ಸುಳ್ಯ: ಕಳೆದ 26 ವರ್ಷಗಳಿಂದ ಸುಳ್ಯದಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ಸುಳ್ಯದ ಶಾಸಕರಾದ ಎಸ್ ಅಂಗಾರ ಅವರಿಗೆ ಬಿಜೆಪಿ ಸರಕಾರ ರಚನೆಯಾದಾಗಲೂ ಸಚಿವ ಸ್ಥಾನ ನೀಡಿಲ್ಲ ಎಂದು ಸುಳ್ಯದ ಬಿಜೆಪಿ ಹಾಗೂ ಮತದಾರರಲ್ಲಿ ಇದೀಗ ಅಸಮಾಧಾನ ಹೆಚ್ಚಾಗಿದೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಆರಂಭವಾಗಿದೆ. ಬಿಜೆಪಿ ಮತದಾರರಿಗೆ ಮಾಡಿದ ದ್ರೋಹ ಇದು ಎಂದು ಅಸಮಾಧಾನ ವ್ಯಕ್ತವಾದರೆ ವಿವಿಧ ಟ್ರೋಲ್ ಗಳೂ ಹೆಚ್ಚಾಗಿದೆ. ಪಕ್ಷ ನಿಷ್ಠೆ ಹಾಗೂ ಕರಾವಳಿಯಲ್ಲಿ ಬಿಜೆಪಿಗೆ ಮತದಾರರ ನೀಡಿದ ಬೆಂಬಲಕ್ಕೆ ನೀಡಿದ ಕೊಡುಗೆ ದೊಡ್ಡದಾದ ಚೊಂಬು ಎಂದು ಕೆಲವರು ಟ್ರೋಲ್ ಮಾಡಿದರೆ


ಅಂಗಾರ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಈಗ ಸಿಗದೇ ಇರುವುದು ನಮಗೆ ನಿರಾಸೆಯಾಗಿದೆ ಎಂದು ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರತಿಕ್ರಿಯೆ ನೀಡಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel