ಎಲಿಮಲೆ ಸಾಹಿತ್ಯ ಸಮ್ಮೇಳನ : ಆಮಂತ್ರಣ ಪತ್ರಿಕೆ ಬಿಡುಗಡೆ

January 7, 2020
5:28 PM

ಸುಳ್ಯ: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹಿರಿಯ ವಿದ್ಯಾರ್ಥಿ ಎಲಿಮಲೆ ಸರಕಾರಿ ಪ್ರೌಢ ಶಾಲೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಎಲಿಮಲೆಯಲ್ಲಿ ಜ. 19ರಂದು ನಡೆಯಲಿರುವ ಸುಳ್ಯ ತಾಲೂಕು 24ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಜ.7ರಂದು ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಎ.ವಿ. ತೀರ್ಥರಾಮ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಈ ಊರಿನಲ್ಲಿ ಸಮ್ಮೇಳನ ಸಂಘಟಿಸುವ ಜವಾಬ್ದಾರಿ ನಮಗೆ ಬಂದಿದೆ. ಅದನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.

Advertisement

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ, ನಿಕಟಪೂರ್ವಾಧ್ಯಕ್ಷೆ ಎಂ. ಮೀನಾಕ್ಷಿ ಗೌಡ ಮಾತನಾಡಿ ಶುಭಹಾರೈಸಿದರು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶೈಲೇಶ್ ಅಂಬೆಕಲ್ಲು, ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಮೆತ್ತಡ್ಕ, ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಚಂದ್ರಶೇಖರ ಪೇರಾಲ್, ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜಯಂತ ತಳೂರು, ಸ್ವಾಗತ ಸಮಿತಿ ಉಪಾಧ್ಯಕ್ಷರುಗಳಾದ ರಾಧಾಕೃಷ್ಣ ಕೆ.ಆರ್.ಮಾವಿನಕಟ್ಟೆ, ಕೃಷ್ಣಯ್ಯ ಮೂಲೆತೋಟ, ಜೊತೆ ಕಾರ್ಯದರ್ಶಿ ದಯಾನಂದ ಮೆತ್ತಡ್ಕ, ಉಪಸಮಿತಿ ಸಂಚಾಲಕರುಗಳಾದ ದುರ್ಗಾಕುಮಾರ್ ನಾಯರ್‌ಕೆರೆ, ಶರತ್ ಮರ್ಗಿಲಡ್ಕ, ಮುರಳೀಧರ ಪುನ್ಕುಟ್ಟಿ, ಗದಾಧರ ಬಾಳುಗೋಡು, ತಿರುಮಲೇಶ್ವರಿ ಯು.ಎಸ್., ಓಂಪ್ರಸಾದ್ ಕಜೆ, ಹರಿಪ್ರಸಾದ್ ಬಿ.ವಿ., ಪುರುಷೋತ್ತಮ ಸುಳ್ಳಿ, ರಮಾನಂದ ಹೊಸತೋಟ, ರಂಜಿತ್ ಅಂಬೆಕಲ್ಲು, ದೀಕ್ಷಿತ್ ಚಿತ್ತಡ್ಕ, ಭರತ್ ಪಾರೆಮಜಲು, ತಾರನಾಥ ಅಡಿಗೈ, ವಿಷ್ಣು ಗೌಡ ಅಂಬೆಕಲ್ಲು, ವಸಂತ ನಾಯಕ್, ಪುನೀತ್, ಅನ್ವಿತ್ ಕೇಪಳಕಜೆ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾಪುವಿನಲ್ಲಿ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್‌ಶಿಪ್‌ಗೆ ಚಾಲನೆ – 400ಕ್ಕೂ ಅಧಿಕ ಪ್ರತಿಭೆಗಳು ಭಾಗಿ, 24 ಮಂದಿಗೆ ರಾಷ್ಟ್ರಮಟ್ಟದ ಅವಕಾಶ
June 27, 2026
9:36 PM
by: ದ ರೂರಲ್ ಮಿರರ್.ಕಾಂ
34 ಟನ್ ಅಡಿಕೆ ವಂಚನೆ – ಅಸ್ಸಾಂ ವ್ಯಾಪಾರಿಗಳಿಗೆ ಹರಿಯಾಣದಲ್ಲಿ ವಂಚನೆ..!
June 27, 2026
9:07 PM
by: ಮಿರರ್‌ ಡೆಸ್ಕ್
ದೇಶದಲ್ಲಿ ಬರಗಾಲದ ಸಾಧ್ಯತೆ – ರೈತರನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
June 27, 2026
9:00 PM
by: ಮಿರರ್‌ ಡೆಸ್ಕ್‌
ಹಲಸು ಈಗ ಕೇವಲ ಹಣ್ಣು ಅಲ್ಲ… ಸೂಪರ್ ಫುಡ್..!‌ ಹಲಸಿನ ಹಣ್ಣಿನ ಔಷಧೀಯ ಗುಣಗಳಿಗೆ ಕೇರಳದಲ್ಲಿ ಪ್ರಚಾರ ಅಭಿಯಾನ
June 26, 2026
1:15 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror