ಎಸ್ಸೆಸ್ಸೆಲ್ಸಿ ನಂತರ ಮುಂದೇನು?!

May 3, 2019
3:40 PM
ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವಿಪರೀತ ತಳಮಳದ ಘಟ್ಟವಿದು.ಎಸ್ಸೆಸ್ಸೆಲ್ಸಿ ಹಂತದಲ್ಲಿ ಕೈಗೊಳ್ಳುವ ನಿರ್ಧಾರಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಕಟ್ಟಿಕೊಡುತ್ತವೆ.ಆದರೆ ಎಸ್ಸೆಸ್ಸೆಲ್ಸಿಯಲ್ಲಿ ಪಡೆಯುವ ಅಂಕಗಳು  ಕೇವಲ ದಿಕ್ಕನ್ನು ತೋರಿಸುತ್ತವೆಯಷ್ಟೇ ಹೊರತು ಜೀವನದ ದಾರಿಯನ್ನು ನಿರ್ಧರಿಸುವುದಿಲ್ಲ.
ಎಸ್ಸೆಸ್ಸೆಲ್ಸಿಯ ನಂತರ ವಿದ್ಯಾರ್ಥಿಗಳ ಆಯ್ಕೆ ವಿಜ್ಞಾನ ,ವಾಣಿಜ್ಯವಿರಲೀ, ಕಲಾ ವಿಭಾಗವೇ ಇರಲಿ  ಅಥವಾ ವೃತ್ತಿಪರ ಕೋರ್ಸ್ ಗಳೇ ಆಗಿರಲಿ..ಪ್ರತಿಯೊಂದು ಕ್ಷೇತ್ರಗಳಲ್ಲೂ ವಿಫುಲ ಅವಕಾಶಗಳಿವೆ. ಸತತ ಪರಿಶ್ರಮ, ಸಾಧಿಸುವ ಆತ್ಮವಿಶ್ವಾಸ ಜತೆಗೆ ಸರಿಯಾದ ಮಾರ್ಗದರ್ಶನ ಇದ್ದಲ್ಲಿ ಎಲ್ಲವೂ ಸಾಧ್ಯ!!.
  ಇಲ್ಲಿ ವಿದ್ಯಾರ್ಥಿಗಳು ಅಧ್ಯಯನಕ್ಕೆ ಒಂದು ಕ್ಷೇತ್ರವನ್ನು ಆಯ್ದುಕೊಂಡರೆ ಅದೇ ಕ್ಷೇತ್ರದಲ್ಲಿ ಜೀವನದ ಇಪ್ಪತ್ತೈದರಿಂದ ಮೂವತ್ತು ವರುಷಗಳಷ್ಟು ಕಾಲ ಕಳೆಯಬೇಕಾಗಿರುವುದರಿಂದ ಇಲ್ಲಿ ‘ಆಯ್ಕೆ’ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ.ಪೋಷಕರು ಮಕ್ಕಳ ಅಭಿಪ್ರಾಯಕ್ಕೆ ಮನ್ನಣೆ ಕೊಡುವುದರ ಜೊತೆಗೆ ಅವರು ಆರಿಸಿಕೊಳ್ಳಲಿರುವ ವಿಭಾಗದಲ್ಲಿರುವ ಅವಕಾಶಗಳ ಬಗ್ಗೆ ನುರಿತ ತಜ್ಞರಿಂದ ಅಥವಾ ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರೊಂದಿಗೆ ಮಾರ್ಗದರ್ಶನವನ್ನು ಮುಂಚಿತವಾಗಿ ತೆಗೆದುಕೊಂಡಲ್ಲಿ ಅದು  ವಿದ್ಯಾರ್ಥಿಗಳ ಭವಿಷ್ಯ ವನ್ನು ನಿರ್ಮಿಸುವಲ್ಲಿ ಬಹಳ ಸಹಕಾರಿಯಾಗುತ್ತದೆ.
 ವಿಜ್ಞಾನ ವಿಭಾಗ:
 ಭವಿಷ್ಯದಲ್ಲಿ ಶುದ್ಧ ಮತ್ತು ಅನ್ವಯಿಕ ವಿಜ್ಞಾನ ವೃತ್ತಿಪರ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಈ ಸ್ಟ್ರೀಮ್ ಆಯ್ಕೆ ಮಾಡಬಹುದು ಉತ್ತಮ ಅಂಕಗಳನ್ನು ಪಡೆದುಕೊಂಡರೆ ವಿದ್ಯಾರ್ಥಿಗಳು ಸಾಮಾನ್ಯವಾಗಿ ವಿಜ್ಞಾನವನ್ನು ಆಯ್ದುಕೊಂಡು ವೈದ್ಯಕೀಯ ಅಥವಾ ಇಂಜಿನಿಯರಿಂಗ್  ಕ್ಷೇತ್ರಗಳತ್ತ ಒಲವನ್ನು ತೋರುತ್ತಿದ್ದಾರೆ.ಆದರೆ ಈ ಕ್ಷೇತ್ರದಲ್ಲಿರುವ  ಸ್ಪರ್ಧೆಯಿಂದಾಗಿ ಸೀಮಿತ ಉದ್ಯೋಗವಕಾಶದ ಮಾಹಿತಿಗಳು  ದಿನನಿತ್ಯ ಕೇಳಿಬರುತ್ತಿದೆ.ಇತ್ತೀಚಿಗೆ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಪದವಿಯನ್ನು ಪಡೆದ ವಿದ್ಯಾರ್ಥಿಗಳು  ಸರಕಾರದ ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಸರ್ಕಾರದ ಆಡಳಿತ ಸೇವೆಗಳಿಗೆ ನಿಯೋಜನೆಗೊಳ್ಳುತ್ತಿರುವುದು ಭರವಸೆ ಮೂಡಿಸುತ್ತಿದೆ.
   ಸರಕಾರದ ಆಡಳಿತ ಸೇವೆಗೆ ನಿಯೋಜನೆಗೊಳ್ಳುವುದೇ ವಿದ್ಯಾರ್ಥಿಯ ಗುರಿಯಾಗಿದ್ದಲ್ಲಿ ,ಇಷ್ಟವಿದ್ದ ವಿಷಯವನ್ನು ಆಯ್ದು, ಅದರಲ್ಲಿ ಪದವಿಯನ್ನು ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸವನ್ನು ನಡೆಸಬಹುದು.
ವಾಣಿಜ್ಯ ವಿಭಾಗ:
ಅರ್ಥಶಾಸ್ತ್ರ ಮತ್ತು ಲೆಕ್ಕಪತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳು ವಾಣಿಜ್ಯ ವಿಷಯವನ್ನು ಅಭ್ಯಸಿಸಿದಲ್ಲಿ  ಹೂಡಿಕೆ ಬ್ಯಾಂಕಿಂಗ್, ಹಣಕಾಸು ಸಲಹೆ ಮತ್ತು ಚಾರ್ಟರ್ಡ್ ಅಕೌಂಟಿಂಗ್ ನಂತಹ ಉದ್ಯೋಗಗಳನ್ನು ಹೊಂದಬಹುದು.ಬ್ಯಾಂಕಿಂಗ್  ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಉದ್ಯೋಗವಕಾಶಗಳಿಂದಾಗಿ ಇದೊಂದು ಉತ್ತಮ ಆಯ್ಕೆ ಎನ್ನಬಹುದು.ಪಠ್ಯದ ಜೊತೆಜೊತೆಗೆ ಬ್ಯಾಂಕಿಂಗ್ ಪರೀಕ್ಷೆ ಗಳಿಗೂ ತಯಾರಿ ನಡೆಸಬೇಕಾಗುತ್ತದೆ. ಅದಲ್ಲದೇ ನಿರ್ವಹಣಾ ಶಿಕ್ಷಣಕ್ಕಾಗಿ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳು ಸಹ ವಾಣಿಜ್ಯ ವಿಷಯವನ್ನು ತೆಗೆದುಕೊಳ್ಳಬಹುದು.
ಕಲಾ ವಿಭಾಗ:
ನೀವು ಭಾಷೆಗಳು ಅಥವಾ ಮಾನವತೆಗಳ ಬಗ್ಗೆ ಒಲವನ್ನು ಹೊಂದಿದ್ದರೆ, ನೀವು ಕಲಾ ವಿಭಾಗದಲ್ಲಿ ಶಿಕ್ಷಣವನ್ನು ಆಯ್ಕೆ ಮಾಡಬಹುದು. ಸಾಮಾಜಿಕ ಕಾರ್ಯ, ಪತ್ರಿಕೋದ್ಯಮ, ವಿನ್ಯಾಸ, ಇತ್ಯಾದಿಗಳಲ್ಲಿ ಈ ವಿಭಾಗ ವ್ಯಾಪಕವಾದ ಅವಕಾಶಗಳನ್ನು ಒದಗಿಸುತ್ತದೆ.
ಸರಕಾರದ ಕೆಪಿಎಸ್ಸಿ, ಯುಪಿಎಸ್ಸಿ ಆಯೋಗಗಳು ನಡೆಸುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ,ಸಮಾಜ ಶಾಸ್ತ್ರ ವಿಷಯಗಳು ಬಹಳವಾಗಿ ನೆರವಾಗುತ್ತದೆ.
ಡಿಪ್ಲೊಮಾ ಕೋರ್ಸ್ ಗಳು:
ನೀವು ಮಹತ್ವಾಕಾಂಕ್ಷಿ ಎಂಜಿನಿಯರ್ ಗಳ ಪೈಕಿ ಒಬ್ಬರಾಗಿದ್ದರೆ,  ಡಿಪ್ಲೋಮಾದಿಂದ ಇಂಜಿನಿಯರಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಬಹುದು. ಎಂಜಿನಿಯರಿಂಗ್ನಲ್ಲಿ ಡಿಪ್ಲೊಮವನ್ನು ಮುಂದುವರಿಸಲು ಎಸ್ಸೆಸ್ಸೆಲ್ಸಿಯು ಪೂರ್ವಾಪೇಕ್ಷಿತವಾಗಿದೆ. ಆದಾಗ್ಯೂ, ಇಂಜಿನಿಯರಿಂಗ್ ನಲ್ಲಿ ಕೆಲವು ಡಿಪ್ಲೊಮಾ ಕೋರ್ಸುಗಳನ್ನು ಮುಂದುವರಿಸಲು SSLC ಯೊಂದಿಗೆ ಹೆಚ್ಚುವರಿ ಪ್ರಮಾಣಪತ್ರದ ಅಗತ್ಯವಿದೆ.
ಇತರೆ ಡಿಪ್ಲೊಮಾ ಕೋರ್ಸ್ ಗಳು:
   ಡಿಪ್ಲೊಮಾ ಇನ್ ಇಂಜಿನಿಯರಿಂಗ್ ಹೊರತುಪಡಿಸಿ, ವಿದ್ಯಾರ್ಥಿಗಳು ಇತರ ಡಿಪ್ಲೊಮಾ ಕೋರ್ಸುಗಳನ್ನು ಸಹ ಓದಬಹುದು.  ಕೆಲವು ಜನಪ್ರಿಯ ಡಿಪ್ಲೊಮಾ ಕೋರ್ಸುಗಳು:
*ಡಿಪ್ಲೊಮಾ ಇನ್ ಫಾರ್ಮಸಿ ಜನರಲ್ ನರ್ಸಿಂಗ್ ಮತ್ತು ಮಿಡ್ವೈಫರಿಯಲ್ಲಿ ಡಿಪ್ಲೊಮಾ
*ಇಂಟೀರಿಯರ್ ಡಿಸೈನಿಂಗ್ನಲ್ಲಿ ಡಿಪ್ಲೊಮಾ
*ಡಿಪ್ಲೊಮಾ ಇನ್ ಟೂಲ್ & ಡೈ ಮೇಕಿಂಗ್
*ಡಿಪ್ಲೊಮಾ ಇನ್ ಪ್ರಿಂಟಿಂಗ್ ಟೆಕ್ನಾಲಜಿ
*ಪ್ಲ್ಯಾಸ್ಟಿಕ್ ತಂತ್ರಜ್ಞಾನದಲ್ಲಿ ಡಿಪ್ಲೊಮಾ
*ಲೆದರ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ
*ಪೌಲ್ಟ್ರಿಯಲ್ಲಿ ಡಿಪ್ಲೊಮಾ
*ಡಿಪ್ಲೊಮಾ ಇನ್ ಮ್ಯೂಸಿಕ್ (ಕಾರ್ನಾಟಿಕ್ ವೋಕಲ್ ಕ್ಲಾಸಿಕಲ್)
*ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಡಿಪ್ಲೊಮಾ
*ಆಹಾರ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಇತ್ಯಾದಿ.
ಎಸ್ಸೆಸ್ಸೆಲ್ಸಿ ಯ ನಂತರ ವಿದೇಶದಲ್ಲಿ ಶಿಕ್ಷಣ ಮುಂದುವರಿಸಬಹುದೇ?
