ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪುನರ್ ಮನನ ಪಾಠ

April 29, 2020
9:35 AM

ಮಂಗಳೂರು : 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯಿಂದಾಗಿ ಮುಂದೂಡಲಾಗಿರುತ್ತದೆ. ದೂರದರ್ಶನದಲ್ಲಿ ಕನ್ನಡ, ಇಂಗ್ಷಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಸಿದ್ಧಪಡಿಸಿರುವ ಪಾಠಗಳನ್ನು ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ 4.30 ಗಂಟೆವರೆಗೆ ದೂರದರ್ಶನದಲ್ಲಿ ಪ್ರಸಾರ (ಚಂದನ ವಾಹಿನಿಯಲ್ಲಿ) ಮಾಡಲಾಗುತ್ತಿದೆ. ಇದೇ ಕಾರ್ಯಕ್ರಮದ ಮರು ಪ್ರಸಾರವನ್ನು ಮರುದಿನ ಬೆಳಿಗ್ಗೆ 6 ಗಂಂಟೆಯಿಂದ 7.30 ರವರೆಗೆ ಎಲ್ಲಾ ದಿನಗಳಂದು ನಡೆಸಲಾಗುವುದು.

ಬೇಸಿಗೆ ರಜಾ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಲು ಅವರ ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸಲು  ಹಾಗೂ ಮನರಂಜನೆಗಾಗಿ ‘ಮಕ್ಕಳವಾಣಿ’ ಎಂಬ ಕಾರ್ಯಕ್ರಮ ಮಕ್ಕಳವಾಣಿ ಯೂಟ್ಯೂಬ್ ಚಾನಲ್‍ನಲ್ಲಿ ಈಗಾಗಲೇ ಪ್ರಸಾರವಾಗುತ್ತಿದೆ. ಸದರಿ ಕಾರ್ಯಕ್ರಮವನ್ನು ಮತ್ತೊಮ್ಮೆ  ದೂರದರ್ಶನದ (ಚಂದನ ವಾಹಿನಿಯಲ್ಲಿ) ಮೂಲಕ ಏಪ್ರಿಲ್ 29 ರಿಂದ ಮೇ. 28 ರವರೆಗೆ ಸಂಜೆ 5 ಗಂಟೆಯಿಂದ 5.30 ರವರೆಗೆ ಪ್ರಸಾರ ಮಾಡಲಾಗುವುದು. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದು ಪರೀಕ್ಷಾ ಸಿದ್ಧತೆಯನ್ನು ಮಾಡಿಕೊಳ್ಳಲು ಹಾಗೂ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಲು ಅನುಕೂಲವಾಗುವುದು ಎಂದು ನಿರ್ದೇಶಕರು, ರಾಜ್ಯ ಶಿಕ್ಷಣ  ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪಿ.ಎಂ. ಕಿಸಾನ್ ಸಹಾಯಧನಕ್ಕೆ ‘FRUITS’ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯ
February 28, 2026
6:48 AM
by: ಮಿರರ್‌ ಡೆಸ್ಕ್
ಪುತ್ತೂರಿನಲ್ಲಿ ಫೆ.21 ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ
February 6, 2026
9:37 PM
by: ಮಿರರ್‌ ಡೆಸ್ಕ್
ಸ್ವಾವಲಂಬನೆಯ ಸಂಭ್ರಮ | ಮಂಗಳೂರಲ್ಲಿ ರಾಷ್ಟ್ರಮಟ್ಟದ ಮಹಿಳಾ ಉತ್ಪನ್ನಗಳ ಬೃಹತ್ ಮೇಳ
February 6, 2026
8:54 PM
by: ಮಿರರ್‌ ಡೆಸ್ಕ್
ದಕ್ಷಿಣ ಕನ್ನಡ ರೈತರಿಗೆ ಫೆ.20-21 ರಂದು ಕೋಳಿ ಸಾಕಾಣಿಕೆ ತರಬೇತಿ | ಮಂಗಳೂರು ಪಶುಪಾಲನಾ ಇಲಾಖೆ ಪ್ರಕಟಣೆ
February 4, 2026
7:55 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror