ಊರೆಲ್ಲಾ ಕೊರೊನಾ ವೈರಸ್ ಗೆ ಭೀತಿಗೊಂಡಿದೆ | ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಾಗಿದೆ | ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದೆ ಶಿಬಿರ….! : ಜಿಲ್ಲಾಧಿಕಾರಿಗಳೇ ಇತ್ತ ಗಮನಿಸಿ |

March 22, 2020
10:16 PM

ಸುಬ್ರಹ್ಮಣ್ಯ : ಕೊರೊನಾ ಭೀತಿಯಿಂದ ಇಡೀ ದೇಶಕ್ಕೆ ದೇಶವೇ ಕೊರೊನಾ ವೈರಸ್ ವಿರುದ್ಧ  ಹೋರಾಡುತ್ತಿದೆ. ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿದ್ದು ದೇಶದ ಜನತೆ ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ. ಇದರ ಜೊತೆಗೆ ಮಾ.31 ರ ವರೆಗೆ ದಕ ಜಿಲ್ಲೆಯೂ ಸೇರಿದಂತೆ ದೇಶದ 74 ಜಿಲ್ಲೆಗಳು ಬಂದ್ ಆಗಲಿವೆ. ಮುಂಜಾಗ್ರತಾ ಕ್ರಮವಾಗಿ ದಕ ಜಿಲ್ಲೆಯಲ್ಲಿ ಮಾ.31 ರವರೆಗೆ  ನಿಷೇಧಾಜ್ಞೆ ಜಾರಿಯಾಗಿದೆ.

Advertisement

ಹೀಗಿದ್ದರೂ ಸುಬ್ರಹ್ಮಣ್ಯದಲ್ಲಿ “ತಾಳೆಗಾರಿ ಸಂಶೋದನಾ ಶಿಬಿರ”  ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಸ್ಥಳಿಯ ಗ್ರಾಪಂ ಸದಸ್ಯ ಪ್ರಶಾಂತ್ ಭಟ್ ಅಧಿಕೃತ ಮಾಹಿತಿ ಪಡೆದು ಜಿಲ್ಲಾದಿಕಾರಿಗಳಿಗೆ ದೂರು ನೀಡಿದ್ದಾರೆ.

ಜಿಲ್ಲಾಡಳಿತ ಸಾಂಕ್ರಾಮಿಕ ರೋಗ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸೂಕ್ತ ಆದೇಶ ನೀಡಿದೆ. ಹೀಗಿದ್ದೂ ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತದ ವತಿಯಿಂದ  ದೆಹಲಿ, ಹೈದರಾಬಾದ್ ಗಳ ಸುಮಾರು 30-40 ವ್ಯಕ್ತಿಗಳನ್ನು ಒಗ್ಗೂಡಿಸಿ ಶಿಬಿರ ನಡೆಸುತ್ತಿದೆ. ಹೀಗಾಗಿ ಗ್ರಾಮದ ಜನರ ಆರೋಗ್ಯದ ಹಿತದೃಷ್ಠಿಯಿಂದ ಪೋಲೀಸ್ ಇಲಾಖೆಗೆ, ಕಂದಾಯ ಇಲಾಖೆ, ಹಾಗೂ ಪಂಚಾಯತ್ ಆಡಳಿತದ ಗಮನಕ್ಕೆ ತರಲಾಗಿದೆ ಎಂದು ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಸುಬ್ರಹ್ಮಣ್ಯವು ರಾಜ್ಯದ ಪ್ರಸಿದ್ಧ ಧಾಮಿ೯ಕ ಕ್ಷೇತ್ರವಾಗಿದ್ದು ಶ್ರೀ ಸುಬ್ರಹ್ಮಣ್ಯ ದೇವರ ದಶ೯ನಕ್ಕೂ ಅವಕಾಶವಿಲ್ಲದಿರುವ ಬಿಗು ವಾತಾವರಣದಲ್ಲಿ ಹೊರ ರಾಜ್ಯಗಳಾದ ದೆಹಲಿ, ಹೈದರಾಬಾದ್ ನ ವ್ಯಕ್ತಿಗಳನ್ನು ಸೇರಿಸಿಕೊಂಡು ಶಿಬಿರ ನಡೆಸಿಕೊಂಡು ಕ್ಷೇತ್ರದ ನಾಗರೀಕರ ಜೀವದ ಜೊತೆ, ಕ್ಷೇತ್ರದ ಆರೋಗ್ಯದ ಬಗ್ಗೆ ಅಜಾಗರೂಕರಾಗಿ ಚೆಲ್ಲಾಟವಾಡುತ್ತಾ ಜಿಲ್ಲಾಡಳಿತ, ರಾಜ್ಯಸರಕಾರದ ಆದೇಶವನ್ನು ಗಾಳಿಗೆ ತೂರಿದವರ ಬಗ್ಗೆ ಯಾವುದೇ ಒತ್ತಡಕ್ಕೆ ಮಣಿಯದೇ ಜಿಲ್ಲಾಡಳಿತ ಸೂಕ್ತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಶಾಂತ್ ಭಟ್ ಒತ್ತಾಯ ಮಾಡಿದ್ದಾರೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕುಶಾಲಿ ಗೌಡ, ಬೆಂಗಳೂರು
July 16, 2025
10:47 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಅನ್ವಿತಾ ಸಿ
July 16, 2025
10:39 PM
by: ದ ರೂರಲ್ ಮಿರರ್.ಕಾಂ
ಕರಾವಳಿ ಕರ್ನಾಟಕ, ಕೇರಳ ಭಾರೀ ಮಳೆ ಸಾಧ್ಯತೆ
July 16, 2025
10:18 PM
by: The Rural Mirror ಸುದ್ದಿಜಾಲ
ಕರಾವಳಿ-ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ | ಶಾಲೆಗಳಿಗೆ ಜು.17 ರಂದು ರಜೆ
July 16, 2025
10:07 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group