ಎಂಸಿಜೆ ವಿಭಾಗದಿಂದ ಜನಮನ ಕಾರ್ಯಕ್ರಮ: ಸೇನೆಯ ಸೇವೆ ಶ್ರೇಷ್ಠವಾದದ್ದು : ರಮೇಶ್ ಬಾಬು

September 25, 2019
3:40 PM

ಪುತ್ತೂರು : ನಾವೆಲ್ಲರೂ ಭಾರತದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಬೇಕು. ಅದೇ ರೀತಿ ನಮ್ಮ ಸೈನ್ಯದ ಸೇವೆಯನ್ನು ಸ್ಮರಿಸಬೇಕು. ಏಕೆಂದರೆ ಅವರ ರಕ್ಷಣೆಯನ್ನು ಮಾಡಿಕೊಂಡು ದೇಶ ರಕ್ಷಣೆಯನ್ನು ಮಾಡುತ್ತಾರೆ. ಇನ್ನು ಕೆಲವು ಸಂದರ್ಭ ದೇಶದ ಒಳಗಿನ ದಂಗೆ ಮತ್ತು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸೇನೆಯು ನೀಡುವ ಸೇವೆ ಸರ್ವಶ್ರೇಷ್ಠವಾಗಿದೆ ಎಂದು ನಿವೃತ್ತ ಸೇನಾಧಿಕಾರಿ ರಮೇಶ್ ಬಾಬು ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ನಡೆದ ‘ಜನ ಮನ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಂಗಳವಾರ ಮಾತನಾಡಿದರು.
ಸೈನಿಕರು ಕಾಶ್ಮೀರದಂತಹ ಪ್ರದೇಶದಲ್ಲಿ ತಮಗೆ ಯಾವುದೇ ಸಂಬಂಧವಿಲ್ಲದಿದ್ದರೂ ದೇಶ ಕಾಪಾಡಲು ಇಪ್ಪತ್ತನಾಲ್ಕು ಗಂಟೆ ಸೇವೆಯನ್ನು ಮಾಡುತ್ತಾರೆ. ಇಲ್ಲಿ ಧರ್ಮ, ಜಾತಿ, ಪಂಗಡಗಳು ಎಂಬ ಭೇದಭಾವವಿಲ್ಲ. ರಾಷ್ಟ್ರ ಧ್ವಜದ ಮುಂದೆ ಎಲ್ಲಾ ಧರ್ಮಗಳು ಸಮಾನ. ಸೈನಿಕರು ತಮ್ಮ ವೈಯಕ್ತಿಕ ವಿಷಯವನ್ನು ಬದಿಗಿಟ್ಟು ದೇಶಕ್ಕೋಸ್ಕರ ಸೇನೆಯಲ್ಲಿ ದುಡಿಯುತ್ತಾರೆ, ಇದು ನಿಜವಾದ ದೇಶಪ್ರೇಮ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಡಾ. ಎಚ್.ಜಿ. ಶ್ರೀಧರ ಮಾತನಾಡಿ, ಸೈನ್ಯದ ಜಗತ್ತು ಬೇರೆ ಏಕೆಂದರೆ ಅಲ್ಲಿ ಎದುರಾಳಿಗಳನ್ನು ಎದುರಿಸಿ ದೇಶಕ್ಕೆ ರಕ್ಷಣೆಯನ್ನು ನೀಡುವ ಕೆಲಸವನ್ನು ಸೇವೆಯ ರೂಪದಲ್ಲಿ ಮಾಡುತ್ತಾರೆ. ಹಾಗಾಗಿ ಇಲ್ಲಿ ಸೇವೆಯನ್ನು ಸಲ್ಲಿಸುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ಸಂದರ್ಭ ಉಪನ್ಯಾಸಕಿ ಸುಷ್ಮಿತಾ ಜೆ., ರಾಧಿಕಾ ಕಾನತ್ತಡ್ಕ, ಉಪನ್ಯಾಸಕ ಭರತ್‍ರಾಜ್ ಕರ್ತಡ್ಕ ಉಪಸ್ಥಿತರಿದ್ದರು. ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ ಪ್ರಾಸ್ತಾವಿಸಿದರು. ಉಪನ್ಯಾಸಕಿ ಪ್ರಜ್ಞಾ ಬಾರ್ಯ ವಂದಿಸಿ, ವಿದ್ಯಾರ್ಥಿನಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

“ಜಾಕ್‌ಫ್ರೂಟ್‌ ಹಬ್ಬ”ಕ್ಕೆ ಜನಸಾಗರ – 50 ಕ್ಕೂ ಹೆಚ್ಚು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ
June 6, 2026
11:05 PM
by: ದ ರೂರಲ್ ಮಿರರ್.ಕಾಂ
ಕ್ಯಾಂಪ್ಕೋ ಬ್ರಹ್ಮ ವಾರಣಾಶಿ ಸುಬ್ರಾಯ ಭಟ್‌ ಜನ್ಮಶತಮಾನೋತ್ಸವ ವರ್ಷ – ಅಡಿಕೆ ಬೆಳೆಗಾರರ ಬದುಕು ಬದಲಿಸಿದ ಮಹಾನ್ ದಾರ್ಶನಿಕ
June 6, 2026
10:27 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 06-06-2026 | ಮುಂಗಾರು ಬಂದರೂ ಮಳೆ ಇಲ್ಲ! – ಕರ್ನಾಟಕದಲ್ಲಿ ಮುಂದಿನ ವಾರದ ಹವಾಮಾನ ಹೇಗಿರಲಿದೆ?
June 6, 2026
1:37 PM
by: ಸಾಯಿಶೇಖರ್ ಕರಿಕಳ
ಭಾರತದ ಚೆಸ್ ಇತಿಹಾಸದಲ್ಲಿ ಹೊಸ ಅಧ್ಯಾಯ – ನಾರ್ವೆ ಚೆಸ್ ಕಿರೀಟ ಗೆದ್ದ ಮೊದಲ ಭಾರತೀಯ ಪ್ರಜ್ಞಾನಂದ
June 6, 2026
9:23 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror