ಎಸ್.ಎಸ್.ಎಲ್.ಸಿ | ಗಡಿ ಪ್ರದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ

June 21, 2020
11:23 AM

ಮಂಗಳೂರು : 2020 ರ ಎಸ್.ಎಸ್.ಎಲ್.ಸಿ  ವಾರ್ಷಿಕ  ಪರೀಕ್ಷೆಯು  ಜೂ. 25 ರಿಂದ ಜು.4 ರವರೆಗೆ  ಜಿಲ್ಲೆಯ  ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ  ನಡೆಯಲಿದೆ. ಕೇರಳ ರಾಜ್ಯದ ಸುಮಾರು 367 ವಿದ್ಯಾರ್ಥಿಗಳು ಕರ್ನಾಟಕದ ವಿವಿಧ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದು ಪ್ರಸ್ತುತ ಜೂ 25 ರಿಂದ ಜು 4 ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ  ವಾರ್ಷಿಕ ಪರೀಕ್ಷೆಗೆ  ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ದ.ಕ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ.

Advertisement
Advertisement
Advertisement
Advertisement

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಲಾಕ್ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ರಾಜ್ಯಗಳ ಗಡಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ಪ್ರಯಾಣಕ್ಕೆ ನಿರ್ಬಂಧವಿರುವುದರಿಂದ ಹಾಗೂ ವಿದ್ಯಾರ್ಥಿಗಳ ಹೆತ್ತವರಿಗೆ/ ಪೋಷಕರಿಗೆ ತಮ್ಮ ಸ್ವಂತ ವಾಹನದಲ್ಲಿ ಕೂಡಾ ವಿದ್ಯಾರ್ಥಿಗಳನ್ನು ಪರೀಕ್ಷಾ  ಕೇಂದ್ರಗಳಿಗೆ ತಲುಪಿಸಲು ಅವಕಾಶವಿಲ್ಲದಿರುವುದರಿಂದ ಜಿಲ್ಲೆಯ ಖಾಸಗಿ ಶಾಲೆಯ ಬಸ್ಸುಗಳ ಮೂಲಕ ನಿರ್ಧಿಷ್ಟಪಡಿಸಿದ ಕೇರಳ-ಕರ್ನಾಟಕ ಗಡಿ ಪ್ರದೇಶದಿಂದ ವಿದ್ಯಾರ್ಥಿಗಳನ್ನು ಪರೀಕ್ಷಾ  ಕೇಂದ್ರಗಳಿಗೆ ಕರೆದುಕೊಂಡು ಬಂದು ಪರೀಕ್ಷೆ ಮುಗಿದ ತಕ್ಷಣ ವಾಪಾಸು ಆಯಾ ಗಡಿ ಪ್ರದೇಶಕ್ಕೆ ತಲುಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ಪರೀಕ್ಷಾ ಪ್ರವೇಶ ಪತ್ರವನ್ನು ರವಾನಿಸಿದ್ದು ವಾಟ್ಸಪ್ ಮೂಲಕ ಪ್ರವೇಶ ಪತ್ರ ಸಿಗದ ವಿದ್ಯಾರ್ಥಿಗಳಿಗೆ ಪರೀಕ್ಷಾ  ದಿನದಂದು ನೋಡಲ್ ಅಧಿಕಾರಿಗಳ ಮೂಲಕ ನಿರ್ಧಿಷ್ಟ ಪಡಿಸಿದ ಗಡಿ ಪ್ರದೇಶದಲ್ಲೇ ಪ್ರವೇಶ ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.  ಆದ್ದರಿಂದ    ದ.ಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸಲ್ಲಿಸಿರುವ ನಿರ್ಧಿಷ್ಟಪಡಿಸಿದ ಗಡಿ ಪ್ರದೇಶ ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

Advertisement

 ನಿಗದಿಪಡಿಸಿರುವ ಗಡಿ ಪ್ರದೇಶದ ಚೆಕ್ ಪೋಸ್ಟ್ ಹೀಗಿದೆ : 

ಬಂಟ್ವಾಳ ತಾಲೂಕು – ಪಾತ್ತೂರು, ಮುಗುಲಿ, ಆನೆಕಲ್ ಸಾರಡ್ಕ, ಬೆರಿಪದವು, ನಂದಾರಾಪಡ್ಪು, ಕೆದಂಬಾಡಿ, ಬಾಯಾರು, ಕಾಯಾರಮರ್, ತಲಕ್ಕಿ, ಸಾಲೆತ್ತೂರು

Advertisement

ಮಂಗಳೂರು ತಾಲೂಕು:  ತಲಪಾಡಿ, ಮಂಜನಾಡಿ ಬಸ್‍ಸ್ಟಾಂಡ್.  ತಲಪಾಡಿ ಟೋಲ್‍ಗೇಟ್.

ಪುತ್ತೂರು ತಾಲೂಕು – ಅರ್ಧಮೂಲೆ, ಗಾಳಿಮುಖ, ಕಾಯರ್‍ಪದವು, ಮಯ್ಯಾಲ, ಮೆನಸಿಕಾನಾ. ಪಾಣಾಜೆ, ಪಂಚೋಡಿ, ಪಾಂಡಿ, ಪಿಲಿಪುದೆ, ಸಾರಡ್ಕ, ಸ್ವರ್ಗ, ತಲಪಾಡಿ .

Advertisement

ಸುಳ್ಯ ತಾಲೂಕು – ಜಾಲ್ಸೂರ್/ಮುರೂರ್, ಕೊಲ್ಚಾರ್/ಕಲ್ಲಪಳ್ಳಿ.

ಈ ಎಲ್ಲಾ ವ್ಯಾಪ್ತಿಯಲ್ಲಿ ಪರೀಕ್ಷಾ ದಿನದಂದು  ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷಾ  ಪ್ರವೇಶ ಪತ್ರ (ವಾಟ್ಸಾಪ್ ಮೂಲಕ ಅಥವಾ ಮೂಲ ಪ್ರತಿ/ಜೆರಾಕ್ಸ್ ಪ್ರತಿ) ಹಾಜರುಪಡಿಸಿದಲ್ಲಿ ಕರ್ನಾಟಕಕ್ಕೆ ಪ್ರವೇಶಿಸಲು ಅವಕಾಶವಿರುತ್ತದೆ ಹಾಗೂ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವ್ಯವಸ್ಥೆ  ಮಾಡಲಾಗುವ ಬಸ್ಸುಗಳ ಮೂಲಕ ಪ್ರಯಾಣಿಸಿ, ಪರೀಕ್ಷೆ ಮುಗಿದ ಬಳಿಕ ಪಾಸು ಕೇರಳಕ್ಕೆ ಮರಳಲು ಅವಕಾಶ ಕಲ್ಪಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜ.10 ರಿಂದ ಜಾನುವಾರುಗಳಿಗೆ ಉಚಿತ ಕಂದು ರೋಗ ಲಸಿಕೆ
January 10, 2025
7:03 PM
by: The Rural Mirror ಸುದ್ದಿಜಾಲ
ರಬ್ಬರ್ ಟ್ಯಾಪರ್: ವಿಮಾ ಯೋಜನೆ
January 10, 2025
6:25 AM
by: The Rural Mirror ಸುದ್ದಿಜಾಲ
ರೈತರಿಗೆ ರಿಯಾಯಿತಿ ದರದಲ್ಲಿ‌ ಕೃಷಿ ಉಪಕರಣ ವಿತರಣೆ
December 9, 2024
7:05 AM
by: The Rural Mirror ಸುದ್ದಿಜಾಲ
ಡಿ.12-14 ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತ ಜಯಂತಿ ಕಾರ್ಯಕ್ರಮ | ಮುಳ್ಳಯ್ಯನಗಿರಿ ಪ್ರದೇಶಗಳಿಗೆ ಪ್ರವಾಸಿಗರ ಭೇಟಿ ನಿಷೇಧ
December 6, 2024
7:10 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror