿ ಹೀಗಿದೆ…..

Advertisement
Advertisement

ಸೋಶಿಯಲ್ ಮೀಡಿಯಾ ಇಂದು ಪ್ರಬಲವಾಗಿ ಬೆಳೆದಿದೆ. ಹಾಗಂತ ಸೋಶಿಯಲ್ ಮೀಡಿಯಾದ ಸುದ್ದಿಗಳೆಲ್ಲವೂ ಸತ್ಯವೂ ಅಲ್ಲ. ಆದರೆ ವೈರಲ್ ಆದ ಸುದ್ದಿಗಳ ಹಿಂದೆ ಕೆಲವೊಂದು ಸತ್ಯಗಳು ಇರುತ್ತದೆ. ಅಂತಹ ವೈರಲ್ ಆದ ಸುದ್ದಿಗಳಲ್ಲಿ ಈ ಬಾರಿ ಸುಳ್ಯದ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆಯ ಅಡ್ಡಮತದಾನ ಸೇರಿದೆ.

Advertisement

ವೈರಲ್ ಆದ ಸುದ್ದಿ ಹೀಗಿದೆ…… ಅದರ ಸಾರಾಂಶ ಇಲ್ಲಿದೆ… (ಈ ಬರಹ ಸುಳ್ಯನ್ಯೂಸ್.ಕಾಂ ನದ್ದು ಅಲ್ಲ)

Advertisement
Advertisement

 

Advertisement
Advertisement

ಬಂಡಾಯ,ಅಡ್ಡ ಮತದಾನದಿಂದ ಗಮನಸೆಳೆದ ಡಿಸಿಸಿ ಬ್ಯಾಂಕ್ ಚುನಾವಣೆ ಕಳೆದು 2 ತಿಂಗಳು ಆಗುತ್ತ ಬಂದಿದ್ರು ಪಕ್ಷದ ಕಡೆಯಿಂದ ಬಂಡಾಯ ಮತ್ತು ಅಡ್ಡ ಮತದಾನಿಗಳ ಮೇಲೆ ಯಾವುದೇ ಶಿಸ್ತು ಕ್ರಮಗಳು ನಡೆಯದಿರುವುದು ನೋವಿನ ಸಂಗತಿ. ದಕ್ಷಿಣ ಕನ್ನಡ ಸಂಘಟನಾತ್ಮಕ ಜಿಲ್ಲೆಯೆಂದು ಗುರುತಿಸಿಕೊಂಡ ಜಿಲ್ಲೆ, ವ್ಯಕ್ತಿಗಳು ನಗಣ್ಯವಾಗಿ ಸಿದ್ದಾಂತ,ಪಕ್ಷ,ಸಂಘಟನೆಯ ಅಡಿಪಾಯದ ಮೇಲೆ ನಿಂತ ಜಿಲ್ಲೆ.ಯಾಕೋ ಅನೇಕ ವರ್ಷ ಗಳಿಂದ ಸಹಕಾರ ಭಾರತಿ ಯನ್ನು ಚುಕ್ಕಾಣಿ ಹಿಡಿದ ವ್ಯಕ್ತಿಯೊಬ್ಬರು ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಸಹಕಾರ ಭಾರತಿಯನ್ನು ಶರಣಗಾತನಾಗಿ ಮಾಡಿದ್ದು ಸುಳ್ಳಾಲ್ಲ.ಸಹಕಾರ ಭಾರತಿಯ ರಾಷ್ಟ್ರೀಯ ಸದಸ್ಯರು,ಕ್ಯಾಂಪ್ಕೋ ಮಾಜಿ ಅಧ್ಯಕ್ಷರು  ಅನೇಕ ದಿನಗಳ ಹಿಂದೆ ಉಡುಪಿ ಸಹಕಾರ ಭಾರತಿ ಸಭೆಯಲ್ಲಿ ಒಬ್ಬ ಕಾರ್ಯಕರ್ತ ಡಿಸಿಸಿ ಬ್ಯಾಂಕ್,  ಬಗ್ಗೆ ಪ್ರಶ್ನಿಸಿದಾಗ  ಹೇಳಿದ ಉತ್ತರವೇನು ? ಆದ್ರೆ ಈಗ ನೀವೇನು ಮಾಡಿದ್ದು ಮೊನ್ನೆ  ಸನ್ಮಾನ  ?. KMF ವಿಚಾರದಲ್ಲಿ  ತಮಗೆ ಬೇಕಾದ ಹಾಗೇ ಒಪ್ಪಂದ ಮಾಡಿಕೊಂಡು  ಬ್ರಷ್ಟ ನ ಜೊತೆ ಸೇರಿಕೊಂಡು ಸಹಕಾರ ಭಾರತಿ ಮೂಲ ವಿಚಾರಗಳು ಎಲ್ಲಿ ಹೋದವು ?  ಬಂಡಾಯ ಅಭ್ಯರ್ಥಿ ಗಳ  ಪಕ್ಷದಿಂದ ಉಚ್ಚಾಟನೆ ಬಿಡಿ ,ನೋಟಿಸ್ ಕೊಡಲು ಸಮಯವಿಲ್ಲ  ನಾಯಕರಿಗೆ. 7+4 ಶಾಸಕರಿದ್ರು ಒಂದು ಸೀಟು ಪಡೆಯಲು ಸಾಧ್ಯವಾಗದಿರುವದು ನಾಚಿಕೆಯ  ಸಂಗತಿ,ಹಾಗದ್ರೆ ಮೊನ್ನೆ ಚೌಕಿದಾರ್ ಪೇಟ ತೊಟ್ಟು ಇವನ ಜೋತೆ ಕೈಜೋಡಿಸಿದ್ರಲ್ಲ ಮೋದಿ ಗೆ ಮಾಡಿದ ಅವಮಾನವಿದು. ಸುಳ್ಯ ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅವರನ್ನು ಮಠ,ದೇವಸ್ಥಾನ ವಿಚಾರವಾಗಿ ಅನವಶ್ಯಕವಾಗಿ 48 ಗಂಟೆಯಲ್ಲಿ ನೋಟಿಸ್ ಕೊಟ್ಟು ಜವಾಬ್ದಾರಿ ಮುಕ್ತ ಮಾಡಿದ್ರಲ್ಲ ?  ಅವರೇನು ಪಕ್ಷಕ್ಕೆ ಮಾಡಿಲ್ಲ . ಆದ್ರೆ ಸಂಘಟನೆ ವಿರುದ್ಧ ನಿಂತವರ ಮೇಲೆ ಏನು ಕ್ರಮ ಕೈಗೊಂಡಿದ್ದಿರ? ವ್ಯಕ್ತಿಗಿಂತ ಪಕ್ಷ,ಸಂಘಟನೆ ದೊಡ್ಡದು ಅಂತ ನಂಬಿದವರು ಆದ್ರೆ ನೀವೇನು ಮಾಡಿದ್ದ್ದು? ಲಾಭಕ್ಕೆ ಸಹಕಾರ ಭಾರತೀ, ಪಕ್ಷವನ್ನು ದುರುಪಯೋಗ ಮಾಡಿಕೊಂಡಿಲ್ಲವೇ? ಹಣಕ್ಕಾಗಿ ಬಲಿ ಕೊಟ್ಟದ್ದು ವ್ಯಕ್ತಿಯನ್ನಲ್ಲ!ಸಾವಿರಾರು ದೇವದುರ್ಲಭ ಕಾರ್ಯಕರ್ತರ ಪಕ್ಷ ಮತ್ತು ಸಹಕಾರ ಭಾರತಿಯನ್ನಲ್ಲವೇ? ಮೊನ್ನೆ , ಯಾವ ಸಹಕಾರ ಭಾರತಿ, ಆರತಿ ಗೊತ್ತಿಲ್ಲ ಅಂದವರಿಗೆ ಹೂಗುಚ್ಛ ನೀಡಿ ಸನ್ಮಾನ ಮಾಡುತ್ತಿರಲ್ಲ ಸಹಕಾರ ಭಾರತಿ ನಾಯಕರೇ ಒಂದು ಅರ್ಥ ಮಾಡಿಕೊಳ್ಳಿ ಈ ಸಹಕಾರ ಭಾರತಿ ಸಂಘಟನೆಯಿಲ್ಲದಿದ್ರೆ ನಿಮ್ಮನ್ನು ಯಾರು ಮೂಸಿ ನೋಡುವವರು ಇಲ್ಲವಾಯ್ತು! ಅದರಿಂದ ನೀವು ಅಧಿಕಾರ, ನಾಯಕರಾಗಿದ್ದು.

ಛೇ ದಕ್ಷಿಣಕನ್ನಡ ಸಂಘಟನಾ ಬದ್ದ ಕ್ಷೇತ್ರದಲ್ಲಿ ಸಹಕಾರ ಭಾರತಿಯನ್ನು ಒಬ್ಬ ವ್ಯಕ್ತಿಗೆ ಮಾರಿಕೊಂಡ್ರಲ್ಲ ಕಾರ್ಯಕರ್ತ ನಿಮ್ಮನ್ನು ಕ್ಷಮಿಸಲಾರ.

Advertisement

 

(ಹೀಗೊಂದು ಬರಹ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ  ಓಡಾಡುತ್ತಿದೆ. ಇದರ ಬರಹಗಾರ ಯಾರು ಎಂಬುದಕ್ಕಿಂತಲೂ ಸುಳ್ಯ ಸೇರಿದಂತೆ ಜಿಲ್ಲೆಯಲ್ಲಿ  ಈ ಬಗ್ಗೆ ಚರ್ಚೆಯಾಗುತ್ತಿರುವುದು ಸತ್ಯ. ಸುಳ್ಯದಲ್ಲಿ ಇದೇ ವಿಚಾರವಾಗಿ ವಿವಿಧ ಕ್ರಮಗಳು ಆಗಿರುವುದು  ನಿಜ. ಈ ಮೇಲಿನ ಸುದ್ದಿ ಸಾಕಷ್ಟು ವೈರಲ್ ಆದ  ಈ ಹಿನ್ನೆಲೆಯಲ್ಲಿ ಅದೇ ವೈರಲ್ ಸುದ್ದಿಯನ್ನು  ಇಲ್ಲಿ ಪ್ರಕಟಿಸಿದ್ದೇವೆ.  – ಸಂ )

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಇದು ವೈರಲ್ ಸುದ್ದಿ : ಅಡ್ಡಮತದಾನದ ಬಿಸಿ ಬಿಜೆಪಿ ಕಾರ್ಯಕರ್ತರಲ್ಲಿ ಹೀಗಿದೆ….."

Leave a comment

Your email address will not be published.


*