ಹೌದು, 10 ನೇ ತರಗತಿಯ ನಂತರ ವಿದೇಶಿ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳುವ ಅನೇಕ ದೇಶಗಳಿವೆ. ಆದರೆ ಅವರ ಪಠ್ಯಕ್ರಮವು ಭಾರತಕ್ಕಿಂತ ವಿಭಿನ್ನವಾಗಿದೆ ಮತ್ತು ಅವರ ಪ್ರೌಢಶಾಲಾ ಗುಣಮಟ್ಟ, ಸಾಂಸ್ಕೃತಿಕ ಭಿನ್ನತೆಗಳನ್ನು ಸರಿಹೊಂದಿಸುವಂತಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಪದವಿ ಪೂರ್ವ ಶಿಕ್ಷಣ ಮುಗಿಸಿದ ನಂತರ  ವಿದೇಶಗಳಲ್ಲಿ ಅಧ್ಯಯನ ಮುಂದುವರಿಸಿದರೆ ಒಳ್ಳೆಯದು.
  ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣವೇ?!
 ಅನುತ್ತೀರ್ಣ ಗೊಂಡ ವಿದ್ಯಾರ್ಥಿಗಳಿಗೆ ಅವಕಾಶಗಳು ಆಕಾಶದೆತ್ತರ!
  ಇತಿಹಾಸದುದ್ದಕ್ಕೂ, ನಾವು ವೈಫಲ್ಯದ ಸಮಸ್ಯೆಯಿಂದಾಗಿ ಯಶಸ್ಸಿನ ಕಡೆಗೆ ನಿರಂತರವಾದ ಉದಾಹರಣೆಗಳನ್ನು ನೋಡಬಹುದಾಗಿದೆ. ಮರುಪರೀಕ್ಷೆಯನ್ನು ಎದುರಿಸಿ..ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣ ಗೊಂಡು ,ಮರು ಪರೀಕ್ಷೆಯನ್ನು ಬರೆದು ಮತ್ತೆ ವಿದ್ಯಾಭ್ಯಾಸ ವನ್ನು ಡಿಸ್ಟಿಂಕ್ಷನ್ಸ್ ನಲ್ಲಿ  ಮುಗಿಸಿ   ಉತ್ತಮ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರ ಸಾವಿರ ಉದಾಹರಣೆ ನಮ್ಮ ಮುಂದಿದೆ.ಎಸ್ಸೆಸ್ಸೆಲ್ಸಿ ಅನುತ್ತೀರ್ಣ ರಾದರೂ ಅನೇಕ ವೃತ್ತಿ ಪರ ಕೋರ್ಸ್ ಗಳು ಕೂಡಾ ಲಭ್ಯ ವಿದೆ. ಪ್ರಪಂಚವು ನಿಮ್ಮ ನೈತಿಕತೆಯನ್ನು ಹೇಗೆ ತಗ್ಗಿಸುತ್ತದೆ ಎಂಬುದರ ಬಗ್ಗೆ ಯೋಚಿಸದಿರಿ..ದೃಢತೆಯಿಂದ  ಕೇಂದ್ರೀಕರಿಸಿ!.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಸಾಕೆನ್ನಿಸದಷ್ಟು ಎತ್ತರದ ಅಪೇಕ್ಷೆಗಳು, ಜೀವನವೇ ಸಾಕೆನ್ನಿಸುವ ಸಾವುಗಳು
March 26, 2025
9:17 AM
by: ಡಾ.ಚಂದ್ರಶೇಖರ ದಾಮ್ಲೆ
ಯುಗಾದಿ ಹಬ್ಬದಲ್ಲಿ ಪಂಚಗ್ರಾಹಿ ಯೋಗ | 6 ರಾಶಿಯವರಿಗೆ ಮಣ್ಣೂ ಹೊನ್ನಾಗುವ ಸಮಯ
March 25, 2025
10:06 AM
by: ದ ರೂರಲ್ ಮಿರರ್.ಕಾಂ
ಮತ್ತೆ ಮತ್ತೆ ಅಡಿಕೆಯ ಕ್ಯಾನ್ಸರ್‌ ಸುದ್ದಿ | ಆತಂಕ ಏಕೆಂದರೆ, ಭಾರತದ ಅರ್ಧ ಭಾಗದಲ್ಲಿದೆ ಅಡಿಕೆ ಕೃಷಿ |
March 25, 2025
8:30 AM
by: ಮಹೇಶ್ ಪುಚ್ಚಪ್ಪಾಡಿ
ಹೊಸರುಚಿ | ಗುಜ್ಜೆ ಕಬಾಬ್
March 25, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror