ಎಸ್ಸೆಸ್ಸೆಫ್ ಗಾಂಧಿನಗರ :ವಾರ್ಷಿಕ ಕೌನ್ಸಿಲ್

January 20, 2020
11:00 PM

ಸುಳ್ಯ : ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್  ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ವಾರ್ಷಿಕ ಕೌನ್ಸಿಲ್ ಸಂಗಮ ಜನವರಿ 19ರಂದು ಶಾಖಾಧ್ಯಕ್ಷ ಸಿದ್ದೀಖ್ ಬಿ.ಎ ಅಧ್ಯಕ್ಷತೆಯಲ್ಲಿ ಸುನ್ನಿ ಸೆಂಟರ್ ನಲ್ಲಿ ಜರಗಿತು. ಶಾಖಾ ಎಸ್ಸೆಸ್ಸೆಫ್ ನ ಉಪಾಧ್ಯಕ್ಷ ರಶೀದ್ ಝೈನಿ ದುಆ ನೆರವೇರಿಸಿದರು.

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ಸದಸ್ಯರಾದ ರಫೀಖ್ ಅಂಜದಿ ಇಂದ್ರಾಜೆ ಉದ್ಘಾಟಿಸಿದರು. ಕೆ.ಸಿ.ಎಫ್ ಅಬುಧಾಬಿ ಸದಸ್ಯ ಕಬೀರ್ ಜಟ್ಟಿಪಳ್ಳ ಸಂಘಟನಾ ತರಬೇತಿ ನಡೆಸಿದರು. ಎಸ್.ವೈ.ಎಸ್ ಜಿಲ್ಲಾ ಸಮಿತಿ ಸದಸ್ಯ ಸಿದ್ದೀಖ್ ಕಟ್ಟೆಕಾರ್ ಮುಖ್ಯ ಅತಿಥಿಯಾಗಿದ್ದರು. ಸುಳ್ಯ ಸೆಕ್ಟರ್ ಎಸ್ಸೆಸ್ಸೆಫ್ ಸದಸ್ಯ ಶರೀಫ್ ಜಯನಗರ ವೀಕ್ಷಕರಾಗಿದ್ದರು.

ಈ ಸಂಘಟನಾ ಅವಧಿಯ ಒಂದು ವರ್ಷದಲ್ಲಿ ಗಾಂಧಿನಗರದಾದ್ಯಂತ ಐದೂವರೆ ಲಕ್ಷಗಳ ಸಾಂತ್ವನ ಕಾರ್ಯಾಚರಣೆಗಳ ವರದಿ ಹಾಗೂ ಲೆಕ್ಕ ಪತ್ರವನ್ನು ಪ್ರ. ಕಾರ್ಯದರ್ಶಿ ಬಶೀರ್ ಕಲ್ಲುಮುಟ್ಲು ಹಾಗೂ ಕೋಶಾಧಿಕಾರಿ ನಾಫಿ ಕೆರೆಮೂಲೆ ಮಂಡಿಸಿದರು.
ಬಶೀರ್ ಕಲ್ಲುಮುಟ್ಲು ಸ್ವಾಗತಿಸಿ ಇಲ್ಯಾಸ್ ಗುರುಂಪು ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಿ ಎಸ್ ಎನ್ ಎಲ್ ವಿರುದ್ಧ ಸುಳ್ಯದ ಗ್ರಾಹಕನಿಗೆ ಜಯ – ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯಕ್ಕೆ ₹30,000 ಪರಿಹಾರ ಆದೇಶ..!
May 1, 2026
2:37 PM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 01-05-2026 | ಮಳೆಯ ಚಟುವಟಿಕೆ ಕಡಿಮೆಯಾಗುತ್ತಾ? ಮೇ 2ರಿಂದ ಕೆಲವು ದಿನ ಮಳೆ ಕಡಿಮೆ, ಬಳಿಕ ಮತ್ತೆ ಚುರುಕು..!?
May 1, 2026
2:16 PM
by: ಸಾಯಿಶೇಖರ್ ಕರಿಕಳ
ಚಿಕ್ಕಮಗಳೂರಿನಲ್ಲಿ ದಾಳಿ – ಅಕ್ರಮವಾಗಿ ಸಂಗ್ರಹಿಸಿದ್ದ 181 ಯೂರಿಯಾ ಚೀಲಗಳು ಜಪ್ತಿ
May 1, 2026
11:34 AM
by: ಮಿರರ್‌ ಡೆಸ್ಕ್
ರಾಜ್ಯದ ಹಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ – ಮುಂದಿನ ಕೆಲ ದಿನ ಮಳೆ ಎಚ್ಚರಿಕೆ..!
May 1, 2026
11:10 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror