ಎಣ್ಮೂರು ಗ್ರಾಪಂ ಸಿಬಂದಿ ವಿರುದ್ಧ ದೂರು

Advertisement
Advertisement
Advertisement

ನಿಂತಿಕಲ್ಲು : ಅಧಿಕಾರ ದುರುಪಯೋಗ ಪಡಿಸಿಕೊಂಡು ಪಂಚಾಯತ್‍ನಲ್ಲಿ ಹಣ ಹಾಗೂ ಇನ್ನಿತರ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿ ಎಣ್ಮೂರು ಗ್ರಾ.ಪಂ ಸಿಬ್ಬಂದಿಯೋರ್ವರ ವಿರುದ್ಧ ಸುಳ್ಯ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಮತ್ತು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಆಡಳಿತ ಮಂಡಳಿ ದೂರು ನೀಡಲು ತೀರ್ಮಾನಿಸಿದೆ.

Advertisement

ಎಣ್ಮೂರು ಗ್ರಾ.ಪಂನಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೋರ್ವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಪಂಚಾಯತ್‍ಗೆ ಜನರಿಂದ ಸಂಗ್ರಹವಾದ ತೆರಿಗೆ ಹಾಗೂ ಇತರ ಮೂಲಗಳಿಂದ ಸಂಗ್ರಹವಾದ ಹಣವನ್ನು ಸ್ವಂತ ಉಪಯೋಗಕ್ಕೆ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು ಈ ವಿಷಯವನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿ ಅವ್ಯವಹಾರ ಮಾಡಿದ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಭರಿಸಿಲಾಗಿತ್ತೆಂದು ತಿಳಿದುಬಂದಿದೆ.

Advertisement

ಅದಾದ ಬಳಿಕ ಕಳೆದ ವಾರದಲ್ಲಿ ಮತ್ತೆ ಇಂತಹುದೇ ಪ್ರಕರಣ ಬೆಳಕಿಗೆ ಬಂದಿದ್ದು ಪಂಚಾಯತ್‍ನ ಬ್ಯಾಂಕ್ ಖಾತೆಯ ಚೆಕ್‍ಗೆ ತಾನೇ ಪಿಡಿಒ ಸಹಿ ಪೋರ್ಜರಿ ಮಾಡಿ ಅಧ್ಯಕ್ಷರ ಸಹಿ ಹಾಕಿಸಿ 40 ಸಾವಿರ ಹಣವನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಬ್ಯಾಂಕ್ ಸಿಬ್ಬಂದಿ ಅನುಮಾನ ಬಂದು ಸಹಿ ಪರಿಶೀಲಿಸಿದಾಗ ಪೋರ್ಜರಿ ಮಾಡಿರುವುದಾಗಿ ತಿಳಿದುಬಂದಿದೆ. ಈ ಪದೇ ಪದೇ ಇಂತಹ ಪ್ರಕರಣಗಳು ಸಿಬ್ಬಂದಿಯಿಂದ ನಡೆಯುತ್ತಿರುವುದಾಗಿ ಆರೋಪಿಸಿ ಸಿಬ್ಬಂದಿಯ ಕರ್ತವ್ಯ ಲೋಪದ ವಿರುದ್ಧ ತಾ.ಪಂ ಇ.ಓಗೆ ಹಾಗೂ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸಿಬ್ಬಂದಿಯನ್ನು ಸಂಪರ್ಕಿಸಿದಾಗ ತನ್ನ ಮೇಲಿನ ಆರೋಪವನ್ನು ಅವರು ನಿರಾಕರಿಸಿರುತ್ತಾರೆ.

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಎಣ್ಮೂರು ಗ್ರಾಪಂ ಸಿಬಂದಿ ವಿರುದ್ಧ ದೂರು"

Leave a comment

Your email address will not be published.


*