ಋಣ ಪರಿಹಾರ ಕಾಯ್ದೆ ಬಗ್ಗೆ ಇಲಾಖೆಯಿಂದ ಸ್ಪಷ್ಟನೆ :

August 31, 2019
7:15 PM

ಪುತ್ತೂರು: ಖಾಸಗಿ ಲೇವಾದೇವಿದಾರರಿಂದ ಮತ್ತು ನೋಂದಾವಣೆಗೊಂಡಿರದ ಖಾಸಗಿ ಸಂಸ್ಥೆಯಿಂದ , ಪಡೆದ ಸಾಲವನ್ನು ಋಣ ಮುಕ್ತ ಕಾಯ್ದೆ 2018 ರಂತೆ ಪರಿಗಣಿಸಲು ಅವಕಾಶ ಇರುತ್ತದೆ. ಅಲ್ಲದೆ, ಕರ್ನಾಟಕ  ಋಣ ಪರಿಹಾರ ಕಾಯ್ದೆ 2018 ಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸುವ ಸಂಬಂಧ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿಯನ್ನು ಪುತ್ತೂರು ಸಹಾಯಕ ಆಯುಕ್ತರ ಕಚೇರಿಯಿಂದ ಉಚಿತವಾಗಿ ಪಡೆಯಬಹುದಾಗಿದೆ. ಇದರ ಹೊರತಾಗಿಯೂ, ಅರ್ಜಿಗೆ ಹಣ ನೀಡಿದ್ದಲ್ಲಿ , ಅರ್ಜಿ ಬರೆಯುವುದಕ್ಕೆ ಹಣ ನೀಡಿದ್ದಲ್ಲಿ ,  ಜಿಲ್ಲಾ ಆಡಳಿತ ಅಥವಾ ತಾಲೂಕು ಆಡಳಿತ ಹೊಣೆ ಆಗಿರುವುದಿಲ್ಲ ಎಂದು ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತರ ಪ್ರಕಟಣೆ ತಿಳಿಸಿದೆ.

ಋಣಮುಕ್ತ ಕಾಯ್ದೆಯನ್ವಯ ಖಾಸಗಿ  ಲೇವಾದೇವಿದಾರರಿಂದ ಮತ್ತು ಗಿರವಿದಾರರಿಂದ ಸಾಲ ಪಡೆದಿದ್ದಲ್ಲಿ ಕರ್ನಾಟಕ ಋಣ ಪರಿಹಾರ ಕಾಯ್ದೆ 2018 ರಂತೆ ಪರಿಹಾರ ಪಡೆಯಲು ಅರ್ಹರಿರುವುದಾಗಿ ಪ್ರಕಟಿಸಲಾಗಿದ್ದು, ಈಗ ಅನೇಕ ಫಲಾನುಭವಿಗಳು ದೂರವಾಣಿ ಕರೆ ಮಾಡಿ ಸಹಕಾರಿ ಸಂಘಗಳಲ್ಲಿ, ಬ್ಯಾಂಕ್‍ಗಳಲ್ಲಿ, ಇತರೇ ಹಣಕಾಸು ಸಂಸ್ಥೆಯಿಂದ ಪಡಕೊಂಡ ಸಾಲ, ಚಿನ್ನಾಭರಣಗಳನ್ನು ಅಡವಿಟ್ಟು ಪಡೆದ ಸಾಲಗಳಿಗೆ ಅನ್ವಯಿಸುತ್ತದೆಯಾ ಎಂಬ ಬಗ್ಗೆ ವಿಚಾರಿಸುತ್ತಿದ್ದಾರೆ.

ಈ ಬಗ್ಗೆ ಸ್ಪಷ್ಟವಾಗಿ ಈ ರೀತಿ ತಿಳಿದುಕೊಳ್ಳಬೇಕು, ಸರಕಾರಿ ಕಂಪೆನಿಗಳು/ ಜೀವವಿಮಾ ನಿಗಮ/ ಸಹಕಾರಿ ಸಂಘಗಳು/ ಸೌಹಾರ್ದ ಸಹಕಾರಿ ಸಂಘಗಳು / ಬ್ಯಾಂಕುಗಳು/ ಕರ್ನಾಟಕ ಸಹಕಾರಿ ಸಂಘಗಳ ನೋಂದಣಿ ಕಾಯ್ದೆ 1960 ರಡಿ ನೋಂದಾವಣೆ ಆದ ಅತೀ ಸಣ್ಣ ಹಣಕಾಸು ಸಂಸ್ಥೆಗಳು , ಚಿಟ್ ಫಂಡ್ ಕಾಯ್ದೆಯನ್ವಯ ನೊಂದಾವಣೆಗೊಂಡ ಚಿಟ್ ಕಂಪೆನಿಗಳು ಕರ್ನಾಟಕ ಋಣ ಪರಿಹಾರ ಕಾಯ್ದೆ 2018 ರ ವ್ಯಾಪ್ತಿಗೆ ಒಳಪಡುವುದಿಲ್ಲ. ಖಾಸಗಿ ಲೇವಾದೇವಿದಾರರಿಂದ ಮತ್ತು ನೊಂದಾವಣೆಗೊಂಡಿರದ ಖಾಸಗಿ ಸಂಸ್ಥೆಯಿಂದ , ಪಡೆದ ಸಾಲವನ್ನು ಋಣ ಮುಕ್ತ ಕಾಯ್ದೆ 2018 ರಂತೆ ಪರಿಗಣಿಸಲು ಅವಕಾಶ ಇರುತ್ತದೆ ಎಂದು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 29-03-2026 | ಕರ್ನಾಟಕದಲ್ಲಿ ಮತ್ತೆ ಮಳೆ…! ನಿಮ್ಮ ಜಿಲ್ಲೆಯಲ್ಲಿ ಮಳೆ ಇದೆಯಾ..?
March 29, 2026
2:48 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!
March 28, 2026
2:03 PM
by: ಸಾಯಿಶೇಖರ್ ಕರಿಕಳ
ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!
March 28, 2026
11:07 AM
by: ಮಿರರ್‌ ಡೆಸ್ಕ್
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ
March 28, 2026
7:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror