ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎರಡನೇ ದಿನವೂ ಯುವಬ್ರಿಗೇಡ್ ವತಿಯಿಂದ ಕುಮಾರಧಾರಾ ನದಿ ಸ್ವಚ್ಛತಾ ಅಭಿಯಾನ #ಕುಮಾರ_ಸಂಸ್ಕಾರ ನೆರವೇರಿತು.
ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ರಾಜ್ಯದ ವಿವಿದೆಡೆಯ ಯವ ಬ್ರಿಗೇಡ್ ಸದಸ್ಯರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಭಾನುವಾರವೂ ಕುಮಾರಧಾರಾ ಹಾಗೂ ಪ್ರಮುಖ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿದರು.
ಭಾನುವಾರ ಬೆಳಗ್ಗೆ ನೂರಾರು ಯುವ ಬ್ರಿಗೇಡ್ ಕಾರ್ಯಕರ್ತರು ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ಸದಸ್ಯರು, ನಮ್ಮ ಸುಬ್ರಹ್ಮಣ್ಯ ಯುವ ತಂಡ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಕುಕ್ಕೆ ದೇವಳದ ನೌಕರರು ಸೇರಿ ಕುಕ್ಕೆಸುಬ್ರಹ್ಮಣ್ಯದ ಕುಲ್ಕುಂದದಿಂದ ಸ್ವಚ್ಛತಾ ಕಾರ್ಯ ಆರಂಭಿಸಿದರು. ನಂತರ ಆದಿಸುಬ್ರಹ್ಮಣ್ಯದಲ್ಲಿ ದರ್ಪಣ ತೀರ್ಥ ನದಿಯ ಸುತ್ತ, ಕುಮಾರಧಾರಾ ಸ್ನಾನಘಟ್ಟದಲ್ಲೂ ಸ್ವಚ್ಛ ಮಾಡುವ ಮೂಲಕ ಎರಡು ದಿನ ಸ್ವಚ್ಛತಾ ಕಾರ್ಯಕ್ರಮ ಸಮಾಪನಗೊಂಡಿತು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಎರಡನೇ ದಿನವೂ ಕುಮಾರಧಾರಾ ಕ್ಲೀನ್…ಕ್ಲೀನ್…"