ಎಲಿಮಲೆ: ಎಲಿಮಲೆ ಜ್ಞಾನದೀಪ ಶಾಲಾ ಪ್ರವೇಶೋತ್ಸವ ವಿಶಿಷ್ಟ ರೀತಿಯಲ್ಲಿ ನಡೆಯಿತು. ಮಕ್ಕಳಿಗೆ ಆರತಿ ಬೆಳಗಿ ತಿಲಕವಿರಿಸಿ ಮಕ್ಕಳಿಗೆ ಸ್ವಾಗತ ಮಾಡಿದ ಬಳಿಕ ಮಕ್ಕಳು ಪೋಷಕರ ಕಾಲು ಮುಟ್ಟಿ ನಮಸ್ಕರಿಸಿದರು. ನಂತರ ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮ ನಡೆಯಿತು.
ಪ್ರತೀ ಬಾರಿ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ಈ ವರ್ಷದ ಪ್ರವೇಶೋತ್ಸವ ಸಮಾರಂಭವು ವೈಶಿಷ್ಟ್ಯದಿಂದ ನಡೆಯುತ್ತದೆ. ಕಿರಿಯ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳು ಆರತಿ ಎತ್ತಿ , ತಿಲಕವಿಟ್ಟು ಸ್ವಾಗತಿಸಿದರು. ಮಕ್ಕಳು ಪೋಷಕರ ಕಾಲು ಮುಟ್ಟಿ ನಮಸ್ಕರಿಸಿದಾಗ ಪೋಷಕರು ಅಕ್ಷತೆ ಕಾಳು ಹಾಕಿ ಆಶೀರ್ವದಿಸಿದರು.ಬಳಿಕ ಮಕ್ಕಳು ಹಾಗೂ ಪೋಷಕರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು.
ಬಳಿಕ ಪೋಷಕರ ಹಾಗೂ ಆಡಳಿತ ಮಂಡಳಿ ಸಭೆ ನಡೆಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ತಳೂರು, ಸಂಚಾಲಕ ಎ.ವಿ.ತೀರ್ಥರಾಮ, ನಿರ್ದೇಶಕ ರಾಧಾಕೃಷ್ಣ ಮಾವಿನಕಟ್ಟೆ, ಗಂಗಾಧರ ಕೇಪಳಕಜೆ, ಕೃಷ್ಣಯ್ಯ ಮೂಲೆತೋಟ, ಸೂರ್ಯನಾರಾಯಣ ಭಟ್ ಮೂಲೆತೋಟ, ಶ್ರೀಕೃಷ್ಣ ಭಟ್ ಗುಂಡಿಮಜಲು, ಮಹಾವೀರ ಜೈನ್, ಶಾಲಾ ಮುಖ್ಯೋಪಾಧ್ಯಾಯ ಗದಾಧರ ಬಾಳುಗೋಡು, ಶಿಕ್ಷಕ ರಕ್ಷಕ ಸಂಘದ ಜಯಂತ ಅಂಬೆಕಲ್ಲು, ಆಡಳಿತಾಧಿಕಾರಿ ಅನಿಲ್ ಅಂಬೆಕಲ್ಲು ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಅಧಿಕ ಅಂಕ ಪಡೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರವೇಶೋತ್ಸವಕ್ಕೂ ಮುನ್ನ ಶಾಲೆಯಲ್ಲಿ ಗಣಪತಿ ಹವನ ನಡೆಯಿತು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಎಲಿಮಲೆ ಜ್ಞಾನದೀಪ ಶಾಲಾ ಪ್ರವೇಶೋತ್ಸವ : ವಿಶೇಷ ರೀತಿಯಲ್ಲಿ ನಡೆದ ಕಾರ್ಯಕ್ರಮ"