ಎಣ್ಮೂರು ಪ್ರೌಡಶಾಲೆಯಲ್ಲಿ ಭತ್ತದ ನಾಟಿ ಶಿಕ್ಷಣ

August 29, 2019
12:00 PM

ಎಣ್ಮೂರು : ಎಣ್ಮೂರು ಸರಕಾರಿ ಪ್ರೌಡಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಅನ್ನ ನೀಡುವ ಭತ್ತದ ಬೇಸಾಯದ ನೇಜಿ ನಾಟಿ ಕುರಿತು ತಿಳುವಳಿಕೆ ನೀಡುವ ಶಿಕ್ಷಣದೊಂದಿಗೆ ನೇಜಿ ಕೃಷಿ ಪಾಠ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಶಾಲಾ ಎಸ್‍ಡಿಎಂಸಿ ಮಾಜಿ ಅದ್ಯಕ್ಷ ಸೋಮಪ್ಪ ಗೌಡ ಕುಳ್ತಿಗೆ ನೇಜಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು ಭತ್ತದಿಂದ ಅಕ್ಕಿ ತಯಾರಿಸುವ ವಿಧಾನ ಮತ್ತು ಸಾವಯುವ ಜೀನನಾಂಶಕ ಅಕ್ಕಿಯ ಮಹತ್ವದ ಕುರಿತು ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಶೀತಲ್ ಭತ್ತ ಬೇಸಾಯದಲ್ಲಿ ಗದ್ದೆ ಹದಗೊಳಿಸುವ ನಾಟಿ ನೆಡುವ ವಿಧಾನಗಳ ಕುರಿತು ಮಾಹಿತಿ ಒದಗಿಸಿದರು. ಅಕ್ಷರಾ ದಾಸೋಹ ಸಿಬಂದಿಗಳಾದ ಪ್ರೇಮ ಪರ್ಲಡ್ಕ, ಪ್ರಮೀಳಾ ರೈ ಕಸ್ತೂರಿ ಪಾಡ್ದನ ಹಾಡಿ ಬಾಲ ರೈತ ಮಕ್ಕಳ ಗಮನ ಸೆಳೆದರು.

ಶಿಕ್ಷಕರಾದ ದಿವ್ಯಾ ಎಂ.ಕೆ,ಉಷಾ ಕೆ.ಎಸ್ ಸಂತೋಷ್ ಮಕ್ಕಳ ಜತೆ ನಾಟಿ ಕಾರ್ಯದಲ್ಲಿ ಸಹಕರಿಸಿದರು. ಶಿಕ್ಷಕ ಮೋಹನ ಗೌಡ ಎ ಸ್ವಾಗತಿಸಿ ಜೆಸಿಂತಾ ಮೊಂತೇರೋ ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಕತ್ತರಿಸಿ ಹಲಸು ನೆಟ್ಟ ಕೃಷಿಕ
July 5, 2026
11:19 PM
by: ದ ರೂರಲ್ ಮಿರರ್.ಕಾಂ
ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ
July 5, 2026
5:47 PM
by: ಮಹೇಶ್ ಪುಚ್ಚಪ್ಪಾಡಿ
ಬಾಳ ಮಧ್ಯಾಹ್ನದ ಲಹರಿ
July 5, 2026
3:10 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ
July 5, 2026
2:32 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror