ಸುಳ್ಯ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ತಾಲೂಕಿಗೆ ಶೇ.80.3 ಫಲಿತಾಂಶ ದಾಖಲಾಗಿದೆ. ಸುಳ್ಯ ತಾಲೂಕಿನ ಆರು ಶಾಲೆಗಳಿಗೆ ಶೆ.100 ಫಲಿತಾಂಶ ಬಂದಿದೆ.
ಪಂಜದ ಮೊರಾರ್ಜಿ ದೇಸಾಯಿ ಶಾಲೆ, ಸುಳ್ಯದ ಸ್ನೇಹ ಪ್ರೌಢ ಶಾಲೆ, ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಜ್ಞಾನ ದೀಪ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯ ಮತ್ತು ಗುತ್ತಿಗಾರಿನ ಬ್ಲೆಸ್ಡ್ ಕುರಿಯಾಕೋಸ್ ಶಾಲೆ ಶೇ.100 ಫಲಿತಾಂಶ ದಾಖಲಿಸಿದೆ.
ಸ್ನೇಹ ಪ್ರೌಢ ಶಾಲೆ ಸುಳ್ಯ:
ಪರೀಕ್ಷೆಗೆ ಹಾಜರಾದ 12 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿದೆ. ಎಂಟು ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಮತ್ತು ನಾಲ್ಕು ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸೇವಿತ ಪಿ.ಸಿ(595), ಶ್ರೀಶ ನಾರಾಯಣ.ಎ(573), ಅನ್ವಿತಾ.ಎನ್.ಎನ್.(573) ಅತೀ ಹೆಚ್ಚು ಅಂಕ ಪಡೆದಿದ್ದಾರೆ.
ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸುಳ್ಯ:
ಪರೀಕ್ಷೆಗೆ ಹಾಜರಾದ ಎಲ್ಲಾ 59 ಮಂದಿ ಉತ್ತೀರ್ಣರಾಗಿದ್ದಾರೆ. 26 ಅತ್ಯುನ್ನತ ಶ್ರೇಣಿ, 32 ಪ್ರಥಮ ಶ್ರೇಣಿ, ಒಂದು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರುತಿ ಎಂ.ಆರ್.(610), ವಿಷ್ಣುಪ್ರಕಾಶ್ ಟಿ.ಜಿ(608) ದೀಕ್ಷಾ ಸಿ.ಜೆ(607) ಅತೀ ಹೆಚ್ಚು ಅಂಕ ಪಡೆದಿದ್ದಾರೆ.
ಜ್ಞಾನದೀಪ ಶಾಲೆ ಎಲಿಮಲೆ:
ಪರೀಕ್ಷೆಗೆ ಹಾಜರಾದ 25 ಮಂದಿಯಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ಆರು ಅತ್ಯುನ್ನತ ಶ್ರೇಣಿ, 15 ಪ್ರಥಮ ಶ್ರೇಣಿಯಲ್ಲಿ ಮತ್ತು ನಾಲ್ಕು ದ್ವೀತೀಯ ಶ್ರೇಣಿ. ತೇಜಸ್ ಎಂ.ವಿ(590), ಶಶಾಂಕ್ ಬಿ.ಎಸ್.(573), ಸ್ಮಿತಾ ಕಾಯರ(572) ಅತೀ ಹೆಚ್ಚು ಅಂಕ ಪಡೆದಿದ್ದಾರೆ.
ಸೈಂಟ್ ಜೋಸೆಫ್ ಶಾಲೆ ಸುಳ್ಯ-ಶೇ.98.3:
ಪರೀಕ್ಷೆಗೆ ಹಾಜರಾದ 122 ಮಂದಿಯಲ್ಲಿ 120 ಮಂದಿ ಉತ್ತೀರ್ಣರಾಗಿ ಶೇ.98.3 ಫಲಿತಾಂಶ ದಾಖಲಿಸಿದೆ. ನಿಕೋಲ್ ಲಸ್ರಾದೋ(612), ಅನೂಷ(608), ಅನನ್ಯ(607), ಪಾತಿಮಾತ್ ನಿಷ್ಮಾ(604), ಆದಿತ್ಯ ಅತ್ರೇಯ ಜಿ.ಆರ್(601) ಅತೀ ಹೆಚ್ಚು ಅಂಕ ಪಡೆದಿದ್ದಾರೆ.
ಎಲಿಮಲೆ ಸರ್ಕಾರಿ ಪ್ರೌಢ ಶಾಲೆಯಲ್ಲಿ 54ರಲ್ಲಿ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.81.41, ಅರಂತೋಡು ನೆಹರೂ ಸ್ಮಾರಕ ಪ.ಪೂ.ಕಾಲೇಜಿನಲ್ಲಿ 99ರಲ್ಲಿ 88 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶಶೇ.89 ಫಲಿತಾಂಶ ಬಂದಿದೆ.